ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ ಎಚ್. ಶೆಟ್ಟಿ, ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನ ನೀಡಿ ಗೆಲುವು ಪಡೆದಿದ್ದಾರೆ. ಹಿಬಾ ಉತ್ತಮ ಆಟಗಾರ್ತಿಯಾಗಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ದೈಹಿಕ ಶಿಕ್ಷಕ ನಿರಂಜನ್ ಹಾಗೂ ಅಕ್ಷಯ್ ತರಬೇತಿ ನೀಡಿರುತ್ತಾರೆ. ತಂಡದ ವ್ಯವಸ್ಥಾಪಕಿಯಾಗಿ ಅನಿತಾಸಿಯ ಗೋನ್ಸಲ್ವಸ್ ತಂಡವನ್ನು ಮುನ್ನಡೆಸಿದರು. ಎಂದು ಶಾಲಾ ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರರವರು ತಿಳಿಸಿರುತ್ತಾರೆ.