ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶಣದಲ್ಲಿ ಫೆ.6 ಹಾಗೂ ಫೆ.7ರಂದು ನಡೆಯಲಿರುವ ಶ್ರೀ ಸಂಸ್ಥಾನದ ವಾರ್ಷಿಕ ಉತ್ಸವವಾದ ತುಳುನಾಡ ಜಾತ್ರೆ- ಶ್ರೀ ಒಡಿಯೂರುರಥೋತ್ಸವದ ಪೂರ್ವಭಾವಿಯಾಗಿ ಡಿ.31ರಂದು ಅಪರಾಹ್ನ 2.30ಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ. ಗುರುಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಂಸ್ಥಾನದ ಕಾರ್ಯನಿರ್ವಾಹಕರ ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ಡಿ.31: ಒಡಿಯೂರು ಸಂಸ್ಥಾನದಲ್ಲಿ ತುಳುನಾಡ ಜಾತ್ರೆ- ಶ್ರೀ ಒಡಿಯೂರು ರಥೋತ್ಸವದ ಪೂರ್ವಭಾವಿ ಸಭೆ