ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಿ-ಬಿ.ಎಂ ಭಾರತಿ
ಪುತ್ತೂರು:ವ್ಯಕ್ತಿಯು ಕೋಟಿಗಟ್ಟಲೇ ಹಣ ಸಂಪಾದಿಸಿದರೆ ದೇವರು ಮೆಚ್ಚುವುದಿಲ್ಲ, ಬದಲಾಗಿ ಸಮಾಜದ ಅಭಿವೃದ್ಧಿಗೆ, ಅಶಕ್ತರಿಗೆ, ದೀನ ದಲಿತರ ಕಣ್ಣೀರೊರೆಸುವ ಕೈಂಕರ್ಯ ಮಾಡಿದಾಗ ದೇವರು ಮೆಚ್ಚುವುದರೊಂದಿಗೆ ಆಶೀರ್ವದಿಸುತ್ತಾನೆ. ಆದ್ದರಿಂದ ತಮ್ಮ ತ್ಯಾಗಮಯಿ ಜೀವನದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಿ ಎಂದು ಅಂತರರಾಷ್ಟ್ರೀಯ ಲಯನ್ಸ್ ಇದರ ಜಿಲ್ಲಾ ಗವರ್ನರ್ ಬಿ.ಎಂ ಭಾರತಿ ಪಿಎಂಜೆಎಫ್ ಹೇಳಿದರು.
ಜ.2 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ಜರಗಿದ ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ, ರೀಜ್ಹನ್ 6, ವಲಯ 1&2ರ ಲಯನ್ಸ್ ಕ್ಲಬ್ ಪುತ್ತೂರು ಕಾವು, ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಲಯನ್ಸ್ ಕ್ಲಬ್ ಅಲಂಕಾರು ದುರ್ಗಾಂಬಾ, ಲಿಯೋ ಕ್ಲಬ್ ಪುತ್ತೂರ್ದ ಮುತ್ತು, ಲಿಯೋ ಕ್ಲಬ್ ಶ್ರೀ ರಾಮಕೃಷ್ಣ ಸಂಸ್ಥೆಗೆ ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಕ್ಲಬ್‌ಗಳ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಲಯನ್ಸ್ ನಿಕಟಪೂರ್ವ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜ ಮಾತನಾಡಿ, ಆರು ಕ್ಲಬ್‌ಗಳು ಜೊತೆಗೂಡಿ ವರ್ಷದ ಪ್ರಥಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಜಿಲ್ಲಾ ಗವರ್ನರ್‌ರವರು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಪುತ್ತೂರಿನಲ್ಲಿರುವ ಲಯನ್ಸ್ ಕ್ಲಬ್‌ಗಳು ಸಣ್ಣ ಕ್ಲಬ್‌ಗಳಾದರೂ ಸೇವೆಯ ವಿಚಾರದಲ್ಲಿ ಮುಂದೆ ಇದ್ದೀರಿ ಎಂದರು.
ಲಯನ್ಸ್ ಜಿಲ್ಲಾ ಪ್ರಥಮ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಮಾತನಾಡಿ, ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಕ್ಲಬ್‌ಗಳನ್ನು ನಡೆಸಿಕೊಂಡು ಬರುವುದು ಅಷ್ಟು ಸುಲಭವಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಈ ಭಾಗದಲ್ಲಿ ನಾಲ್ಕು ಮಂದಿ ಪ್ರಾಂತ್ಯ ಅಧ್ಯಕ್ಷರಾಗಿರುವುದು ಶ್ಲಾಘನೀಯ. ಕಾವು ಹೇಮನಾಥ ಶೆಟ್ಟಿರವರ ಮುಂದಾಳತ್ವದಲ್ಲಿ ಲಯನ್ಸ್ ಕ್ಲಬ್‌ಗಳ ಉದಯವಾಗಿರುವುದು ಹೆಮ್ಮೆ ತಂದಿದೆ ಎಂದರು.
ಪುತ್ತೂರ್ದ ಮುತ್ತುಗೆ ಸದಸ್ಯರ ಸೇರ್ಪಡೆ:
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಸಂಸ್ಥೆಗೆ ಗಣೇಶ್ ಕಾಮತ್‌ರವರ ಪತ್ನಿ, ನಿವೃತ್ತ ಮುಖ್ಯ ಶಿಕ್ಷಕಿ ಅನಸೂಯ ಬಾ, ಶೇರು ಮಾರುಕಟ್ಟೆ ಉದ್ಯಮಿ ಸುಪ್ರೀತ್ ಕಣ್ಣಾರಾಯ ಮುಂಡೂರುರವರುಗಳನ್ನು ಸೇರ್ಪಡೆಗೊಳಿಸಲಾಯಿತು. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷೆ ವೇದಾವತಿ ಎ, ನಿಕಟಪೂರ್ವ ಅಧ್ಯಕ್ಷ ರವೀಂದ್ರ ಪೈರವರು ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಪಾವನರಾಮ್, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ಲಯನ್ಸ್ ವಲಯ ಒಂದರ ವಲಯಾಧ್ಯಕ್ಷ ದಯಾನಂದ ರೈ ಮನವಳಿಕೆ, ನಿಕಟಪೂರ್ವ ಪ್ರಾಂತ್ಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಲಿಯೋ ಕ್ಲಬ್ ಅಧ್ಯಕ್ಷ ಲ್ಯಾನ್ಸನ್ ಮಸ್ಕರೇನ್ಹಸ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಜಗನ್ನಾಥ್ ರೈ ಗುತ್ತುರವರು ಸ್ವಾಗತಿಸಿ, ಲಯನ್ಸ್ ಆಲಂಕಾರು-ದುರ್ಗಾಂಬಾ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಲಯನ್ಸ್ ಪ್ರಾರ್ಥನೆಯನ್ನು ಅಮ್ಮು ರೈ, ಧ್ವಜವಂದನೆಯನ್ನು ಪ್ರತಿಮಾ ರೈ, ನೀತಿ ಸಂಹಿತೆಯನ್ನು ರವಿಪ್ರಸಾದ್ ಶೆಟ್ಟಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಅಗಲಿದವರಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಪದ್ಮಪ್ರಸಾದ್ ಜೈನ್‌ರವರು ಜಿಲ್ಲಾ ಗವರ್ನರ್‌ರವರನ್ನು ಸಭೆಗೆ ಪರಿಚಯಿಸಿದರು. ಜಿಲ್ಲಾ ಗವರ್ನರ್‌ರವರ ಸನ್ಮಾನ ಪತ್ರವನ್ನು ರಮೇಶ್ ರೈ ಸಾಂತ್ಯ ವಾಚಿಸಿದರು. ಜಿಲ್ಲಾ ಗವರ್ನರ್ ಜಂಟಿ ಸಂಯೋಜಕಿ ಡಾ.ರಂಜಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ..
ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ ಭಾರತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇದಾವತಿ ಎ.ರವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸೇವಾ ಚಟುವಟಿಕೆಗಳು..
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ವತಿಯಿಂದ ಮುಂಡೂರು ಗ್ರಾಮದ ಕಂಪ ನಿವಾಸಿಯೊಬ್ಬರಿಗೆ ವೀಲ್‌ಚೇರ್, ಪದ್ಮಾವತಿ ಮುಂಡೂರಿರವರಿಗೆ ವಾಕರ್, ಸಾಮೆತ್ತಡ್ಕ ಶಾಲೆಗೆ ಸ್ಟೀಲ್ ಕಬಾಟ್, ಸಾಲ್ಮರ ಶಾಲೆಗೆ ಸ್ಟೀಲ್ ಟೇಬಲ್, ಮುಂಡೂರು ಶಾಲೆಯ ಇಕೋ ಕ್ಲಬ್‌ಗೆ ಕಾರ್ಯದರ್ಶಿ ಭಾಗ್ಯೇಶ್ ರೈ ಪ್ರಾಯೋಜಕತ್ವದಲ್ಲಿ ಧನಸಹಾಯವನ್ನು ಜಿಲ್ಲಾ ಗವರ್ನರ್ ಬಿ.ಎಂ ಭಾರತಿರವರು ಹಸ್ತಾಂತರಿಸಿದರು.
ಎಂಜೆಎಫ್ ಪದವಿ..
ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರಿಗೆ ಎಂಜೆಎಫ್ ಪದವಿ(ರೂ.85 ಸಾವಿರ ಮೊತ್ತ)ಯ ರೂ.2 ಸಾವಿರ ಕೂಪನ್ ಡ್ರಾ ಹಮ್ಮಿಕೊಳ್ಳಲಾಗಿದ್ದು, ಈ ಕೂಪನ್ ಡ್ರಾದಲ್ಲಿ ಮಂಗಳೂರಿನ ಅನಿಲ್ ಕುಮಾರ್‌ರವರು ವಿಜೇತರಾಗಿ ಎಂಜೆಎಫ್ ಪದವಿಗೆ ಭಾಜನರಾದರು.