ಪುತ್ತೂರು ಅರುಣಾ ಕಲಾ ಮಂದಿರದಲ್ಲಿ ಪ್ರಸಿದ್ದ ಪಿ.ಎಸ್.ಆರ್ ಸಿಲ್ಕ್ಸ್ ಸಾರೀಸ್ ಬೃಹತ್ ಪ್ರದರ್ಶನ, ಮಾರಾಟಕ್ಕೆ ಚಾಲನೆ

0

ಸೀರೆ ಖರೀದಿಸಲು ಮುಗಿಬಿದ್ದ ಗ್ರಾಹಕರು

ಪುತ್ತೂರು: ಹೆಸರಾಂತ ಪಿ.ಎಸ್.ಆರ್ ಸಿಲ್ಕ್ಸ್ ಸಾರೀಸ್ ಇದರ ಬೃಹತ್ ಪ್ರದರ್ಶನ ಮತ್ತು ಮಾರಾಟ ಅರುಣಾ ಕಲಾ ಮಂದಿರದಲ್ಲಿ ಜ.10ರಂದು ಪ್ರಾರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೀರೆ ಖರೀದಿಸುತ್ತಿರುವುದು ಕಂಡು ಬಂದಿದೆ. ಬೆಳಿಗ್ಗೆ 10 ಗಂಟೆಗೆ ಪ್ರದರ್ಶನ ಮತ್ತು ಮಾರಾಟ ಪ್ರಾರಂಭಗೊಂಡಿದ್ದು, ಆ ವೇಳೆಯೇ ನೂರಾರು ಗ್ರಾಹಕರು ಇದ್ದರು ಎನ್ನುವುದು ವಿಶೇಷ.

ಜ.13ರ ವರೆಗೆ ಬೆಳಿಗ್ಗೆ ಗಂಟೆ 10ರಿಂದ ರಾತ್ರಿ ಗಂಟೆ 8ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸಿಲ್ಕ್ ಸೀರೆಗಳು, ಕಾಟನ್ ಸೀರೆಗಳು, ಫ್ಯಾನ್ಸಿ ಸೀರೆಗಳು, ಸೆಲ್ವಾರ್ ಮೆಟೀರಿಯಲ್ಸ್ ಸೇರಿದಂತೆ ಕೊಯಮುತ್ತೂರಿನ ಪಿಎಸ್‌ಆರ್ ಫ್ಯಾಕ್ಟರಿ ಸಾರಿಗಳು ರೂ.400ರಿಂದ ರೂ.20 ಸಾವಿರ ವರೆಗಿನ ವಿವಿಧ ಗುಣಮಟ್ಟದ ವೆರೈಟಿ ಸೀರೆಗಳು ಇಲ್ಲಿ ಲಭ್ಯವಿದೆ.

ಕದ್ರಿಯಲ್ಲಿ ಪಿಎಸ್‌ಆರ್ ಸಿಲ್ಕ್ಸ್ ಸಾರೀಸ್‌ನ ನೂತನ ಮಳಿಗೆ ಶುಭಾರಂಭಗೊಂಡ ಪ್ರಯುಕ್ತ ಈ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದು ಪಿಎಸ್‌ಆರ್ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here