ರಾಮಕುಂಜ: ಪುನರ್ ನಿರ್ಮಾಣಗೊಂಡಿರುವ ಕೊಯಿಲ ಗ್ರಾಮದ ಬರೆಮೇಲು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಜ.7ರಿಂದ 9ರ ತನಕ ಪುನ: ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ ನಡೆಯಲಿದ್ದು ಇದರ ಅಂಗವಾಗಿ ಜ.5 ರಂದು ಗ್ರಾಮಸ್ಥರಿಂದ ಶ್ರಮದಾನ ನಡೆಯಿತು.
ಗ್ರಾಮಸ್ಥರು ವಿವಿಧ ಕೆಲಸಗಳನ್ನು ಶ್ರಮದಾನ ಮೂಲಕ ನಡೆಸಿದರು. ಆಡಳಿತ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಗೌರವಾಧ್ಯಕ್ಷ ವೀರಪ್ಪ ದಾಸಯ್ಯ ಪಾಣಿಗ, ಕಾರ್ಯದರ್ಶಿ ವಿನಯಕುಮಾರ್ ರೈ ಕೊಯಿಲಪಟ್ಟೆ, ಜೊತೆ ಕಾರ್ಯದರ್ಶಿ ಉಮೇಶ ನೂಜಿಮಾರು, ಉಪಾಧ್ಯಕ್ಷರಾದ ಕುಶಾಲಪ್ಪ ಬರಮೇಲು, ಕೋಶಾಧಿಕಾರಿ ಚೇತನ್ ಆನೆಗುಂಡಿ, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು ಶ್ರಮದಲ್ಲಿ ಪಾಲ್ಗೊಂಡಿದ್ದರು.