ಕೆದಂಬಾಡಿ: ಬ್ಯಾಂಕ್ ಆಫ್ ಬರೋಡ ಪ್ರಾಯೋಜಿತ ವಿಜಯ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇದರ ಕೆದಂಬಾಡಿ ಗ್ರಾಮ ಸಮಿತಿ ಮತ್ತು ಶ್ರೀರಾಮ ಮಂದಿರ ಕೆದಂಬಾಡಿ ಇಲ್ಲಿ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ದೇರಳಕಟ್ಟೆ ಮಂಗಳೂರು ಇಲ್ಲಿನ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಡಿ.21 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಮಂದಿರ ಕೆದಂಬಾಡಿ ಇದರ ಅಧ್ಯಕ್ಷರಾದ ಜೈ ಶಂಕರ್ ರೈ ಬೆದ್ರುಮಾರು ವಹಿಸಿದ್ದರು.
ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡದ ಕುಂಬ್ರ ಶಾಖೆಯ ಪ್ರಬಂದಕರಾದ ಲಕ್ಷ್ಮೀ, ರಾಜು, ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯರಾದ ಜಯಪ್ರಕಾಶ ರೈ ನೂಜಿಬೈಲು, ಪ್ರಗತಿಪರ ಕೃಷಿಕರಾದ ಕಡಮಜಲು ಸುಭಾಸ್ ರೈ, ಯುವರಂಗ (ರಿ) ಕೆದಂಬಾಡಿ ಇದರ ಅಧ್ಯಕ್ಷರಾದ ರಕ್ಷಿತ್ ಗೌಡ ಇದ್ಯಪೆ, ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಸುದಾಮ ರೈ ಬೆದ್ರುಮಾರು ಭಾಗವಹಿಸಿದರು.
ಈ ಶಿಬಿರದಲ್ಲಿ ಇಸಿಜಿ, ಬಿಪಿ, ಶುಗರ್ ತಪಾಸಣೆ, ದಂತ ಚಿಕಿತ್ಸೆ, ಎಲುಬು ಮತ್ತು ಕಾಲು ತಪಾಸಣೆ, ಇ.ಎನ್.ಟಿ ಚಿಕಿತ್ಸೆ, ಚರ್ಮರೋಗ ಹಾಗೂ ನೇತ್ರ ಚಿಕಿತ್ಸೆಯನ್ನು ನಡೆಸಲಾಯಿತು. ಲಯನ್ಸ್ ಕ್ಲಬ್ ಮಂಗಳೂರು ಮತ್ತು ಕೆನರಾ ಬ್ಯಾಂಕ್ ತಿಂಗಳಾಡಿ ಇವರ ಪ್ರಾಯೋಜಕತ್ವದಲ್ಲಿ ಉಚಿತವಾಗಿ ಕನ್ನಡಕವನ್ನು ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ದೇರಳಕಟ್ಟೆ ಆಸ್ಪತ್ರೆಯ ಡಾ. ಆರತಿ, ಡಾ. ಗೌತಮ್, ಡಾ. ಸೋಮಯಾಜಿ, ಡಾ. ಆರ್.ಎ.ಎಸ್ ಕೆದಂಬಾಡಿ ಅಧ್ಯಕ್ಷರಾದ ವಿಜಯ ಕುಮಾರ ರೈ ಕೋರಂಗಿ, ಕೋಶಾಧಿಕಾರಿ ಬಾಲಕೃಷ್ಣ ಚೌಟ ಪಟ್ಟೆತ್ತಡ್ಕ ಉಪಸ್ಥಿತರಿದ್ದರು.
ವಿಜಯ ಕುಮಾರ್ ರೈ ಕೋರಂಗ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣ ಕುಮಾರ್ ಇಡ್ಯಪೆ ವಂದಿಸಿದರು. ನೂತನ್ ಗೌಡ ಇಡ್ಯಪೆ ನಿರೂಪಿಸಿದರು.
200 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಕಣ್ಣಿನ ಆಪರೇಷನ್ ಅಗತ್ಯವಿರುವವರಿಗೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿ, ಗ್ರಾಮ ಪಂಚಾಯತ್ ಕೆದಂಬಾಡಿ, ಯುವರಂಗ (ರಿ) ಕೆದಂಬಾಡಿ ಇವರು ಸಹಕರಿಸಿದರು. ವಿನೋದ್ ರೈ ಮುಂಡಾಳ, ಸಂತೋಷ್ ರೈ ಕೋರಂಗಿ, ಪ್ರಭಾಕರ ರೈ ಮುಂಡಾಳ, ಕರುಣಾಕರ ರೈ ಕೋರಂಗಿ, ನಿತೇಶ್ ರೈ ಕೋರಂಗಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.