ಬೋಳಂತೂರಿನಲ್ಲಿ ನಡೆದ ಘಟನೆ - ಪೊಲೀಸರಿಂದ ತನಿಖೆ ಚುರುಕು
ವಿಟ್ಲ: ಈಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ತಂಡವೊಂದು ಬೀಡಿ ಉದ್ಯಮಿಯೋರ್ವರ ಮನೆಯಿಂದ ಸುಮಾರು 25ಲಕ್ಷ ರೂಪಾಯಿಗೂ ಮಿಕ್ಕಿದ ಹಣವನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಎಂಬಲ್ಲಿ ನಡೆದಿದೆ
ಬಂಟ್ವಾಳ ತಾಲೂಕಿನ ಬೋಳಂತರು ನಿವಾಸಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ರವರ ಮನೆಯಲ್ಲಿ ದರೋಡೆ ಕೃತ್ಯ ನಡೆದಿದೆ.
ಜ.3ರಂದು ರಾತ್ರಿ 8 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ತಂಡವೊಂದು ನಾವು ಈಡಿ ಅಧಿಕಾರಿಗಳೆಂದು ಹೇಳಿ ಮನೆಯವರನ್ನು ನಂಬಿಸಿ ಬಳಿಕ ಹಣವನ್ನು ದೋಚಿ 10.30ರ ಸುಮಾರಿಗೆ ಪರಾರಿಯಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.