ಪುತ್ತೂರು: ಕೆಯ್ಯೂರು ಗ್ರಾಮದ ದೇವಿನಗರದಲ್ಲಿರುವ ವಿಶ್ವಚೇತನ ಟವರ‍್ಸ್‌ನಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವು ಜ.6ರಂದು ಉದ್ಘಾಟನೆಗೊಂಡಿತು. ಜನ ಔಷಧಿ ಕೇಂದ್ರವನ್ನು ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಜನ ಔಷಧಿ ಕೇಂದ್ರ ಆರಂಭವಾಗಿರುವುದು ಖುಷಿ ತಂದಿದೆ. ಅದರಲ್ಲೂ ನಮ್ಮೂರಿನ ವೈದ್ಯರಾದ ಡಾ.ಶಿವಪ್ರಸಾದ್‌ರವರು ತಮ್ಮ ವೃತ್ತಿಯನ್ನು ವೃತ್ತಿ ಎಂದು ನೋಡದೆ ಅದೊಂದು ಸೇವೆಯ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜನ ಔಷಧಿ ಕೇಂದ್ರ ಎಲ್ಲರಿಗೂ ಪ್ರಯೋಜನವಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಮಾತನಾಡಿ, ಪ್ರಧಾನಿ ಮೋದಿಯವರ ಆಶಯದ ಈ ಜನ ಔಷಧಿ ಕೇಂದ್ರವನ್ನು ನಮ್ಮೂರಿನಲ್ಲಿ ನಮ್ಮೆಲ್ಲರ ಆತ್ಮೀಯರಾದ ಡಾ.ಶಿವಪ್ರಸಾದ್‌ರವರು ಆರಂಭಿಸಿದ್ದಾರೆ. ಇದು ಗ್ರಾಮದ ಎಲ್ಲಾ ಬಡವರಿಗೆ ಪ್ರಯೋಜನವಾಗಲಿ, ಇವರಿಂದ ಇನ್ನಷ್ಟು ಸೇವೆ ಜನರಿಗೆ ಸಿಗಲಿ, ದೇವರು ಅವರಿಗೆ ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ.ಶಿವಪ್ರಸಾದ್‌ರವರ ತಂದೆ ಮಹಾಲಿಂಗ ಶೆಟ್ಟಿ, ತಾಯಿ ಚಿತ್ರಾವತಿ, ಮಾವ ಗುಡ್ಡಪ್ಪ ಶೆಟ್ಟಿ, ಅತ್ತೆ ಶ್ಯಾಮಲ. ಕೆದಂಬಾಡಿ ಕೆಯ್ಯೂರು ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಭಟ್, ಕಟ್ಟಡ ಮಾಲಕರಾದ ವಿಶ್ವನಾಥ ಪೂಜಾರಿ ಕೆಂಗುಡೇಲು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜನ ಔಷಧಿ ಕೇಂದ್ರದ ಮಾಲಕಿ ಶೃತಿ ಎಸ್.ಶೆಟ್ಟಿ ಹಾಗೂ ಡಾ.ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಗ್ರಾಹಕರ ಸಹಕಾರ ಕೋರಿದರು.