ಪುತ್ತೂರು: ಫೆ.7 ಮತ್ತು 8 ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಜ.2 ರಂದು ಪೂರ್ವಾಹ್ನ ದೇವಾಲಯದಲ್ಲಿ ಜರಗಿತು.
ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡಿಕಿಲ್ಲಾಯರವರು ಪೂಜಾ ವಿಧಿವಿಧಾನವನ್ನು ನೆರವೇರಿಸಿದರು. ಅರ್ಚಕ ನಾರಾಯಣ ಬಡಿಕಿಲ್ಲಾಯ ಸಹಕರಿಸಿದರು.
ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಕಾರ್ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ಸುಣ್ಣಾಜೆ, ನಿಕಟಪೂರ್ವ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಕಾರ್‍ಯದರ್ಶಿ ರಾಘವ ಗೌಡ ಸವಣೂರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಸವಣೂರು ಗ್ರಾ.ಪಂ, ಸದಸ್ಯೆ ಚಂದ್ರಾವತಿ ಸುಣ್ಣಾಜೆ, ಮಮತಾ ಜಿ. ಬಡಿಕಿಲ್ಲಾಯ, ಜಾತ್ರೋತ್ಸವ ಸಮಿತಿಯ ಉಪಾಧ್ಯಕ್ಷ ವಿಠಲ ರೈ ನೆಕ್ಕರೆ, ವೆಂಕಪ್ಪ ಗೌಡ ಅಡೀಲು, ದಾಮೋದರ ಗೌಡ ಪಟ್ಟೆ, ರುಕ್ಮಯ್ಯ ಗೌಡ ಹೊಸವೊಕ್ಲು, ವಿಶ್ವನಾಥ ಗೌಡ ನೆಕ್ಕರೆ, ಶಿವಪ್ಪ ನಾಯ್ಕ, ಹರೀಶ್ ಸುಣ್ಣಾಜೆ, ದಿವಾಕರ್ ಬಸ್ತಿ, ಭಾಸ್ಕರ್ ಮಾಲೆತ್ತಾರು, ಧರ್ಮಪಾಲ ಗೌಡ ನೆಕ್ಕರೆ, ಜಯರಾಮ ರೈ ಮೂಡಂಬೈಲು, ರೋಶನ್ ಮಾಲೆತ್ತಾರು, ಕಾರ್ತಿಕ್ ಬಡಿಕಿಲ್ಲಾಯ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.