ಪುತ್ತೂರು:ಹತ್ತು ವರ್ಷಗಳ ಹಿಂದೆ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದ ವರನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 2013ನೇ ಮಾರ್ಚ್ ತಿಂಗಳಿನಿಂದ 11-09-2024ರವರೆಗೆ ಬಿಳಿಯೂರು ಗ್ರಾಮದ ಪೆರ್ನೆ ಎ.ಎಂ.ಅಡಿಟೋರಿಯಂ ಬಳಿ ಸಮಿರಾ ತೌಫಿಕ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಜೀನತ್ ಅವರ ಮನೆಗೆ ಆರೋಪಿತ ಖಲಂದರ್ ಶಾಫಿ ಆಗಾಗ ಬಂದು ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದುದಾಗಿ ಆರೋಪಿಸಲಾಗಿದೆ.
16-05-2014ರಂದು ಸಂಜೆ 7 ಗಂಟೆಗೆ ತಾನು ಆರೋಪಿ ಖಲಂದರ್ ಶಾಫಿಯವರು ವಾಸವಾಗಿರುವ, ಪುತ್ತೂರು ಕೆದಿಲ ಗ್ರಾಮದ ಪೇರಮೊಗರು ದರ್ಬೆ ಮನೆಗೆ ಹೋದಾಗ ತನ್ನನ್ನು ಮನೆಯಿಂದ ಹೊರಗೆ ದೂಡಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ಗಾಯವನ್ನುಂಟು ಮಾಡಿದ್ದಾಗಿ ಜೀನತ್ ಆರೋಪಿಸಿದ್ದರು.ಆಕೆ ನೀಡಿದ್ದ ದೂರಿನ ಮೇರೆಗೆ ಪತಿ ಖಲಂದರ್ ಶಾಫಿ,ಆತನ ಮನೆಯವರಾದ ರಫೀಕ್,ಇಬ್ರಾಹಿಂ ಮತ್ತು ಬೀಪಾತುಮ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧಿಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧಿಶರಾದ ಶ್ರೀಮತಿ ಪ್ರಿಯ ರವಿ ಜೋಗ್ಲೆಕರ್‌ರವರು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದ್ದಾರೆ.ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.