ಪುತ್ತೂರು: ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಹೊನ್ಮಪ್ಪ ಪೂಜಾರಿ ಕೈಂದಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಮುಕ್ವೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಇಲಿಯಾಸ್ ಮುಕ್ವೆ, ಜೊತೆ ಕಾರ್ಯದರ್ಶಿಯಾಗಿ ಅಶೋಕ್ ರೈ , ಕೋಶಾಧಿಕಾರಿಯಾಗಿ ಸಲೀಂ ಪಾಪು ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಚಂದ್ರಶೇಖರ ಪೂಜಾರಿ, ಶಿವರಾಮ್ ಪಜಿರೋಡಿ, ಪದ್ಮಾವತಿ, ಹಸನ್ ಅಳಕೆ, ವಸಂತ ದೋಳ, ಮಂಜುನಾಥ ಶೇಕ, ಸಮದ್ ಮಾಯಂಗಳ, ರಾಘವೇಂದ್ರ ನಾಯಕ್, ವಲೇರಿಯನ್ ತೋರಸ್, ರಫೀಕ್ ಮುಕ್ವೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.