ಬಂಟ್ವಾಳ: ಪೆರಾಜೆ ಗ್ರಾಮದ ಅರಸುದೈವ ಗುಡ್ಡ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳ ಮತ್ತು ಜುಮಾದಿ ಬಂಟ ದೈವಗಳ ಪೆರಾಜೆಗುತ್ತು ಚಾವಡಿಯ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ನಿಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ದೈವಗಳ ಬಾಲಾಲಯ ಪ್ರತಿಷ್ಠೆ ಮತ್ತು ಗ್ರಾಮಸ್ಥರ ಕರಸೇವೆ ನಡೆಯಿತು.
ಈ ಸಂದರ್ಭದಲ್ಲಿ ಪೆರಾಜೆ ಗುತ್ತು ಮನೆತನದವರು, ಮಾಣಿ, ಅನಂತಾಡಿ ಗ್ರಾಮದ ಮುಖಂಡರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು, ವಿವಿಧ ಸಮಿತಿಯ ಸದಸ್ಯರು ಮತ್ತು ದೈವ ಚಾಕಿರಿಯವರು ಹಾಗೂ ದೈವಸ್ಥಾನಕ್ಕೆ ಸಂಬಂಧ ಪಟ್ಟ ಮನೆತನದವರು, ಊರ ಪ್ರಮುಖರು, ಪೆರಾಜೆ ಗ್ರಾಮಸ್ಥರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಪೆರಾಜೆ ಗುತ್ತು ಪದ್ಮಾವತಿ ಆಳ್ವರವರ ನೇತೃತ್ವದಲ್ಲಿ ನೂತನ ಭಂಡಾರದ ಚಾವಡಿಯ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಾಯಿತು.