ಪುತ್ತೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ಕೈವಾಡ ಆರೋಪಿಸಿ ಬಿಜೆಪಿಯಿಂದ ಪುತ್ತೂರು ಬಿಜೆಪಿ ಕಚೇರಿ ಬಳಿ ಜ.2 ರಂದು ಪ್ರತಿಭಟನೆ ನಡೆಸಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದಿಂದ ತುಂಬಿದೆ.ರಾಜ್ಯದಲ್ಲಿ ನಡೆಯುತ್ತಿರುವ ಗರ್ಭಿಣಿ ಬಾಣಂತಿಯರ ಸಾವುಗಳ ಪ್ರಕರಣ ಹೆಚ್ಚಾಗುತ್ತಿದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ಕೈವಾಡ ಇರುವ ಬಗ್ಗೆ ಡೆತ್ ನೋಟ್ ನಲ್ಲಿ ಉಲ್ಲೇಖವಿರುವುದರಿಂದ ಕೂಡಲೇ ಸಚಿವ ಪ್ರಿಯಾಂಕ ಖರ್ಗೆಯವರನ್ನು ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಪ್ರಕರಣದ ದಾಖಲಿಸಬೇಕು ಜೊತೆಗೆ ಗುತ್ತಿಗೆದಾರ ಸಚಿನ್ ಅವರ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ದಿನಂಪ್ರತಿ ಕೆಲವೊಂದು ಅಧಿಕಾರಿಗಳು ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಾಂಗ್ರೆಸ್ ಸರಕಾರದ ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದಕ್ಕೆ ಸೇರ್ಪಡೆ ಎಂಬಂತೆ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು ತನ್ನ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ನಿರಂತರ ಕಿರುಕುಳ ನೀಡಿದ್ದು, ಬಾಕಿ ಬಿಲ್ ಬಿಡುಗಡೆಗೆ ಒಂದು ಕೋಟಿ ರೂಪಾಯಿ ಹಣವನ್ನು ನೀಡುವಂತೆ ದಿನನಿತ್ಯ ಪೀಡಿಸುತ್ತಿದ್ದ ಎಂಬುದಾಗಿ ಉಲ್ಲೇಖಿಸಲಾಗಿದೆ. ಇದನ್ನೆಲ್ಲಾ ನೋಡುವಾಗ ಈ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ಸಚಿವತನದ ಪ್ರಭಾವದಿಂದಾಗಿ ಇದು ಆಗಿದೆ ಎಂದು ಕಾಣುತ್ತಿದೆ. ಈ ಕಾರಣಕ್ಕೋಸ್ಕರ ತಕ್ಷಣ ಪ್ರಿಯಾಂಕ ಖರ್ಗೆಯನ್ನು ತನ್ನ ಸಂಪುಟದಿಂದ ವಜಾಮಾಡಿ ಅವರ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿ ತನಿಖೆಗೆ ಒಳಪಡಿಸಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಅವನ ಕುಟುಂಬಕ್ಕೆ ರಕ್ಷಣೆಯನ್ನ ನೀಡಬೇಕಾದದ್ದು ಸರಕಾರದ ಜವಾಬ್ದಾರಿ ಇದನ್ನು ಸರಕಾರ ಮಾಡಬೇಕು. ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟ ಆಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಸರಕಾರ ಗಮನಹರಿಸಬೇಕು ಒಂದು ವೇಳೆ ಇದನ್ನು ಮಾಡಲು ಸಾಧ್ಯವಾಗದಿದ್ದರೆ ಕೂಡಲೇ ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದು ಒಳಿತು. ಜನಸಾಮಾನ್ಯರಿಗೆ ತೊಂದರೆಯಾದರೆ ಅವರ ಭಾವನೆಗಳಿಗೆ ಬೆಲೆ ಕೊಡುವ ನಿಟ್ಟಿನಲ್ಲಿ ಬಿಜೆಪಿ ರಸ್ತೆಗೆ ಇಳಿದು ಯಾವುದೇ ಹೋರಾಟಕ್ಕೆ ಸಿದ್ದವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ ಬಿ , ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು , ನಗರ ಮಂಡಲ ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ ,ಜಿಲ್ಲಾ ಎಸ್ಟಿ ಮೋರ್ಛ ಅಧ್ಯಕ್ಷ ಹರೀಶ್ ಬಿಜತ್ರೆ , ನೆಟ್ಟಣಿಗೆ ಮುಡ್ನೂರು ಮಹಾಶಕ್ತಿಕೇಂದ್ರ ಅಧ್ಯಕ್ಷ ರಾಜೇಶ ಪರ್ಪುಂಜ , ಒಳಮೊಗ್ರು ಶಕ್ತಿಕೇಂದ್ರ ಅಧ್ಯಕ್ಷ ಮಾದವ ರೈ ಕುಂಬ್ರ ಹಿರಿಯರಾದ ಸುರೇಶ್ ಆಳ್ವ ,ನಗರ ಮಂಡಲದ ಗೋವರ್ಧನ್ , ದರ್ಬೆ ಮಹಾಶಕ್ತಿಕೇಂದ್ರ ಅಧ್ಯಕ್ಷೆ ಶ್ರೀ ಮತಿ ದೀಕ್ಷಾ ಪೈ , ಆರ್ಯಾಪು ಮಹಾಶಕ್ತಿಕೇಂದ್ರ ಅಧ್ಯಕ್ಷ ವಿಜಯ ಬಿಎಸ್ , ಪುಣಚ ಮಹಾಶಕ್ತಿಕೇಂದ್ರದ ರಾಜೇಶ್ ಬಾಳೆಕಲ್ಲು , ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪ್ರಕಾಶ್ಚಂದ್ರ ರೈ ಕೈಕಾರ , ಉಮೇಶ್ ಗೌಡ , ವಿನೋದ್ ಕುಮಾರ್ ಶೆಟ್ಟಿ ಅರಿಯಡ್ಕ , ವಸಂತ ಕುಮಾರ್ , ರಾಜೀವಿ ರೈ , ಅಮರನಾಥ ರೈ , ಸಂತೋಷ್ ಆಳ್ವ , ಶಿವರಾಮ ಗೌಡ , ಮಲ್ಲಿಕಾ , ಶ್ರೀನಿವಾಸ ಪ್ರಸಾದ್ , ಯುವ ಮೋರ್ಛದ ಪವನ್ , ಸನ್ಮಿತ್ ರೈ , ಮಾಧ್ಯಮ ಸಂಚಾಲಕ ಮಹೇಶ್ ರೈ ಕೇರಿ ಉಪಸ್ಥಿತರಿದ್ದರು.