ಪುತ್ತೂರು: ಪ್ರತಿಷ್ಠಿತ ಭೂ ಅಭಿವೃದ್ಧಿ ಬ್ಯಾಂಕಿಗೆ ನಡೆಯುವ ಚುನಾವಣೆಗೆ ನರಿಮೊಗರು ವಲಯದಿಂದ ಅನುಸೂಚಿತ ಜಾತಿಯ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಯಾಗಿ ಬಾಬು ಮುಗೇರ ಬಾವಿಕಟ್ಟೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ನಗರ ಮಂಡಲ ಉಪಾಧ್ಯಕ್ಷರಾದ ಯುವರಾಜ್ ಪೆರಿಯತ್ತೋಡಿ, ಗ್ರಾಮಾಂತರ ಮಂಡಲ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ಯತೀಂದ್ರ ಕೊಚ್ಚಿ, ಮಾಜಿ ಪ್ರಧಾನ ಕಾರ್ಯದರ್ಶಿಯಾದ ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಅನಿಲ್ ತೆಂಕಿಲ,ನಾಗೇಶ್ ಪ್ರಭು, ಸಹಕಾರ ಭಾರತಿಯ ಕಾರ್ಯದರ್ಶಿ ಮೋಹನ್ ಪಕಳ, ರಾಮಣ್ಣ ಗುಂಡೋಳೆ,ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರು,ಪಾರ್ಟಿಯ ಪ್ರಮುಖರಾದ ರಾಜೇಶ್ ಬನ್ನೂರು,ಸುರೇಶ್ ಆಳ್ವಾ,ಉಮೇಶ್ ಸುವರ್ಣ, ವಿಶ್ವನಾಥ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.