ಪುತ್ತೂರು: ಚಿಕ್ಕಮಕ್ಕಳಿಂದ ಹಿರಿಯವರೆಗೂ ಎಲ್ಲರೂ ಇಷ್ಟಪಡುವ, ಪುತ್ತೂರಿನವರ ನಿರೀಕ್ಷೆಯ ವಿಭಿನ್ನ ಐಸ್‌ಕ್ರೀಂ ಕೆಫೆ “ಸ್ನೋ ಸ್ಪೂನ್” ಬೊಳುವಾರು ಮುಖ್ಯರಸ್ತೆಯ ಇನ್‌ಲ್ಯಾಂಡ್ ಮಯೂರದ ಹತ್ತಿರ ಜ.6ರಂದು ಶುಭಾರಂಭಗೊಳ್ಳಲಿದೆ.
ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅರ್ಚಕ ಡಿ.ಪಿ ಭಟ್, ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ, ಸದಸ್ಯೆ ವಿದ್ಯಾಗೌರಿ, ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭೆ ನಾಮ ನಿರ್ದೇಶಿತ ಸದಸ್ಯ ಚಿದಾನಂದ ರೈ, ಕಟ್ಟಡ ಮಾಲಕ ಭಾಸ್ಕರ ಬೊಳುವಾರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಲಕರಾದ ಪ್ರವೀಣ್‌ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.