ಕೊಡಿಯಾಲ ಕಲ್ಪಡ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನಿಂದ ಕಬಡ್ಡಿ ಆಟಗಾರ ಆಕಾಶ್ ಬಲ್ಯ ರವರ ಚಿಕಿತ್ಸೆಗಾಗಿ ನೆರವು

0

ಕಾಣಿಯೂರು: ಕಡಬದಲ್ಲಿ ನಡೆದ ಪ್ರೋ ಕಬಡ್ಡಿ ಪಂದ್ಯಾಟದಲ್ಲಿ ಕಬಡ್ಡಿ ಆಟ ಆಡುತ್ತಿದ್ದ ಸಂದರ್ಭದಲ್ಲಿ ಕಾಲರ್ ಬೋನ್ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುರುವ ಆದರ್ಶ ಸ್ಪೋರ್ಟ್ಸ್ ಕ್ಲಬ್ ಹೊಸಮಠದ ಸದಸ್ಯ ಹಾಗೂ ಕಬಡ್ಡಿ ಆಟಗಾರ ಆಕಾಶ್ ಬಲ್ಯ ಇವರ ಚಿಕಿತ್ಸೆಗಾಗಿ ‘ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್’ ಕಲ್ಪಡ, ಕೊಡಿಯಾಲ, ಕಾಣಿಯೂರು ವತಿಯಿಂದ ರೂ. 12,500 ನಗದನ್ನು ಕಡಬ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಡಬ ಅಧ್ಯಕ್ಷರಾದ ಯಾಕೂಬ್ ಹೊಸಮಠ ಮತ್ತು ಕೋಶಾಧಿಕಾರಿ ಶೇಖರ್ ದೇರಾಜೆಯವರ ಮುಖಾಂತರ ನೀಡಲಾಯಿತು.

ಈ ಸಂದರ್ಭದಲ್ಲಿ ‘ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್’ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ.ಎಂ. ಉಪಾಧ್ಯಕ್ಷರಾದ ಅಶ್ವಿನ್ ಕುಮಾರ್ ನಟ್ಟಿಹಿತ್ಲು, ಪದಾಧಿಕಾರಿಗಳಾದ ನವೀನ್ ಖಂಡಿಗ, ವಿಜೇತ್ ಮುಂಡಾಳ, ನವೀನ್ ಕೊಡೆಂಕಿರಿ, ಹರ್ಷನ್ ಕೆ.ಟಿ., ಪುರಂದರ ಕಲ್ಪಡ, ಗಣೇಶ್ ಪೆರ್ಲೊಡಿ, ಕೇಶವ ತೋಟ, ಜಯಂತ ಕಾಯರ್ತಡ್ಕ, ನಾಗರಾಜ ಕಣಿಲೆಗುಂಡಿ, ಧನುಷ್ ಬೇರ್ಯ, ದಿನೇಶ್ ಬಾಚೋಡಿ, ಜಯಂತ ಕುಂಟಿನಿ, ರಮೇಶ್ ಕಲ್ಪಡ, ಪ್ರಸಾದ್ ಮಿತ್ತಟ್ಟ, ಚಂದ್ರಶೇಖರ ಮುಂಡಾಳ, ಸತೀಶ್ ಮರಕ್ಕಡ, ಲೋಕೇಶ್ ಕಂಡೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here