ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಜ.2 ರಂದು ಕ್ಲಬ್ ಸದಸ್ಯರಾದ ವಿಜಯ್ ವಿಲ್ಪ್ರೆಡ್ ಡಿಸೋಜರವರ ಮುರ ಇಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯನ್ನು ಕ್ಲಬ್ ಅಧ್ಯಕ್ಷರಾದ ಸುರೇಶ್ ಪಿ ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಕೊಂಕಣಿ ಸಾಹಿತಿ ಫ್ಲಾವಿಯಾ ಅಲ್ಬುಕರ್ಕ್ ರವರು ಕ್ರಿಸ್ಮಸ್ ಹಬ್ಬದ ವಿಶೇಷತೆಯ ಕುರಿತು ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿ, ರೋಟರಿ ಕ್ಲಬ್ ಪುತ್ತೂರು ಪೂರ್ವಾಧ್ಯಕ್ಷ ಕೆ. ಕೃಷ್ಣಪ್ರಸಾದ್ ರೈ ಹಾಗೂ ರೋಟರಿ ಸ್ವರ್ಣದ ಪೂರ್ವಾಧ್ಯಕ್ಷ ಸುಂದರ್ ರೈ ಬಲ್ಕಾಡಿರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕೃಮದ ಆದ್ಯಕ್ಷತೆಯನ್ನು ವಹಿಸಿದ ಸುರೇಶ್ ಪಿ ಇವರು ಮಾತನಾಡುತ್ತಾ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಏಸು ಪ್ರಭುವಿನ ಸಂದೇಶದ ಅಗತ್ಯತೆ ಇಂದಿನ ಜಗತ್ತಿಗೆ ಇದೆ ಎಂದು ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯವನ್ನು ತಿಳಿಸಿದರು. ಕ್ಲಬ್ ಕಾರ್ಯದರ್ಶಿ ಸೆನೋರಿಟಾ ಆನಂದ್ ವರದಿ ಮಂಡಿಸಿದರು.
ಕು.ವೆನಿಷಾ ಡಿ ಸೋಜ ಪ್ರಾರ್ಥಿಸಿದರು. ಕ್ರಿಸ್ಮಸ್ ಹಾಡುಗಳನ್ನು ದಿವ್ಯಾ, ಪ್ರೀತಿ, ಅರಲ್, ವಿಜಯ್ ಡಿಸೋಜ ಹಾಡಿದರು. ಶ್ರೀಮತಿ ಸುಶ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸ್ವರ್ಣ ಪೂರ್ವಾಧ್ಯಕ್ಷ ಭಾಸ್ಕರ್ ಕೊಡಿಂಬಾಳ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಂತಾಕ್ಲಾಸ್ ವೇಷಧಾರಿ ಬ್ಯಾಪಿಸ್ಟ್ ರೋಡ್ರಿಗಸ್ ಇವರು ಮಕ್ಕಳನ್ನು ರಂಜಿಸಿದರು.