ಆಲಂಕಾರು:ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ.7 ರಂದು ನಡೆಯಿತು.ಬೆಳಿಗ್ಗೆ ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ನಾರಾಯಣ ಬಲ್ಯ ಧ್ವಜಾರೋಹಣ ನೇರವೆರಿಸಿದರು. ಪೂರ್ವ ವಿದ್ಯಾರ್ಥಿ ಸಂಘ ಹಾಗೂ ದಾನಿಗಳಿಂದ ನಿರ್ಮಾಣಗೊಂಡ ನೂತನ ಕ್ರೀಡಾಂಗಣದ ಉದ್ಘಾಟನೆಯನ್ನು ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಬಾಕಿಲ ನೆರವೇರಿಸಿದರು.
ಬೆಳಿಗ್ಗೆಯ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಲಂಕಾರು ವಲಯ ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಜನಾರ್ಧನ ಗೌಡ ಕಯ್ಯಪೆ ,ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಗೌಡ ,ಆಲಂಕಾರು ದುರ್ಗಾಂಬಾ ಪದವಿಪೂರ್ವ ವಿದ್ಯಾಲಯ ಆಡಳಿತಾಧಿಕಾರಿ ಶ್ರೀಪತಿ ರಾವ್ ಉಪಸ್ಥಿತಿಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಪೂರ್ವವಿದ್ಯಾರ್ಥಿ ಸಂಘದ ಸಂಯೋಜನೆಯಲ್ಲಿ ನಡೆಯಿತು.
ಸಂಜೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಸಭಾ ಕಾರ್ಯಕ್ರಮ ನಡೆಯಿತು.ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ದಂಬೆಕಾನ ಸದಾಶಿವ ರೈ ಯವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಅಡಳಿತ ಮಂಡಳಿ ಮತ್ತು ಪೋಷಕರ ಸಹಕಾರ ಅಗತ್ಯ.ಗುರಿ ಮತ್ತು ಗುರು ಇದ್ದರೆ ಮಾತ್ರ ಉತ್ತಮ ಮಾನವನಾಗಲೂ ಸಾಧ್ಯ ಈ ದಿಶೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಕಡಬ ನೋಟರಿ ವಕೀಲರಾದ ರಮೇಶ್ ಎನ್.ಸಿ ರಾಮಕುಂಜ ಮಾತನಾಡಿ, ಕಾಲೇಜಿನ ವಾರ್ಷಿಕೋತ್ಸವ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣ ಮಾಡಲು ಇರುವಂತಹ ವೇದಿಕೆ ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ. ನಮ್ಮ ಜೀವನದಲ್ಲಿ ಉತ್ತಮ ಕೆಲಸ ಕಾರ್ಯಗಳಿಗೆ ಮೊಬೈಲ್ ನ್ನು ಬಳಕೆ ಮಾಡಬೇಕು.ವಿದ್ಯಾರ್ಥಿಗಳು ವಿದ್ಯಾಸಂಸ್ಥೆಗೆ ಬರುವಾಗ ಅವಿದ್ಯಾವಂತನಾಗಿರುತ್ತಾನೆ, ವಿದ್ಯಾಸಂಸ್ಥೆಯಿಂದ ಶಿಕ್ಷಣ ಮುಗಿಸಿ ಹೊರಬರುವ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಸಂಸ್ಕಾರಯುತ ವಿದ್ಯಾರ್ಥಿಗಳಾಗಿ ವಿದ್ಯಾಸಂಸ್ಥೆಯಿಂದ ಹೊರಹೊಮ್ಮಿ, ಸತ್ಪ್ರಜೆಗಳಾಗಿ ಬಾಳಬೇಕೆಂದರು.
ಸರೋಜ ಉಮೇಶ್ ರೈ ಮನವಳಿಕೆ ಪದಕ ಮನೆ ಕಡಬದವರು ಮಾತನಾಡಿ, ದುರ್ಗಾಂಬಾ ವಿದ್ಯಾವರ್ಧಕ ಸಂಘದ ವಾರ್ಷಿಕೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದು ನನ್ನ ಪತಿ ಉಮೇಶ್ ರೈ ಮನವಳಿಕೆಯವರಿಗೆ ಸಂದ ಗೌರವ ಅವರು ಈ ವಿದ್ಯಾಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರು.ಮನುಷ್ಯ ಜೀವನದ ಅರ್ಧಭಾಗವನ್ನು ನಿದ್ದೆ ಹಾಗೂ ಇನ್ನೀತರ ಚಟುವಟಿಕೆಯಲ್ಲಿ ಕಳೆದುಕೊಳ್ಳುತ್ತಾನೆ ಉಳಿದ ಅರ್ಧಭಾಗದಲ್ಲಿ ಆತ ಸಾಧನೆಯನ್ನು ಮಾಡಬೇಕು,ಮಕ್ಕಳ ವಿದ್ಯಾಭ್ಯಾಸದ ಸಂಧರ್ಭದಲ್ಲಿ ವಿಷಯದ ಆಯ್ಕೆಯ ಬಗ್ಗೆ ಸ್ವಾತಂತ್ರ್ಯ ನೀಡಬೇಕು. ವಿದ್ಯಾರ್ಥಿ ಗಳು ಸಮಯದ ಪಾಲನೆ,ಶಿಸ್ತುಬದ್ದವಾಗಿ ಶಿಕ್ಷಣವನ್ನು ಮುಂದುವರಿಸಿದರೆ ಮಾತ್ರ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ ಕೊಂಡಾಡಿ,ಸಿ.ಆರ್.ಪಿ.ಎಫ್ ಪ್ರಕಾಶ್ ಬಾಕಿಲ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.ಸಭಾಧ್ಯಕ್ಷತೆ ವಹಿಸಿದ ಅಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ವಾರ್ಷಿಕೋತ್ಸವ ಸಂಧರ್ಭದಲ್ಲಿ ವಿದ್ಯಾರ್ಥಿ ,ವಿದ್ಯಾರ್ಥಿನಿಯರ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯ ಸಾಧನೆಗಳು ಅನಾವರಣಗೊಳ್ಳುತ್ತದೆ.ದುರ್ಗಾಂಬಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ,ವಿದ್ಯಾರ್ಥಿನಿಯರು ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಕ್ಕೆ ಕಾರಣೀಕರ್ತರಾದ ಅಡಳಿತ ಮಂಡಳಿ,ಭೋದಕ,ಭೋದಕೇತರ ವರ್ಗದವರಿಗೆ,ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಊರಿನವರಿಗೆ ಅಭಿನಂದನೆ ಸಲ್ಲಿಸಿ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವುದು ಬಹಳ ಕಷ್ಟದ ಕೆಲಸ ಇಲ್ಲಿ 16 ಸಿಬ್ಬಂದಿಗಳು ಇದ್ದಾರೆ ಇದರಲ್ಲಿ 5 ಮಂದಿಗೆ ಸರಕಾರದ ಸಂಬಳ ಬರುತ್ತದೆ ಉಳಿದ 11 ಮಂದಿಗೆ ಗೌರವಧನ ನೀಡಿ ಸಂಸ್ಥೆಯನ್ನು ಮುಂದುವರಿಸುವುದಾಗಿ ತಿಳಿಸಿ, ಈ ವಿದ್ಯಾಸಂಸ್ಥೆಯಲ್ಲಿ ಇನ್ನಷ್ಟು ಕಟ್ಟಡ ಹಾಗು ಅಭಿವೃದ್ಧಿ ಕೆಲಸ ಕಾರ್ಯಗಳು ಮುಂದಕ್ಕೆ ನಡೆಯಲಿದೆ ಇದಕ್ಕೆಲ್ಲಾ ಊರ ಹಾಗೂ ಪರವೂರ ವಿದ್ಯಾಭಿಮಾನಿಗಳು ಸಹಕರಿಸುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ಕ್ರೀಡೆಯ ಬಹುಮಾನ,ವಿದ್ಯೆ ಹಾಗೂ ಕ್ರೀಡೆಯಲ್ಲಿ ಜಿಲ್ಲೆ,ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ದೈಹಿಕ ನಿರ್ದೆಶಕರಾದ ಶ್ರೇಯಸ್ಸು ರೈ ಯವರಿಗೆ,ಎಸ್.ಎಸ್ ಎಲ್.ಸಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂಕ ಪಡೆದ ಅಭಿಲಾಷ ಪಿ.ಡಿ,ತನಗೆ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಮಾನವೀಯತೆಯಿಂದ ವಾರೀಸುದಾರರಿಗೆ ನೀಡಿದ ಊಮಲಕ್ಷಣ್ ಪೂಜಾರಿ ಯವರಿಗೆ ಸಭೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅಡಳಿತ ಮಂಡಳಿಯ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ,ಅಡಳಿತ ಮಂಡಳಿಯ ಸದಸ್ಯರಾದ ವಿಜಯಕುಮಾರ್ ರೈ ಮನವಳಿಕೆ,ಮುತ್ತಪ್ಪ ಪೂಜಾರಿ ನೈಯ್ಯಲ್ಗ, ತಾರನಾಥ ರೈ ನಗ್ರಿ, ಹೇಮಂತ್ ರೈ ಮನವಳಿಕೆ, ರಾಮರಾಜ ನಗ್ರಿ,ದಯಾನಂದ ಆಲಡ್ಕ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಗೌಡ,ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ನಾರಾಯಣ ಬಲ್ಯ,ಆಲಂಕಾರು ವಲಯ ಮಜ್ದೂರ್ ಅಧ್ಯಕ್ಷ ಜನಾರ್ಧನ ಗೌಡ ಕಯ್ಯಪೆ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀನಾಥ್ ಗೌಡ ಪಿ,ಕಾಲೇಜು ನಾಯಕ ವಿಘ್ನೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆಡಳಿತಾಧಿಕಾರಿ ಶ್ರೀಪತಿ ರಾವ್ ಹೆಚ್ಚ್ ಸ್ವಾಗತಿಸಿ,ಮುಖ್ಯಗುರುಗಳಾದ ನವೀನ್ ಕುಮಾರ್ ರೈ ವರದಿ ವಾಚಿಸಿ,ಬಹುಮಾನ ಪಟ್ಟಿಯನ್ನು ಕಾಲೇಜಿನ ಭೋಧಕ ವರ್ಗದ ನಿವ್ಯಾ ರೈ,ಆಶಾ,ಶ್ರೇಯಸ್ಸು ರೈ ವಾಚಿಸಿ, ಜನಾರ್ಧನ ಹಾಗೂ ವಿದ್ಯಾರ್ಥಿನಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ಪ್ರಾಂಶುಪಾಲರಾದ ರೂಪಾ ಎಂ.ಟಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಭೋದಕ,ಭೋದಕೇತರ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.
ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ , ತುಳು ಹಾಸ್ಯಮಯ ನಾಟಕ “ನಂಬುನ ದುಂಬು” ಪ್ರದರ್ಶನ ನಡೆಯಿತು.