ಪುತ್ತೂರು: ಸರಕಾರಕ್ಕೆ ಪಾವತಿಸಬೇಕಾದ ವಿವಿಧ ತೆರಿಗೆಗಳ ಬಗ್ಗೆ ಕೆಯ್ಯೂರು ಗ್ರಾಮ ಪಂಚಾಯತ್‌ನಿಂದ ತೆರಿಗೆ ವಸೂಲಿ ಅಭಿಯಾನ ಜ.9 ರಂದು ನಡೆಯಿತು.
ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ದಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ,ಕುಡಿಯುವ ನೀರು ಬಳಕೆದಾರ ಸಮಿತಿ ಕೋಶಾಧಿಕಾರಿ ತಾರನಾಥ ಕಂಪ ಹಾಗೂ ಸಿಬ್ಬಂದಿಗಳು ಗ್ರಾಮದ ಹಲವು ಕಡೆಗಳಲ್ಲಿ ಸಂಚರಿಸಿ ತೆರಿಗೆ ವಸೂಲಿಯೊಂದಿಗೆ ಜಾಗೃತಿ ಮೂಡಿಸಿದರು. ಗ್ರಾಮದ ಬೊಳಿಕ್ಕಲ, ಕಂಚಿನಪದವು, ಪರ್ತ್ಯಡ್ಕ, ಮಾಡಾವುಕಟ್ಟೆ ಇತ್ಯಾದಿ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸಿದರು.
ವಿಶೇಷವಾಗಿ ಕುಡಿಯುವ ನೀರಿನ ಶುಲ್ಕ ಪಾವತಿಸದೆ ಬಾಕಿ ಇರಿಸಿಕೊಂಡವರಲ್ಲಿ ರೂ.2 ಸಾವಿರಕ್ಕೂ ಅಧಿಕ ಬಾಕಿ ಇರಿಸಿಕೊಂಡವರ ನೀರಿನ ಸಂಪರ್ಕವನ್ನು ಕಡಿತ ಮಾಡಲಾಯಿತು. ಸ್ಚಚ್ಚತೆಗೆ ಹೆಚ್ಚಿನ ಗಮನ ಕೊಡುವ ನಿಟ್ಟಿನಲ್ಲಿ ಒಣಕಸ ಸಂಗ್ರಹ ಬ್ಯಾಗ್‌ಗಳನ್ನು ಕೂಡ ವಿತರಣೆ ಮಾಡಲಾಯಿತು. ಮನೆ ತೆರಿಗೆ, ಕಟ್ಟಡ ತೆರಿಗೆ, ಬಾಡಿಗೆ ಇತ್ಯಾದಿ ಸರಕಾರಿ ಪಾವತಿಗಳನ್ನು ಕೂಡಲೇ ಪಂಚಾಯತ್‌ಗೆ ಪಾವತಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಗ್ರಾಮಸ್ಥರಲ್ಲಿ ವಿನಂತಿಸಿಕೊಂಡರು. ತಂಡದಲ್ಲಿ ಗ್ರಾಪಂ ಸಿಬ್ಬಂದಿಗಳಾದ ಮಾಲತಿ, ಧರ್ಮಣ್ಣ, ವಾಟರ್‌ಮ್ಯಾನ್ ಗೀತ, ಪ್ಲಂಬರ್ ರಮೇಶ್ ಇದ್ದರು.