ಪುತ್ತೂರು:ಬನ್ನೂರು ಗ್ರಾಮದ ನೆಕ್ಕಿಲದಲ್ಲಿ ಸಾರ್ವಜನಿಕರು ಹಾದು ಹೋಗುವ ಮಾರ್ಗ ಮಧ್ಯೆ ಅಕ್ರಮವಾಗಿ ಕೊಳವೆ ಬಾವಿಯನ್ನು ತೋಡಿರುವ ಕುರಿತು ನಗರಸಭೆಗೆ ದೂರು ನೀಡಿದ್ದಾರೆ.
ನಮ್ಮ ಕೃಷಿ ಜಾಗದ ಮಧ್ಯೆ 20 ಲಿಂಕ್ಸ್ ಸಾರ್ವಜನಿಕರು ಹಾದು ಹೋಗಲು ದಾಖಲೆ ಪ್ರಕಾರ ಮಾರ್ಗ ಊರ್ಜಿತದಲ್ಲಿದೆ.ಆದರೆ ಡಿ.21ರಂದು ತಡ ರಾತ್ರಿ ನಾವು ಇಲ್ಲದ ಸಮಯ ಊರ್ಜಿತದಲ್ಲಿರುವ ಮಾರ್ಗದ ಮಧ್ಯೆ ಸೂರಪ್ಪ ಗೌಡ ಎಂಬವರು ಕೊಳವೆ ಬಾವಿಯನ್ನು ನಿರ್ಮಿಸಿರುವುದು ಗಮನಕ್ಕೆ ಬಂದಿದೆ.
ಈ ಕುರಿತು ನಗರಸಭೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನೆಕ್ಕಿಲ ನಿವಾಸಿ ಗೀತಾ ಪಿ ಶೆಟ್ಟಿ ಮತ್ತು ಯಾದವ ಗೌಡ ಕಡಮದಗುರಿ ಅವರು ನಗರಸಭೆಗೆ ದೂರು ನೀಡಿದ್ದಾರೆ.