ಪುತ್ತೂರು: ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ಜಾತ್ರೋತ್ಸವ ಸಮಿತಿ ರಚಿಸಿರುವುದನ್ನು ರದ್ದುಗೊಳಿಸುವಂತೆ ಕೋರಿ ಬಡಗನ್ನೂರು ಅಣಿಲೆ ನಿವಾಸಿ ಜಯರಾಜ್ ಶೆಟ್ಟಿ ಎಂಬವರು ನೀಡಿದ ಮನವಿ ಹಿನ್ನಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ಜಾತ್ರೋತ್ಸವ ಸಮಿತಿಯನ್ನು ರದ್ದುಗೊಳಿಸಿ ಆಡಳಿತಾಧಿಕಾರಿ ಜವಾಬ್ದಾರಿಯಲ್ಲೇ ನೇಮೋತ್ಸವ ನಡೆಸುವಂತೆ ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ಆಡಳಿತಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.
ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನ ಪಡುಮಲೆ ಪುತ್ತೂರು ತಾಲೂಕು ಇಲ್ಲಿನ ನೇಮೋತ್ಸವ ಸಮಿತಿ ಅಧ್ಯಕ್ಷ ರವಿರಾಜ್ ರೈ ಸಜಂಕಾಡಿ, ಕಾರ್ಯದರ್ಶಿ ಜನಾರ್ಧನ ಪೂಜಾರಿ ಪದಡ್ಯ, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ, ಎಂಬ ಶಿರೋನಾಮೆಯಲ್ಲಿ ವಿಚಾರ ಪ್ರಕಟವಾಗಿದ್ದು, ಪ್ರಸ್ತುತ ದೇವಸ್ಥಾನದಲ್ಲಿ ಆಡಳಿತಾಧಿಕಾರಿ ಇದ್ದು, ಅವರ ಗಮನಕ್ಕೆ ತಾರದೆ ಭಕ್ತಾದಿಗಳ ಸಭೆ ಕರೆಯದೇ ರಚಿಸಿರುವ ನೇಮೋತ್ಸವ ಸಮಿತಿಯನ್ನು ರದ್ದುಮಾಡಿ ಸೂಕ್ತಕಾನೂನು ಕ್ರಮ ಜರುಗಿಸುವಂತೆ ಬಡಗನ್ನೂರು ಅಣಿಲೆ ನಿವಾಸಿ ಜಯರಾಜ್ ಶೆಟ್ಟಿ ಎಂಬವರು ತಿಳಿಸಿರುತ್ತಾರೆ. ಈ ಮನವಿಯನ್ನು ಉಲ್ಲೇಖಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ದೇವಸ್ಥಾನಕ್ಕೆ ಸಂಬಂಧಪಟ್ಟ ಜಾತ್ರೋತ್ಸವ ಕಾರ್ಯಕ್ರಮವನ್ನು ಆಡಳಿತಾಧಿಕಾರಿ ನೇತೃತ್ವದಲ್ಲಿ ನಡೆಸುವಂತೆ ಸೂಚಿಸುತ್ತಾರೆ.