ಅಧ್ಯಕ್ಷರಾಗಿ ಮೋಹನ್ ನಾಯ್ಕ, ಉಪಾಧ್ಯಕ್ಷೆಯಾಗಿ ಜ್ಯೋತಿ ಕಳೆಂಜಿಲ
ಪುತ್ತೂರು: ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತ್ತಡ್ಕ (ಅಜ್ಜಿಕಲ್ಲು) ಇದರ ಮುಂದಿನ ಅವಧಿಗೆ ನೂತನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಜ.7 ರಂದು ರಚನೆ ಮಾಡಲಾಯಿತು.
ಶಾಲಾಭಿವೃದ್ದಿ ಸಮಿತಿಯ ನೂತನ ಅಧ್ಯಕ್ಷರಾಗಿ ಮೋಹನ್ ನಾಯ್ಕ ಮೊಟ್ಟಿಕಲ್ಲು, ಉಪಾಧ್ಯಕ್ಷೆಯಾಗಿ ಜ್ಯೋತಿ ಕಳೆಂಜಿಲ, ಸಮಿತಿ ಸದಸ್ಯರಾಗಿ ಮೋಹನಚಂದ್ರ ನಾಯ್ಕ , ಹರೀಶ್ ನಾಯ್ಕ , ಅಣ್ಣು ಒಳತ್ತಡ್ಕ, ಸತೀಶ್ ಅಂಚನ್ ಅಜ್ಜಿಕಲ್ಲು , ಅಶ್ರಫ್ , ಉಷಾ , ಜಯಲಕ್ಷ್ಮಿ , ಸುನೀತಾ ಡಿ ಸೋಜ , ಭಾಗೀರಥಿ , ವಸಂತ ಕೆ , ವಿಮಲ , ಫಾತಿಮಾ , ಹರಿಣಾಕ್ಷಿ , ಸುನೀತಾ , ಪುಷ್ಪಾವತಿ , ಚಂದ್ರಿಕಾರವರುಗಳನ್ನು ಆಯ್ಕೆ ಮಾಡಲಾಯಿತು.
ನಾಮ ನಿರ್ದೇಶನ ಸದಸ್ಯರಾಗಿ ಸ್ಥಳೀಯ ಜನ ಪ್ರತಿನಿಧಿ ಮಹೇಶ್ ರೈ ಕೇರಿ , ಶಿಕ್ಷಕ ಪ್ರತಿನಿಧಿ ಪ್ರೀತಂ, ವಿದ್ಯಾರ್ಥಿ ಪ್ರತಿನಿಧಿ ಅನ್ವಿತ್ ಕುಲಾಲ್, ಅಂಗನವಾಡಿ ಪ್ರತಿನಿಧಿ ಗೀತಾ , ಆರೋಗ್ಯ ಪ್ರತಿನಿಧಿ ವಿದ್ಯಾಶ್ರೀರವರು ನಾಮನಿರ್ದೇಶನಗೊಂಡರು.
ಒಳಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ, ಸಾಮಾನ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಉಜಿರೋಡಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸಾಮಾನ್ಯ ಸ್ಥಾಯಿ ಸಮಿತಿಯ ಸದಸ್ಯರಾದ ಶೀನಪ್ಪ ನಾಯ್ಕ, ರೇಖಾ ಯತೀಶ್ , ಬಿ.ಸಿ ಚಿತ್ರಾ , ಗ್ರಾ.ಪಂ ಸದಸ್ಯರಾದ ನಳಿನಾಕ್ಷಿ , ವನಿತಾ , ಶಾಲಾಭಿವೃದ್ದಿ ಸಮಿತಿ ನಿಕಟಪೂರ್ವ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ಶಾಲಾ ಪ್ರಭಾರ ಮುಖ್ಯಗುರುಗಳಾದ ಚಿತ್ರಾ ರೈ, ಪೋಷಕರು ಉಪಸ್ಥಿತರಿದ್ದರು. ಸಹಶಿಕ್ಷಕ ಪ್ರೀತಂ ಸ್ವಾಗತಿಸಿ , ಅತಿಥಿ ಶಿಕ್ಷಕಿ ಚಂದ್ರಕಲಾ ವಂದಿಸಿದರು. ಅತಿಥಿ ಶಿಕ್ಷಕಿ ಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಶಿಕ್ಷಕಿ ಮುಪಿಧಾ ಸಹಕರಿಸಿದರು.