ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು‌ ನಿಂದಿಸಿದ ವಾಯ್ಸ್ ಮೆಸೇಜ್ – ಪೊಲೀಸರಿಗೆ ದೂರು

0

ಪುತ್ತೂರು: ವಾಟ್ಸಾಪ್ ಗ್ರೂಪ್ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಯ್ಸ್ ಮೆಸೇಜ್‌ನ್ನು ಕಳುಹಿಸಿದ್ದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಕೈಕಾರ ಪನಡ್ಕ ನಿವಾಸಿ ಪಿ ನವೀನ್ ಕುಮಾರ್ ರೈ ಅವರು ದೂರುದಾರಾಗಿದ್ದು, ಅವರು ಪುರುಷರಕಟ್ಟೆಯ ಅವಿನಾಶ್ ಜೋಗಿ ಎಂಬವರ ವಿರುದ್ಧ ದೂರು ನೀಡಿದ್ದಾರೆ.

ಅವಿನಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ವಾಯ್ಸ್ ಮೆಸೇಜ್‌ನ್ನು ನಿರಂತರವಾಗಿ ಕಳುಹಿಸುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ವಿಚಾರದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here