ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಇಕೋ ಕ್ಲಬ್ ಘಟಕ ವತಿಯಿಂದ ಮಂಗಳವಾರದಂದು ಕಾಲೇಜಿನ ಸುಜ್ಞಾನ ದೀಪಿಕಾ ಸಭಾಂಗಣದಲ್ಲಿ “ಜೇನು ಕೃಷಿ ಮತ್ತು ನಾವು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಜೇನು ಕೃಷಿಕರ ತರಬೇತುದಾರ ಮತ್ತು ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಇದರ ಶಿಕ್ಷಕ ರಾಧಾಕೃಷ್ಣ ಆರ್ ಕೋಡಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿ, ವಿಶಿಷ್ಟ ಕೃಷಿ ವಿಧಾನವಾಗಿರುವಂತಹ ಜೇನು ಕೃಷಿಯಿಂದ ಪ್ರಕೃತಿ ಮತ್ತು ಮಾನವರಿಗೆ ಆಗುವ ವಿವಿಧ ಬಗೆಯ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ.ಪಿ. ವಹಿಸಿದ್ದರು. ವೇದಿಕೆಯಲ್ಲಿ ಇಕೋ ಕ್ಲಬ್ ಘಟಕದ ಸಂಯೋಜಕರುಗಳಾದ ತಿಲಕ್ ಟಿ ಮತ್ತು ಕಾನೂನು ಉಪನ್ಯಾಸಕಿ ಆಶಿತಾ ಕೆ., ವಿದ್ಯಾರ್ಥಿ ಸಂಯೋಜಕರಾದ ಅಂತಿಮ ವರ್ಷದ ಬಿಎಲ್ಎಲ್ಬಿ ವಿದ್ಯಾರ್ಥಿ ದೀಪಕ್ ಚಾರ್ಮಾಡಿ ಮತ್ತು ಅಂತಿಮ ವರ್ಷದ ಎಲ್ಎಲ್ಬಿ ವಿದ್ಯಾರ್ಥಿ ದೀಪಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿಎಪಿ ವಿದ್ಯಾರ್ಥಿ ವಿದ್ಯಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.