- ವ್ಯವಹಾರದಲ್ಲಿ ಪಾರದರ್ಶಕತೆ ಇಟ್ಟುಕೊಂಡಿದ್ದರು-ಬಲರಾಮ ಆಚಾರ್ಯ
- ಟಚ್ ಆಂಡ್ ಫೀಲ್ ಅನುಭವ ಕೊಟ್ಟಿದ್ದಾರೆ-ಕೃಷ್ಣನಾರಾಯಣ ಮುಳಿಯ
- ಬೆಳೆಯುತ್ತಿರುವ ಪುತ್ತೂರಿಗೆ ಇನ್ನೊಂದು ಗರಿ-ವಿಶ್ವಾಸ್ ಶೆಣೈ
- ಪರಿಶ್ರಮ, ವಿಶ್ವಾಸಾರ್ಹತೆಯಿಂದ ಅಭಿವೃದ್ಧಿ-ಜಯಂತ ನಡುಬೈಲು
- ಮಿಂಚುವಿನ ಶಕ್ತಿಯಂತೆ ಮಿಂಚ್ ಬೆಳೆಯಲಿ-ಗೋಪಾಲಕೃಷ್ಣ ಭಟ್
- ಇತರ ನಗರಗಳಲ್ಲಿಯೂ ನಿಮ್ಮ ಉದ್ಯಮ ಬೆಳೆಯಲಿ-ಮಹೇಶ್ ಶೆಟ್ಟಿ
ಪುತ್ತೂರು: 1997ರಲ್ಲಿ ಆರಂಭಗೊಂಡು ಪುತ್ತೂರು ಹಾಗೂ ಸುತ್ತಮುತ್ತಲಿನ ಜನತೆಗೆ ಅತ್ಯುತ್ತಮ ಸೇವೆ ಒದಗಿಸುತ್ತಾ ಬಂದಿರುವ ಮೈತ್ರಿ ಇಲೆಕ್ಟ್ರಿಕ್ ಕಂಪೆನಿಯಲ್ಲಿ ಗೃಹಬಳಕೆಯ ಡೆಕೊರೇಟಿವ್ ಲೈಟಿಂಗ್ ಮತ್ತು ಲ್ಯುಮಿನರೀಸ್ ಅಲಂಕಾರಿಕ ವಿದ್ಯುತ್ ದೀಪಗಳ ಮಾರಾಟ ವಿಭಾಗ ಮಿಂಚ್ ದ ಲ್ಯುಮಿನರೀಸ್ ಜ.3ರಂದು ಶುಭಾರಂಭಗೊಂಡಿತು.
ಪುತ್ತೂರು ಜಿ.ಎಲ್. ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ದೀಪ ಬೆಳಗಿಸಿದರು. ಬಳಿಕ ಎಲ್ಲಾ ಗಣ್ಯರು ವಿದ್ಯುತ್ ದೀಪಗಳ ಸ್ವಿಚ್ ಆನ್ ಮಾಡಿ ಶೋರೂಮ್ ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಜಿ.ಎಲ್.ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ ಅವರ ವ್ಯವಹಾರದಲ್ಲಿ ಪಾರದರ್ಶಕತೆ ಇಟ್ಟುಕೊಳ್ಳುತ್ತಿದ್ದರು. ಅವರು ನೀಡುವ ಉತ್ಪನ್ನಗಳ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ತಿಳಿಸುತ್ತಿದ್ದರು. ಇದು ಅವರ ಯಶಸ್ಸಿಗೆ ಮುಖ್ಯ ಕಾರಣ. ಮಾರುಕಟ್ಟೆಯ ಮಿಡಿತ ಚೆನ್ನಾಗಿ ತಿಳಿದು ಗ್ರಾಹಕರಿಗೆ ಬೇಕಾದ ರೀತಿಯ ಉತ್ಪನ್ನಗಳ ಪೂರೈಕೆ ಮಾಡುತ್ತಿದ್ದರು. ಡೆಕೋರೇಟಿವ್ ಲೈಟಿಂಗ್‌ಗಳಿಗೆ ಉತ್ತಮ ಬೇಡಿಕೆ ಇದೆ ಪುತ್ತೂರಿನಲ್ಲಿ. ಆಧುನಿಕ ಯುಗದಲ್ಲಿ ಫ್ಯಾಮಿಲಿ ಸಮೇತ ಬಂದು ಖರೀದಿಸುವ ಫ್ಯಾಶನ್ ಇದೆ. ಈ ಸಂಸ್ಥೆ ಯಶಸ್ಸು ಹೊಂದಲಿ, ಪುತ್ತೂರಿನ ಹೆಮ್ಮೆಯಾಗಲಿ ಎಂದರು.
ಪುತ್ತೂರು ಶ್ಯಾಮ್ ಜ್ಯುವೆಲ್ಸ್ ಗ್ರೂಪ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ ನಾನು ಮತ್ತು ರವಿನಾರಾಯಣರವರು ಪರಸ್ಪರ ಗ್ರಾಹಕರು ಅಲ್ಲದೆ ಸಹಕಾರದಲ್ಲಿ ಇದ್ದೇವೆ. ಇಲ್ಲಿ ಬಂದರೆ ಟಚ್ ಆಂಡ್ ಫೀಲ್ ಸಿಗುತ್ತದೆ. ಅದನ್ನು ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಹಕರಿಗೆ ಇರುವ ಎಮೋಷನಲ್ ಫೀಲಿಂಗ್ ಅರ್ಥ ಮಾಡಿ ಸೇವೆ ನೀಡುತ್ತಿದ್ದರು. ಉದ್ಯಮದಲ್ಲಿ ಎತ್ತರಕ್ಕೆ ಏರಿದ ಹಾಗೆ ಕಟ್ಟಡದಲ್ಲಿಯೂ ಮಹಡಿ ಏರಿಸಿದ್ದಾರೆ. ಮುಂದಿನ ದಿನಗಳಲ್ಲಿ ಪುತ್ತೂರಿನ ಮುಖ್ಯರಸ್ತೆಯಲ್ಲಿಯೂ ಅವರ ಬೃಹತ್ ಶೋರೂಮ್ ಬರಲಿ ಎಂದು ಹೇಳಿ ಶುಭಹಾರೈಸಿದರು.
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಕಳೆದ 2 ದಶಕಗಳಿಂದಲೂ ಸೇವೆ ನೀಡುತ್ತಿರುವ ಮೈತ್ರಿ ಇಲೆಕ್ಟ್ರಿಕ್ ಸಂಸ್ಥೆಯ ನೂತನ ವಿಭಾಗ ಬೆಳೆಯುತ್ತಿರುವ ಪುತ್ತೂರಿಗೆ ಇನ್ನೊಂದು ಗರಿಯಾಗಿದೆ. ಅವರು ಉದ್ಯಮ ಅಲ್ಲದೆ ಸಮಾಜಕ್ಕೆ ಬೇಕಾದ ವಿವಿಧ ಕಾರ್ಯಗಳನ್ನು ಮಾಡುತ್ತಾ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ನೂತನ ಸಂಸ್ಥೆಗೆ ಶ್ರೇಯಸ್ಸು ಅಭಿವೃದ್ಧಿ ಸಿಗಲಿ ಎಂದು ಹಾರೈಸಿದರು.
ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ ನಾನು ಕಳೆದ 20 ವರ್ಷಗಳಿಂದ ನಾನು ಮೈತ್ರಿ ಇಲೆಕ್ಟ್ರಿಕ್ ಸಂಸ್ಥೆಯ ಗ್ರಾಹಕನಾಗಿದ್ದೇನೆ. ಈಗಿನ ಕಾಲಘಟ್ಟದಲ್ಲಿ ಮನೆಗಳಿಗೆ ಬೇಕಾದ ಅಗತ್ಯ ಸೌಲಭ್ಯಗಳ ಮಾರಾಟ ಸೇವೆ ಮಾಡುತ್ತಿದ್ದಾರೆ. ಅವರ ಪರಿಶ್ರಮ, ವಿಶ್ವಾಸಾರ್ಹತೆಯಿಂದ ಅಭಿವೃದ್ಧಿ ಹೊಂದಿದ್ದಾರೆ. ಗ್ರಾಹಕರಿಗೆ ಯಾವ ಉತ್ಪನ್ನ ಬೇಕಾದರೂ ಪೂರೈಕೆ ಮಾಡುತ್ತಿದ್ದರು. ಅವರ ನೂತನ ಪ್ರಯತ್ನ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ದ್ವಾರಕಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಮಾತನಾಡಿ 28 ವರ್ಷಗಳಿಂದ ಸಂಸ್ಥೆ ಬೆಳೆಯಲು ಅದರ ಹಿಂದೆ ಬಹಳಷ್ಟು ಶ್ರಮ ಇರುತ್ತದೆ. ಇಲೆಕ್ಟ್ರಿಕಲ್‌ನ ಬ್ರಾಂಡೆಡ್ ಐಟಂಗಳನ್ನು ಪೂರೈಸಿಕೊಂಡು ಇಂದು ಪುತ್ತೂರಿನಲ್ಲಿ ಇಲೆಕ್ಟ್ರಿಕಲ್ ಐಟಂಗಳ ಮಾರಾಟ ಮತ್ತು ಸೇವೆಯಲ್ಲಿ ಬ್ರಾಂಡ್ ಆಗಿ ಬೆಳೆದಿದ್ದಾರೆ. ಅವರ ನೂತನ ವಿಭಾಗ ಮಿಂಚ್ ಇದಕ್ಕೆ ಕಿರೀಟವಿಟ್ಟ ಹಾಗೆ ಆಗಿದೆ. ಮಿಂಚ್‌ಗೆ ಬಹಳ ಶಕ್ತಿ ಇದೆ. ಮಿಂಚ್ ಉದ್ಯಮ ಮಿಂಚ್‌ನ ಶಕ್ತಿಯಿಂದ ಬೆಳೆಯಲಿ ಅದು ಮಿಂಚಿನ ಬೆಳಕು ಕೊಡಲಿ ಎಂದು ಶುಭ ಹಾರೈಸಿದರು.
ಮಾಣಿ ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ. ಮಾತನಾಡಿ ದೊಡ್ಡ ಕಂಪೆನಿಗಳು ಲೋಗೋ ಮೂಲಕ ಬ್ರಾಂಡ್ ಮಾಡುತ್ತಿದ್ದರು. ಲೋಗೋ ಯಾಕೆ ಬೇಕು ಅಂದರೆ ಆ ಲೋಗೋದಿಂದ ಸಂಸ್ಥೆ ಬೆಳೆಯಲು ಕಾರಣವಾಗುತ್ತದೆ. ಹಿಂದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಂಪೆನಿಗಳಲ್ಲಿ ಲೋಗೋ ಇತ್ತು. ಈಗ ಪುತ್ತೂರಿನಂತಹ ನಗರದಲ್ಲಿಯೂ ಲೋಗೋ, ಬ್ರಾಂಡ್ ಬೆಳೆಯುತ್ತಿದೆ. ಆನ್‌ಲೈನ್ ಕಂಪೆನಿಯೊಂದಿಗೆ ಬೆಳೆಯಲು ಲೋಗೋ ಬೇಕು. ಲೋಗೋ ಗ್ರಾಹಕರ ಮನಸ್ಸಿನಲ್ಲಿ ಉಳಿದರೆ ಸಂಸ್ಥೆಯು ಗ್ರಾಹಕರ ಮನಸ್ಸಿನಲ್ಲಿ ಉಳಿಯುತ್ತದೆ. ಯುವ ಉದ್ಯಮಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಗುಣ ಅವರಲ್ಲಿದೆ. ನಿಮ್ಮ ಶೋರೂಮ್ ಪುತ್ತೂರು ಅಲ್ಲದೆ ಇತರ ನಗರಗಳಲ್ಲಿಯೂ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಹವೆಲ್ಸ್ ಸಂಸ್ಥೆಯ ಏರಿಯಾ ಮ್ಯಾನೇಜರ್ ಮುತ್ತು, ಗ್ರೇಟ್‌ವೆಲ್ಟಾ ಕಂಪೆನಿಯ ಏರಿಯಾ ಮ್ಯಾನೇಜರ್ ಶರತ್ ಮತ್ತು ದಿನೇಶ್, ಅಟೋಂಬರ‍್ಗ್ ಕಂಪೆನಿಯ ಅರವಿಂದರವರು ಮಾತನಾಡಿ ಶುಭಹಾರೈಸಿದರು.
ಗೌರವಾರ್ಪಣೆ:
ಮಿಂಚ್ ಶೋರೂಮ್‌ನ ನಿರ್ಮಾಣದ ವ್ಯವಸ್ಥೆಯಲ್ಲಿ ಹಲವು ರೀತಿಯ ಕಾರ್ಯನಿರ್ವಹಿಸಿದವರನ್ನು ಗೌರವಿಸಲಾಯಿತು. ನೂತನ ವಿಭಾಗ ಮಿಂಚ್ ಲ್ಯುಮಿನರೀಸ್‌ನ ಲೋಗೋ ಡಿಸೈನ್ ಮಾಡಿದ ರಾಮಪ್ರಸಾದ್, ಸುಮಂತ್ ಆಚಾರ್ಯ ಹಾಗೂ ಶೋರೂಮ್‌ನಲ್ಲಿ ಲೈಟಿಂಗ್ ಅಳವಡಿಕೆಯಲ್ಲಿ ಕಾರ್ಯನಿರ್ವಹಿಸಿದ ಜನನಿ ಇಲೆಕ್ಟ್ರಿಕಲ್ಸ್‌ನ ಜಯರಾಮ ಮತ್ತು ತೇಜಸ್‌ರವರನ್ನು ಗೌರವಿಸಲಾಯಿತು.
ಮೈತ್ರಿ ಇಲೆಕ್ಟ್ರಕಲ್ ಕಂಪೆನಿಯ ಮಾಲಕ ರವಿನಾರಾಯಣ ಮಿಂಚ್ ಶೋರೂಮ್‌ನಲ್ಲಿ ಲಭ್ಯವಿರುವ ಆಲಂಕಾರಿಕ ವಿದ್ಯುತ್ ದೀಪಗಳ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು. ಮೈತ್ರಿ ಇಲೆಕ್ಟ್ರಿಕಲ್ ಸಂಸ್ಥೆಯ ಸಿಬಂದಿಗಳನ್ನು ಗೌರವಿಸಲಾಯಿತು. ಸಿರಿ ಪ್ರಾರ್ಥಿಸಿದರು. ಶರವಾತಿ ರವಿನಾರಾಯಣ ವಂದಿಸಿದರು. ಜೇಸಿ ಕೃಷ್ಣಮೋಹನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಖಂಡ ಬಂಗಾರಡ್ಕ ವಿಶ್ವೇಶ್ವರ ಭಟ್, ಎಂ.ಎಸ್. ಭಟ್, ಸಂತೋಷ್ ಬೋನಂತಾಯ, ವಿ ವಾಕ್ ಸಂಸ್ಥೆಯ ಇಂದು ಶೇಖರ್, ವಸಂತಿ ಭಟ್, ಗಂಗ ಪಟಿಕಲ್, ಶಿವಕುಮಾರ್ ಹಿಳ್ಳೆಮನೆ, ಡಾ.ಸಹನಾ, ಅಶ್ವಿನಿಕೃಷ್ಣ, ಕೃಷ್ಣವೇಣಿ ಮುಳಿಯ, ಪ್ರಭಾವತಿ, ಮಾಲಿನಿ, ಶಿವಪ್ರಸಾದ್ ಇ., ಸೇರಿದಂತೆ ಹಲವು ಉಪಸ್ಥಿತರಿದ್ದರು. ಮಾಲಕರ ತಂದೆ ಗಣೇಶ್ ಭಟ್ ಮಾಪನಮಜಲು, ತಾಯಿ ಸುಶೀಲಾ ಜಿ.ಭಟ್, ಸಹೋದರ ಸತ್ಯಶಂಕರ ಶರ್ಮ, ಪ್ರಣವ್ ಎಂ.ಭಟ್, ಪ್ರಮಥ ಎಂ.ಭಟ್ ಅತಿಥಿಗಳನ್ನು ಸತ್ಕರಿಸಿದರು. ಮೈತ್ರಿ ಇಲೆಕ್ಟ್ರಿಕಲ್‌ನ ಮ್ಯಾನೇಜರ್ ಉರ್ಬನ್ ಡಿಸೋಜ, ಸಿಬಂದಿಗಳಾದ ವಿದ್ಯಾಶ್ರೀ, ಭವ್ಯ, ಪವಿತ್ರ, ಈಶ್ವರ ಭಟ್, ಆಂಟನಿ ಸಹಕರಿಸಿದರು.
ನಮ್ಮ ಪರಿಶ್ರಮ ಮತ್ತು ಪ್ರಾಮಾಣಿಕ ಸೇವೆಯನ್ನು ಗ್ರಾಹಕರು ಮಾನ್ಯ ಮಾಡಿ ಬೆಳೆಸಿದ್ದಾರೆ
1997ರಲ್ಲಿ ಸಣ್ಣಮಟ್ಟಿನಲ್ಲಿ ಸಂಸ್ಥೆ ಪ್ರಾರಂಭ ಮಾಡಿದ್ದೇವೆ. ಪರಿಶ್ರಮ ಮತ್ತು ಪ್ರಾಮಾಣಿಕ ಸೇವೆಯನ್ನು ಗ್ರಾಹಕರು ಮಾನ್ಯ ಮಾಡಿ ಸಂಸ್ಥೆಯನ್ನು ಬೆಳೆಸಿದ್ದಾರೆ. ಗ್ರಾಹಕರು ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಪೂರಕವಾಗಿ ಉತ್ಪನ್ನಗಳ ಮಾರಾಟ, ಸೇವೆಯನ್ನು ಕ್ವಾಲಿಟಿ ಮೂಲಕ ಕೊಟ್ಟಿದ್ದೇವೆ. ಇದನ್ನು ಜನ ಸ್ವೀಕರಿಸಿದ ಕಾರಣ ನಾವು ಬೆಳೆದಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಇನ್‌ವೈಸ್ ಬಿಲ್ ಮೂಲಕವೇ ಖರೀದಿ ವ್ಯವಸ್ಥೆ ಇರುತ್ತದೆ. ಇದೀಗ ಮಿಂಚ್ ಬ್ರಾಂಡ್‌ನಲ್ಲಿ ಶೋರೂಮ್ ಆರಂಭಿಸಿದ್ದೇವೆ. ಉತ್ತಮ ರೀತಿಯಲ್ಲಿ ಡೆಕೋರೆಟಿವ್ ಲೈಟ್‌ಗಳನ್ನು ಗ್ರಾಹಕರಿಗೆ ನೀಡುವ ವ್ಯವಸ್ಥೆ ಮಾಡುತ್ತಿದ್ದೇವೆ.
ರವಿನಾರಾಯಣ, ಮಾಲಕರು, ಮೈತ್ರಿ ಇಲೆಕ್ಟ್ರಿಕಲ್ ಕಂ. ಮತ್ತು ಮಿಂಚ್ ದ ಲ್ಯುಮಿನರೀಸ್
ಕೇಕ್ ಕತ್ತರಿಸಿ ಶುಭಹಾರೈಕೆ
ಕೇಕ್ ಕತ್ತರಿಸಿ ಸಂಸ್ಥೆಗೆ ಶುಭ ಹಾರೈಸಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಕೇಕ್ ಕತ್ತರಿಸಿದರು. ಹವೆಲ್ಸ್ ಕಂಪೆನಿಯ ಏರಿಯಾ ಮ್ಯಾನೇಜರ್ ಮುತ್ತುರವರು ಕಂಪೆನಿ ವತಿಯಿಂದ ಕೇಕ್ ಮೂಲಕ ಶುಭ ಹಾರೈಸಿದರು.
ಲೋಗೋ ಅನಾವರಣ
ಮಿಂಚ್ ದ ಲ್ಯುಮಿನರೀಸ್‌ನ ನೂತನ ಲೋಗೋವನ್ನು ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಲೋಗೋ ಅನಾವರಣಗೊಳಿಸಿದರು.