ಪುತ್ತೂರು: ದಾರಂದಕುಕ್ಕು ಕೊಲ್ಯ ಎಂಬಲ್ಲಿ ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜ.8 ರಂದು ಬೆಳಿಗ್ಗೆ ನಡೆದಿದ್ದು, ಅಪಘಾತದಿಂದ ಬೈಕ್ ನಲ್ಲಿದ್ದ ವಿದ್ಯಾರ್ಥಿಗಳಿಬ್ಬರು ತೀವ್ರ ಗಾಯಗೊಂಡಿದ್ದಾರೆ.
ಬೆಳ್ಳಿಪ್ಪಾಡಿ ನಿವಾಸಿಗಳಾಗಿರುವ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಬೈಕ್ ಸವಾರ ನಿಶಾಂತ್ ಮತ್ತು ಹಿಂಬದಿ ಸವಾರ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿ ಕಾರ್ತಿಕ್ ಎಂಬವರು ಗಾಯಗೊಂಡವರು. ಅವರು ಬೈಕ್ ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ವಿರುದ್ದ ಧಿಕ್ಕಿನಿಂದ ಬಂದ ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಗಾಯಾಳುವನ್ನು ಪುತ್ತೂರು ಮಹಾವೀರ ಅಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.