ಜ.10: ಸಾರೆಪುಣಿಯಲ್ಲಿ ನೂತನ ಮಸೀದಿ ಉದ್ಘಾಟನೆ

0

ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮುಹಿಯುದ್ದೀನ್ ಜುಮಾ ಮಸೀದಿ ಕಟ್ಟಡದ ಉದ್ಘಾಟನಾ ಸಮಾರಂಭ ಜ.10ರಂದು ನಡೆಯಲಿದೆ.


ದಾರುಲ್ ಉಲೂಮ್ ಮದರಸ ಮತ್ತು ಜಮಾಅತ್ ಕಮಿಟಿ ಸಾರೆಪುಣಿ ಇದರ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್‌ರವರು ವಕ್ಫ್ ನಿರ್ವಹಣೆ ಮತ್ತು ಖುತುಬಾ ಪಾರಾಯಣ ನಿರ್ವಹಿಸಲಿದ್ದು ಮೆಹಬೂಬ್ ಉಮರ್ ಸಾಲಿಮ್ ಅಲ್ ಘರಾಬಿ ಅಲೈನ್ ಅಬುದಾಬಿ ಮತ್ತು ಮಹಮ್ಮದ್ ಮಸೂದ್ ಸಾರೆಪುಣಿ ಅಲೈನ್ ಅಬುದಾಬಿಯವರು ಮಸೀದಿಯನ್ನು ಉದ್ಘಾಟಿಸಲಿದ್ದಾರೆ.


ಅಪರಾಹ್ನ ಗಂಟೆ 3.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸ್ವಾಗತ ಸಮಿತಿ ಚೇರ್‌ಮೆನ್ ಅಬ್ದುಲ್ ಅಝೀಝ್ ಕಟ್ಟತ್ತಾರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಬಿ.ಎಸ್ ಅಬ್ಬಾಸ್ ಮದನಿ ಸಭೆ ಉದ್ಘಾಟಿಸಲಿದ್ದು ಆರ್.ಐ.ಸಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಹಾಗೂ ಕುಂಬ್ರ ಕೆಐಸಿ ವಿದ್ಯಾಸಂಸ್ಥೆಯ ಪ್ರೊ.ಅನೀಸ್ ಕೌಸರಿ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ.

ಅಸ್ಸಯ್ಯದ್ ಅಲ್‌ಹಾದಿ ಯಹ್ಯಾ ತಂಙಳ್ ಪೋಳ್ಯ, ಸ್ಪೀಕರ್ ಯು.ಟಿ ಖಾದರ್, ಆರೋಗ್ಯ ಮತ್ತು ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಸಾರೆಪುಣಿ ದಾರುಲ್ ಉಲೂಮ್ ಮದರಸ ಮತ್ತು ಜಮಾಅತ್ ಕಮಿಟಿಯ ಅಧ್ಯಕ್ಷ ಅಶ್ರಫ್ ಸಾರೆಪುಣಿ, ಸ್ವಾಗತ ಸಮಿತಿಯ ಕನ್ವೀನರ್ ಮುನೀರ್ ನ್ಯಾಷನಲ್ ಉಪಸ್ಥಿತರಿರಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here