ಬುಳೇರಿಕಟ್ಟೆ: ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧ- ಅಗ್ನಿಶಾಮಕ ದಳದಿಂದ ರಕ್ಷಣೆ

0

ಪುತ್ತೂರು; ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧರೋರ್ವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಬಲ್ನಾಡು ಗ್ರಾಮದ ಬುಳೇರಿಕಟ್ಟೆಯಲ್ಲಿ ಜ.5ರಂದು ಮುಂಜಾನೆ ನಡೆದಿದೆ.


ಬುಳೇರಿಕಟ್ಟೆ ದಿ.ಕಿಟ್ಟು ನಾಯ್ಕ್‌ರವರ ಪುತ್ರ ತಿಮ್ಮ ನಾಯ್ಕ್(77ವ.) ರಕ್ಷಿಸಲ್ಪಟ್ಟವರು. ತುಸು ಆರೋಗ್ಯ ಸಮಸ್ಯೆಯಿಂದಿದ್ದ ತಿಮ್ಮ ನಾಯ್ಕ ಅವರು ಮುಂಜಾನೆ 4 ಗಂಟೆ ವೇಳೆಗೆ ಮನೆ ಸಮೀಪದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದರು. ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ತೆರಳಿದ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ತಿಮ್ಮ ನಾಯ್ಕ್ ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

ಠಾಣಾಧಿಕಾರಿ ಶಂಕರ್ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಲೀಲಾಧರ ಅವರು ಬಾವಿಗೆ ಇಳಿದು ತಿಮ್ಮ ನಾಯ್ಕ್ ಅವರನ್ನು ಮೇಲಕ್ಕೆ ತಂದರು. ಅಗ್ನಿಶಾಮಕರಾದ ಮಂಜುನಾಥ ಪಾಟೀಲ್, ಪಾಂಡುರಂಗ ವಾಲಿಕರ್, ತೌಸಿಫ್ ಮುಲ್ಲಾ, ಅಗ್ನಿಶಾಮಕ ವಾಹನ ಚಾಲಕ ಸಚಿನ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜ.6ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ತಿಮ್ಮ ನಾಯ್ಕ್‌ ರವರ ಹೆಸರು ಬದಲಾಗಿ ನಾರಾಯಣ ನಾಯ್ಕ್‌ ಎಂದು ತಪ್ಪಾಗಿ ಪ್ರಕಟಗೊಂಡಿದ್ದು, ಇದಕ್ಕೆ ವಿಷಾಧ ವ್ಯಕ್ತಪಡಿಸುತ್ತೇವೆ.

LEAVE A REPLY

Please enter your comment!
Please enter your name here