ಪುತ್ತೂರು: ಸರಕಾರಿ (ಮಹಿಳಾ) ಕೈಗಾರಿಕಾ ತರಬೇತಿ ಸಂಸ್ಥೆ ನರಿಮೊಗರು, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ವಲಯ-5, ಮರಾಟಿ ಸಮಾಜ ಸೇವಾ ಸಂಘ ನರಿಮೊಗರು ಇವುಗಳ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಬ್ಲಡ್ ಸೆಂಟರ್ ಅತ್ತಾವರ ಮಂಗಳೂರು ಇದರ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ಜ.4ರಂದು ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.
ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಅಧ್ಯಕ್ಷರಾದ ಸುರೇಶ್ ಪಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನರಿಮೊಗರು ಐ.ಟಿ.ಐ.ಯ ಪ್ರಬಾರ ಪ್ರಾಚಾರ್ಯರಾದ ರಾಜೀವಿ ಬಿ, ಮರಾಟಿ ಸಮಾಜ ಸೇವಾ ಸಂಘ ನರಿಮೊಗರು ಇದರ ಅಧ್ಯಕ್ಷರಾದ ಮಹಾಲಿಂಗ ನಾಯ್ಕ ನರಿಮೊಗರು, ರೋಟರಿ ನಿಕಟಪೂರ್ವ ಅಧ್ಯಕ್ಷ ಸುಂದರ್ ರೈ ಬಲ್ನಾಡ್, ಕಾರ್ಯದರ್ಶಿ ಸೆನೋರಿಟಾ ಆನಂದ್, ಕೆಎಂಸಿ ಆಸ್ಪತ್ರೆಯ ಡಾ.ಪ್ರಿಯಾಲ್, ಸೀನಿಯರ್ ಟೆಕ್ನೀಶಿಯನ್ ರಾಘವೇಂದ್ರ, ಐ.ಟಿ.ಐ ಸಂಸ್ಥೆಯ ಯೋಗೀಶ್ ಪಿ ಶಾಂತಿಗೋಡು, ಉಷಾ ಉಪಸ್ಥಿತರಿದ್ದರು.
ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಕೊರಗಪ್ಪ ನಾಯ್ಕ ಕಲ್ಲಮ, ಖಜಾಂಜಿ ಈಶ್ವರ ಅಜಲಾಡಿ, ಮಾಝಿ ಅಧ್ಯಕ್ಷರಾದ ಅಶ್ವಿನಿ ಬಿ.ಕೆ, ಕಚೇರಿ ಅಧೀಕ್ಷಕರಾದ ಹೇಮಾವತಿ, ಕಿರಿಯ ತರಬೇತಿ ಅಧಿಕಾರಿ ರೊನಾಲ್ಡ್ ಫ್ರಾನ್ಸಿಸ್ ವಾಲ್ಟರ್, ಅತಿಥಿ ಬೋಧಕರಾದ ಗಣೇಶ್ ಬಿ, ಅಜಿತ್ ಕುಮಾರ್, ಶ್ರೀರಕ್ಷಾ, ಹೇಮಲತಾ ಹಾಗೂ ಮಮತ ನರಿಮೊಗರು, ಜಯಪ್ರಕಾಶ್ ನೆಕ್ಕಿಲು, ಗಣೇಶ್ ನೆಕ್ಕಿಲು, ಕೀರ್ತನ್ ಎನ್.ಕೆ, ವಾಣಿ ಉಪಸ್ಥಿತರಿದ್ದರು. ಉಷಾ ಸ್ವಾಗತಿಸಿದರು. ಹೇಮಾವತಿ ಪ್ರಾರ್ಥಿಸಿದರು. ಮಹಾಲಿಂಗ ನಾಯ್ಕ ನರಿಮೊಗರು ವಂದಿಸಿದರು. ಯೋಗೀಶ್ ಪಿ ಕಾರ್ಯಕ್ರಮ ನಿರೂಪಿಸಿದರು.
ಐಟಿಐ ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು. ಒಟ್ಟು 54 ಮಂದಿ ರಕ್ತದಾನ ಮಾಡಿದರು.