ಬ್ರಹ್ಮಕಲಶೋತ್ಸವದ ಮೂಲಕ ಲೋಕ ಕಲ್ಯಾಣವಾಗಲಿ; ಪದ್ಮರಾಜ್ ಆರ್.
ನೆಲ್ಯಾಡಿ: ಜೀರ್ಣೋದ್ದಾರಗೊಳ್ಳುತ್ತಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.5 ರಿಂದ 10ರ ತನಕ ನಡೆಯುವ ನವೀಕರಣ ಪುನರ್ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಜ.3ರಂದು ಮಧ್ಯಾಹ್ನ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್.ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ಧಾರ್ಮಿಕ ಆರಾಧನೆಗಳಿಗೆ ಮಹತ್ವವಿದೆ. ನಂಬಿಕೆ ನೆಲೆಯಲ್ಲಿ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ದಾರ ಮಾಡಿಕೊಂಡು ಬರುತ್ತಿದ್ದೇವೆ. ಪುರಾತನ ತಿರ್ಲೆ ದೇವಸ್ಥಾನವೂ ನವೀಕರಣಗೊಂಡಿದೆ. ಊರಿನ ಅಭಿವೃದ್ಧಿಯಾಗಬೇಕು. ಊರಿನ ಶ್ರೇಯೋಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಇಲ್ಲಿನ ಭಕ್ತರ ಶ್ರದ್ಧೆ, ನಿಸ್ವಾರ್ಥ ಸೇವೆಯಿಂದ ದೇವಸ್ಥಾನದ ಜೀರ್ಣೋದ್ದಾರದ ಕೆಲಸ ನಡೆದಿದೆ. ಫೆ.5ರಿಂದ 10ರ ತನಕ ನಡೆಯುವ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲಿ. ಈ ಮೂಲಕ ಲೋಕ ಕಲ್ಯಾಣವಾಗಲಿ ಎಂದು ಹಾರೈಸಿದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ವಸಂತಿ, ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಾನಂದ ಕಾರಂತ ಕಾಂಚನ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್ಕುಮಾರ್ ಪಾಲೇರಿ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಮಂತ್ರಣ ಪತ್ರ ಬಿಡುಗಡೆ ಬಳಿಕ ಬ್ರಹ್ಮಕಲಶೋತ್ಸವದ ಸಿದ್ಧತೆಯ ಕುರಿತು ಚರ್ಚಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಅಮೃತರಾಜ ಸರಳಾಯ, ಶಾಂತಾಮಾಧವ ಸರಳಾಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಸತೀಶ್ ಕೆ.ಎಸ್.ದುರ್ಗಾಶ್ರೀ ನೆಲ್ಯಾಡಿ, ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಪುರ, ಸತೀಶ್ ರೈ ಕೊಣಾಲುಗುತ್ತು, ಸದಾನಂದ ಗೌಡ ಡೆಬ್ಬೇಲಿ, ಪ್ರವೀಣ್ ಭಂಡಾರಿ ಪುರ, ಕುಮಾರನ್ ಪಾಂಡಿಬೆಟ್ಟು, ಕೋಶಾಧಿಕಾರಿ ರಮೇಶ್ ಭಟ್ ಬಿ.ಜಿ., ಜೊತೆ ಕಾರ್ಯದರ್ಶಿಗಳಾದ ಸುರೇಶ್ ತಿರ್ಲೆ, ಜನಾರ್ದನ ಗೌಡ ಬರಮೇಲು, ಲಾವಣ್ಯ ಸಂದೇಶ್ ಏಡ್ಮೆ, ಜೀರ್ಣೋದ್ದಾರ ಸಮಿತಿ ಜೊತೆ ಕಾರ್ಯದರ್ಶಿಗಳಾದ ಲೋಕೇಶ ಅಗರ್ತ, ಜಯಂತ ಅಂಬರ್ಜೆ, ಸಹಕೋಶಾಧಿಕಾರಿಗಳಾದ ಹರೀಶ್ ಶೆಟ್ಟಿ ಪಾತೃಮಾಡಿ, ಭೀಮ ಭಟ್ ನೆಕ್ಕರೆ, ಉಪಾಧ್ಯಕ್ಷರಾದ ನೋಣಯ್ಯ ಗೌಡ ಡೆಬ್ಬೇಲಿ, ಬಾಲಕೃಷ್ಣ ಶೆಟ್ಟಿ ಅಗರ್ತ, ಗೌರವ ಸಲಹೆಗಾರರಾದ ಪ್ರತಾಪ್ಚಂದ್ರ ರೈ ಕುದ್ಮಾರುಗುತ್ತು, ನಾರಾಯಣ ಪೂಜಾರಿ ಡೆಂಬಲೆ, ಕೊರಗಪ್ಪ ಸಾಲಿಯಾನ್ ಶಿವಾರು, ತುಕಾರಾಮ ಗೌಡ ವಿಷ್ಣುಕೃಪಾ ಗೋಳಿತ್ತೊಟ್ಟು, ಮೋನಪ್ಪ ಶೆಟ್ಟಿ ಪಾತೃಮಾಡಿ, ವಿವಿಧ ಸಮಿತಿ ಪ್ರಮುಖರಾದ ರಾಜಶೇಖರ್ ಹೊಸಮನೆ, ಬಾಬು ಪೂಜಾರಿ ಕಿನ್ಯಡ್ಕ, ವೆಂಕಪ್ಪ ಗೌಡ ಡೆಬ್ಬೇಲಿ, ಕುಶಾಲಪ್ಪ ಗೌಡ ಅನಿಲ, ಜನಾರ್ದನ ಪಟೇರಿ, ಭಾಸ್ಕರ ರೈ ತೋಟ, ಸಂದೇಶ್ ಏಡ್ಮೆ, ಪುರುಷೋತ್ತಮ ಗೌಡ ಕುದ್ಕೋಳಿ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಬಾಲಕೃಷ್ಣ ಅಲೆಕ್ಕಿ, ಭಾಸ್ಕರ ರೈ ತೋಟ, ಪದ್ಮನಾಭ ಶೆಟ್ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಜಯಂತ ಅಂಬರ್ಜೆ ಸ್ವಾಗತಿಸಿದರು. ಬಾಲಚಂದ್ರ ರೈ ಪಾತೃಮಾಡಿ ನಿರೂಪಿಸಿದರು.