ಕಾವು:ಬುಶ್ರಾ ಆ.ಮಾ ಶಾಲಾ ವಾರ್ಷಿಕೋತ್ಸವ,ಸಭಾ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮ

0


ಕಾವು:ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ,ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಜ.2 ರಂದು ನಡೆಯಿತು.


ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿಸಬೇಕು- ಸಂಜೀವ ಮಠಂದೂರು
ಸಭಾ ಕಾರ್ಯಕ್ರಮನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ಕೂಡಿಡುವ ಬದಲು ತಮ್ಮ ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಲು ಪ್ರಯತ್ನಪಡಬೇಕು,ಗ್ರಾಮೀಣ ಮಟ್ಟದಲ್ಲಿ ಆಂಗ್ಲ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಬುಶ್ರಾ ಅಜೀಜ್ ರವರ ಕಾರ್ಯ ಶ್ಲಾಘನೀಯ ಎಂದರು.


ಮೊಬೈಲ್ ಮಕ್ಕಳ ಆರೋಗ್ಯ ಮತ್ತು ಶಿಕ್ಷಣವನ್ನು ಕಸಿದುಕೊಳ್ಳುತ್ತಿದೆ- ಲೋಕೇಶ್ ಎಸ್ ಆರ್
ಪುತ್ತೂರು ಕ್ಷೇತ್ರ ಶಿಕ್ಷಣ ಅಧಿಕಾರಿ ಲೋಕೇಶ್ ಎಸ್ ಆರ್ ಮಾತನಾಡಿ ಮೊಬೈಲ್ ಮಕ್ಕಳ ಆರೋಗ್ಯ ಮತ್ತು ಶಿಕ್ಷಣವನ್ನು ಕಸಿದುಕೊಳ್ಳುತ್ತಿದ್ದು ಮಕ್ಕಳನ್ನು ಪೋಷಕರು ಮೊಬೈಲ್ ನಿಂದ ದೂರವಿಡಬೇಕು.ಮಕ್ಕಳು ಪುಸ್ತಕ ಓದುವ ಕಡೆಗೆ ಹೆಚ್ಚಿನ ಗಮನ ಕೊಡಬೇಕು,ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡಬೇಕು,ಉತ್ತಮ ಶಿಕ್ಷಣ ನೀಡುತ್ತಿರುವ ಬುಶ್ರಾ ವಿದ್ಯಾಸಂಸ್ಥೆಯ ಮೂಲಕ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.


ಬುಶ್ರಾ ಸಂಸ್ಥೆಯಿಂದ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ – ಹೇಮನಾಥ ಶೆಟ್ಟಿ
ಕೊಂಬೆಟ್ಟು ಶ್ರೀ ರಾಮಕೃಷ್ಣ ಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಮಾತನಾಡಿ,ವಿದ್ಯಾರ್ಥಿಗಳು ಗುರಿಯನ್ನು ಇಟ್ಟುಕೊಂಡು ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬುಶ್ರಾ ವಿದ್ಯಾಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದಕೆ ಅಭಿನಂದನೆ ತಿಳಿಸಿದರು.


ಶಾಲೆ ಇನ್ನಷ್ಟು ಬೆಳಗಲು ಪೋಷಕರ ಸಹಕಾರ ಅಗತ್ಯ- ಜನಾಬ್ ಅಬ್ದುಲ್ ಅಜೀಜ್
ಬುಶ್ರಾ ಎಜುಕೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಜನಾಬ್ ಅಬ್ದುಲ್ ಅಜೀಜ್ ಮಾತನಾಡಿ ವಿದ್ಯಾಸಂಸ್ಥೆ ಇನ್ನಷ್ಟು ಬೆಳಗಲು ಪೋಷಕರ ಸಹಕಾರ ಅಗತ್ಯ,ಉತ್ತಮ ಸಹಕಾರ ನೀಡುತ್ತಿರುವ ಮುಖ್ಯ ಗುರುಗಳು,ಶಿಕ್ಷಕ ವೃಂದ,ಹಿರಿಯ ವಿದ್ಯಾರ್ಥಿ ಸಂಘ, ಶಿಕ್ಷಕ ರಕ್ಷಕ ಸಂಘಕ್ಕೆ ಅಭಿನಂದನೆ ತಿಳಿಸಿದರು.

ಬುಶ್ರಾ ಸಂಸ್ಥೆಯ ಇನ್ನಷ್ಟು ಮಕ್ಕಳು ರಾಷ್ಟ್ರ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಲಿ – ಸಂತೋಷ್ ಕುತ್ಯಾಡಿ
ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಯುತ ಶಿಕ್ಷಣ ಪಡೆದು ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಯಾಗಿ ಜೀವಿಸಬೇಕು,ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬುಶ್ರಾ ವಿದ್ಯಾರ್ಥಿಗಳು ರಾಷ್ಟ್ರ ರಾಜ್ಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.


ಈ ಗ್ರಾಮೀಣ ಭಾಗದಲ್ಲಿ ಇರುವ ಶಾಲೆಯು ಅನೇಕ ಸಾಧಕರ ಶಾಲೆಯಾಗಿ ಇಂದು ಪ್ರಜ್ವಲಿಸುತ್ತಿದೆ- ದೀಪಿಕಾ ಚಾಕೋಟೆ
ಬುಶ್ರಾ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಗುರು ದೀಪಿಕಾ ಚಾಕೋಟೆ ಮಾತನಾಡಿ, ವಿದ್ಯಾಸಂಸ್ಥೆಯು ಇನ್ನಷ್ಟು ಬೆಳಗಲು ಪೋಷಕರ ಸಹಕಾರ ಅತ್ಯಗತ್ಯ. ಸಮರ್ಥವಾದಂತಹ ಶಿಕ್ಷಕರ ತಂಡ ಉತ್ತಮ ಆಡಳಿತ ಮಂಡಳಿ ಯೋಜನೆಗಳನ್ನು ಹಾಕಿಕೊಂಡು ಅತ್ಯಂತ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುವಂತಹ ಕೆಲಸವನ್ನು ಮಾಡುತ್ತಿದೆ. ಇಂದು ದೇಶ ವಿದೇಶಗಳಲ್ಲಿ ಈ ಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.


ಎಷ್ಯನ್ ವುಡ್ ಮತ್ತು ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್ ಪುತ್ತೂರು ಇದರ ಮಾಲಕ ಜನಾಬ್ ಜಬ್ಬಾರ್, ಬುಶ್ರಾ ಸಂಸ್ಥೆಯ ಹಳೆ ವಿದ್ಯಾರ್ಥಿ ಸಿನಾನ್, ಮಣಿಪಾಲ್ ಗ್ರೂಪ್ ಜೋನ್ ಟ್ರೈನರ್ ಜೆ. ಸಿ. ಐ ಇಂಡಿಯಾ ದ ಜನಾಬ್ ಕಲಂದರ್ ಶಾಪಿ,ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.


ವೇದಿಕೆಯಲ್ಲಿ ಅಬ್ದುಲ್ ಕಾಶಿಫ್ ಸಿನಾಜ್ ಮದಕ ಮುಲ್ಲೇರಿಯ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹೀರಾ ಅಬ್ದುಲ್ ಖಾದರ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಶೈಕ್ಷಣಿಕ ಸಲಹೆಗಾರ ಕೃಷ್ಣ ಪ್ರಸಾದ್,ವಿದ್ಯಾರ್ಥಿ ನಾಯಕ ಹರ್ಷಲ್ ಎಂ ಎಸ್ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬುಶ್ರಾ ಎಜುಕೇಶನಲ್ ಟ್ರಸ್ಟ್ ನ ಸದಸ್ಯರಾದ ಮೋಹಿಷಾ ನೂರುದ್ದೀನ್ ಸ್ವಾಗತಿಸಿದರು.ಮುಖ್ಯ ಶಿಕ್ಷಕಿ ದೀಪಿಕಾ ಚಕೋಟೆ ವಾರ್ಷಿಕ ವರದಿ ವಾಚಿಸಿದರು.ಶಾಲಾ ಶಿಕ್ಷಕಿ ಹರ್ಷಿತಾ ವಂದಿಸಿದರು.ಶಿಕ್ಷಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು.


68 ರಾಷ್ಟ್ರ ಸುತ್ತಿದ ಬುಶ್ರಾದ ಹಳೆ ವಿದ್ಯಾರ್ಥಿ ಸೀನಾನ್ ಗೆ ವಿದ್ಯಾ ಸಂಸ್ಥೆಯಿಂದ ಸನ್ಮಾನ
2 ವರ್ಷದಲ್ಲಿ 68 ರಾಷ್ಟ್ರಗಳನ್ನು ಸುತ್ತಿದ ಬುಶ್ರಾ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಸಿನಾನ್ ಇವರನ್ನು ಬುಶ್ರಾ ಎಜುಕೇಷನ್ ಟ್ರಸ್ಟ್ ವತಿಯಿಂದ ಅತಿಥಿಗಳು ಸನ್ಮಾನಿಸಿದರು.

ಜಿಲ್ಲಾ ಮಟ್ಟದಲ್ಲಿ 400 ಮಿ ಓಟದಲ್ಲಿ ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿ ಮಿಥೇಶ್ ನಾಯ್ಕ ಇವರಿಗೆ ಶಾಲಾ ವತಿಯಿಂದ ಗೌರವಿಸಲಾಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಹೀರಾ ಅಬ್ದುಲ್ ಖಾದರ್ ರವರು ನಗದು ಬಹುಮಾನ ನೀಡಿ ಗೌರವಿಸಿದರು. ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಬಿಶ್ರು ಇವರನ್ನುಶಾಲಾ ವತಿಯಿಂದ ಗೌರವಿಸಲಾಯಿತು.


ತೆರೆದ ವೇದಿಕೆಯಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಬುಶ್ರಾ ವಿದ್ಯಾಸಂಸ್ಥೆಯ ಎದುರಿನ ಮೈದಾನದಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ತೆರೆದ ವೇದಿಕೆಯಲ್ಲಿ ವಿದ್ಯಾರ್ಥಿಗಳ ಸಮೂಹ ನೃತ್ಯ,ಕರಾಟೆ ಹಾಗೂ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು

LEAVE A REPLY

Please enter your comment!
Please enter your name here