ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿ ಜನವರಿ 8 ಮತ್ತು 9ರಂದು ನಡೆದ ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ 14 ಮತ್ತು17 ವಯೋಮಾನದ ಬಾಲಕರ ತಂಡಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
17ರ ವಯೋಮಾನದ ಬಾಲಕರ ವಿಭಾಗದಲ್ಲಿ 10ನೇ ತರಗತಿಯ ಆಕಾಶ್ ರೈ, ಅಕ್ಷಜ್ ಶೆಟ್ಟಿ, ತನ್ವಿತ್, ಅಹಮ್ಮದ್ ಶಬೀರ್, ಪುನೀತ್, 9ನೇ ತರಗತಿಯ ಚಿಂತನ್ ಕೆ.ಸಿ, ಆಯುಶ್ ಎಸ್ ಶೆಟ್ಟಿ, ಕವೀಶ್ ಬಿ.ಕೆ, ಭಾಗವಹಿಸಿರುತ್ತಾರೆ.
14 ರ ವಯೋಮಾನದ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ಆಯತ್ತುಲ್ಲಾ ಸಲೀಮ್, 7ನೇ ತರಗತಿಯ ಶಿಶಿರ್ ಜೆ. ಸಾಲ್ಯಾನ್, ಮುಹಮ್ಮದ್ ಇರಾಝ್, ಸುಜಿತ್, ಸ್ವರ್ಣೇಶ್, ಆಯುಶ್ ಡಿ. ಪೂಜಾರಿ, ವಚನ್ ಕನ್ಯಾನ, ಮೊಹಮ್ಮದ್ ಅಫಾಮ್ ಭಾಗವಹಿಸಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ, ಶ್ರೀರಂಜಿನಿ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.