ಪುತ್ತೂರು: ಜ.10ರಿಂದ 16ರ ವರೆಗೆ ನಡೆಯುವ ಈಶ್ವರಮಂಗಲ ಮಖಾಂ ಉರೂಸ್ ಪ್ರಚಾರದ ನೋಟೀಸ್ ಎನ್ ಪಿ ಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು.
ಜಮಾತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಟಿ ಎ, ಉಪಾಧ್ಯಕ್ಷರಾದ ಇ.ಪಿ ಮುಹಮ್ಮದ್ ಕುಂಞಿ ಹಾಜಿ, ಉರೂಸ್ ಕಮಿಟಿ ಗೌರವಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಮೇನಾಲ, ಅಧ್ಯಕ್ಷರಾದ ಅಬ್ದುಲ್ಲ ಕುಂಞಿ ಕೆ ಝಡ್, ಕಾರ್ಯದರ್ಶಿ ಮುಸ್ತಫಾ ಮಿನಿ ಜಮಾಅತ್ ಕಾರ್ಯದರ್ಶಿಗಳಾದ ಖಾದರ್ ಇ ಎಚ್, ರಹ್ಮಾನ್ ಮೇನಾಲ, ಖಜಾಂಜಿ ಇ ಎ ಮುಹಮ್ಮದ್ ಕುಂಞಿ, ಜಮಾಅತ್ ಉಪಾಧ್ಯಕ್ಷ ಹಾರಿಸ್ ಪಿ ಎಸ್, ಉರೂಸ್ ಕಮಿಟಿ ಉಪಾಧ್ಯಕ್ಷ ತ್ವಾಹ ಪಿ.ಎಸ್, ಮುಹಮ್ಮದ್ ಟಿ ಎ ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.