ಸವಣೂರು-ಚಾಪಲ್ಲ ರಸ್ತೆಯಲ್ಲಿ ಅಪಾಯಕಾರಿ ಗುಂಡಿ

0

ಪುತ್ತೂರು: ಸವಣೂರು – ಚಾಪಲ್ಲ- ಕುದ್ಮಾರು ರಸ್ತೆಯಲ್ಲಿ ಅಲ್ಲಲ್ಲಿ ಅಪಾಯಕಾರಿ ಗುಂಡಿಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಇದಕ್ಕೆ ಸಾಕ್ಷಿಯಾಗಿ ಕಳೆದ ವಾರ ಸ್ಕೂಟಿ ಯಲ್ಲಿ ಇಬ್ಬರು ಕಡಬ ದಿಂದ ಪುತ್ತೂರಿಗೆ ಬರುವವರು ಚಾಪಲ್ಲ ಸವಣೂರು ಮಾರ್ಗದ ಮಧ್ಯೆ ಗುಂಡಿಗೆ ಬಿದ್ದು ಪಲ್ಟಿಯಾಗಿ ಒಬ್ಬರ ಕೈ ಮತ್ತು ಕಾಲು ಪ್ಯಾಕ್ಚರ್ ಆಗಿದ್ದು, ಇವರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಸವಣೂರು ಗ್ರಾ.ಪಂ, ಸದಸ್ಯ ತೀರ್ಥರಾಮ್ ಕೆಡೆಂಜಿ ಮತ್ತು ಬಳಗದವರು‌ ಸಹಕರಿಸಿದ್ದರು.

ಈ ಸಮಸ್ಯೆಯ ಬಗ್ಗೆ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆಯವರು ಗಮನಹರಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here