ಪುತ್ತೂರು: ತಮಿಳ್ ನಾಡು ರಾಜ್ಯ ಅಕ್ವಾಟಿಕ್ ಅಸೋಸಿಯೇಷನ್ ಆಯೋಜನೆಯಲ್ಲಿ ಜ.4 ಮತ್ತು ಮತ್ತು 5ರಂದು ಎಸ್ ಡಿಎಟಿ ಅಕ್ವಾಟಿಕ್ ಕಾಂಪ್ಲೆಕ್ಸ್ ವೆಲಚ್ಚರಿ ಚೆನ್ನೈ ನಲ್ಲಿ ನಡೆದ ’35ನೇ ಸೌತ್ ಜೋನ್ ಅಕ್ವಾಟಿಕ್ ಚಾಂಪಿಯನ್ ಶಿಪ್ – 2024′ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ನಂದನ್ ನಾಯ್ಕ ಇವರು ಒಂದು ಮೀಟರ್ ಸ್ಟ್ರಿಂಗ್ ಬೋರ್ಡ್ ವಿಭಾಗದಲ್ಲಿ ಬೆಳ್ಳಿಯ ಪದಕ ಹಾಗೂ ಹೈ ಬೋರ್ಡ್(ಪ್ಲಾಟ್ ಫಾರ್ಮ್ ಡೈವಿಂಗ್) ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡರು.
ನಂದನ್ ನಾಯ್ಕ್ ಇವರು ನರಿಮೊಗರು ನಿವಾಸಿ ರವಿ ಸಂಪತ್ ನಾಯ್ಕ ಹಾಗೂ ಕ್ಷಮಿತಾ ಆರ್ ನಾಯ್ಕ ದಂಪತಿಗಳ ಪುತ್ರನಾಗಿದ್ದಾರೆ. ಇವರಿಗೆ ಪಾರ್ಥ ವಾರಣಾಸಿ, ವಿಕಾಸ್ ಹಾಗೂ ವೆಂಕಟೇಶ್ ತರಬೇತಿ ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.