ಡೊನ್ ಬೊಸ್ಕೊ ಕ್ಲಬ್‌ನಿಂದ ಪುತ್ತೂರು/ಮರೀಲು/ಬನ್ನೂರು ವ್ಯಾಪ್ತಿಯ ‘ಸಿಪಿಎಲ್-ಸೀಸನ್-4’ ಕ್ರಿಕೆಟ್ ಉದ್ಘಾಟನೆ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ ‘ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2025-ಸೀಸನ್ 4’ ಇದರ ಉದ್ಘಾಟನೆಯು ಜ.12 ರಂದು ದರ್ಬೆ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿತು.


ಮುಖ್ಯ ಅತಿಥಿ, ಮಂಗಳೂರು ಕರ್ನಾಟಕ ಬ್ಯಾಂಕ್ ಪ್ರಧಾನ ಶಾಖೆಯ ಸಹಾಯಕ ಪ್ರಬಂಧಕರಾದ ಕ್ಯಾಲ್ವಿನ್ ಜೋನ್ ಮಸ್ಕರೇನ್ಹಸ್ ಹಾಗೂ ಕ್ಲಬ್ ಅಧ್ಯಕ್ಷ ಅಂತೋನಿ ಒಲಿವೆರಾ ರವರು ಜೊತೆಗೂಡಿ ಸಂತ ಫಿಲೋಮಿನಾ ಪ್ರೌಢಶಾಲೆಯ ಬಳಿಯ ಶಿಕ್ಷಣ ಶಿಲ್ಪಿ ಮೊ|ಪತ್ರಾವೋ ರವರ ಪ್ರತಿಮೆಗೆ ಹೂಹಾರ ಹಾಕುವ ಮೂಲಕ ಸಿಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಡೊನ್ ಬೊಸ್ಕೊ ಕ್ಲಬ್ ಪುತ್ತೂರು ಕಾರ್ಯದರ್ಶಿ ಅನಿಲ್ ಪಾಸ್, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ಡಿ’ಸೋಜ, ಸಂಯೋಜಕರಾದ ರಾಕೇಶ್ ಜೆ.ಮಸ್ಕರೇನ್ಹಸ್, ಆಲನ್ ಮಿನೇಜಸ್, ದರ್ಬೆ ಸೈಂಟ್ ಲಾರೆನ್ಸ್ ಸಾ ಮಿಲ್ ಹಾಗೂ ವುಡ್ ಇಂಡಸ್ಟ್ರೀಸ್ ಮಾಲಕ ಸಿಲ್ವೆಸ್ಟರ್ ಡಿ’ಸೋಜ, ಮುಖ್ಯರಸ್ತೆ ನಗರ ಪೊಲೀಸ್ ಠಾಣಾ ಬಳಿಯ ಸೋಜಾ ಮೆಟಲ್ ಮಾರ್ಟ್ ಮಾಲಕ ದೀಪಕ್ ಮಿನೇಜಸ್, ಡೊನ್ ಬೊಸ್ಕೊ ಕ್ಲಬ್ ಮಾಜಿ ಅಧ್ಯಕ್ಷ ಫೆಬಿಯನ್ ಗೋವಿಯಸ್, ತಂಡದ ಮಾಲಕರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


6 ತಂಡಗಳು:
ಪಂದ್ಯಾಕೂಟದಲ್ಲಿ ಕಲ್ಲಾರೆ ರೋಶನ್ ರೆಬೆಲ್ಲೋ ಮಾಲಕತ್ವದ ಸಿಝ್ಲರ್ ಸ್ಟ್ರೈಕರ‍್ಸ್, ದರ್ಬೆ ದೀಪಕ್ ಮಿನೇಜಸ್ ಮಾಲಕತ್ವದ ಸೋಜಾ ಸೂಪರ್ ಕಿಂಗ್ಸ್, ಕಿರಣ್ ಡಿ’ಸೋಜ ನೀರ್ಪಾಜೆ ಹಾಗೂ ಮೆಲ್ವಿನ್ ಪಾಸ್ ನೂಜಿ ಮಾಲಕತ್ವದ ಕ್ರಿಶಲ್ ವಾರಿಯರ‍್ಸ್, ಪ್ರದೀಪ್ ವೇಗಸ್(ಬಾಬಾ) ಶಿಂಗಾಣಿ ಮಾಲಕತ್ವದ ಫ್ಲೈ ಝೋನ್ ಅಟ್ಯಾಕರ‍್ಸ್, ಕೂರ್ನಡ್ಕ ಸಿಲ್ವೆಸ್ತರ್ ಡಿ’ಸೋಜ ಮಾಲಕತ್ವದ ಎಸ್.ಎಲ್ ಗ್ಲ್ಯಾಡಿಯೇಟರ‍್ಸ್, ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ‍್ಸ್ ತಂಡಗಳ ನಡುವೆ ನಾಲ್ಕನೇ ಆವೃತ್ತಿಯ ಪಂದ್ಯಾಕೂಟದ ಟ್ರೋಫಿಯನ್ನು ಮುತ್ತಿಕ್ಕಲು ಜಿದ್ದಾಜಿದ್ದಿನ ಹೋರಾಟದಲ್ಲಿ ಭಾಗವಹಿಸುತ್ತಿದೆ.


ಬಹುಮಾನಗಳ ಆಗರ:
ಈ ಟೂರ್ನಿಯಲ್ಲಿ ಚಾಂಪಿಯನ್ ತಂಡಕ್ಕೆ ರೂ.25000/-ಹಾಗೂ ಸಿಪಿಎಲ್ ಟ್ರೋಫಿ, ರನ್ನರ‍್ಸ್ ವಿಜೇತ ತಂಡಕ್ಕೆ ರೂ.20000/-ಹಾಗೂ ಸಿಪಿಎಲ್ ಟ್ರೋಫಿ ಜೊತೆಗೆ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟರ್, ಬೆಸ್ಟ್ ಅಲೌರೌಂಡರ್, ಸರಣಿಶ್ರೇಷ್ಟ, ಗೇಮ್ ಚೇಂಜರ್, ಬೆಸ್ಟ್ ಕೀಪರ್, ಬೆಸ್ಟ್ ಫೀಲ್ಡರ್, ಬೆಸ್ಟ್ ಸ್ಟ್ಯಾಂಡಿಂಗ್ ಪ್ಲೇಯರ್, ಪಿಂಚ್ ಹಿಟ್ಟರ್, ವ್ಯಾಲ್ಯುವೇಬಲ್ ಪ್ಲೇಯರ್ ಪ್ರಶಸ್ತಿ ಜೊತೆಗೆ ಪ್ರತಿ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿಗಳನ್ನು ನೀಡಲಾಗುತ್ತದೆ.


17 ಪಂದ್ಯಗಳು..
ಲೀಗ್, ಸೆಮಿಫೈನಲ್, ಫೈನಲ್ ಹೀಗೆ ಒಟ್ಟು ೧೭ ಪಂದ್ಯಗಳು ಜರಗಲಿದೆ. ಗ್ರೌಂಡ್ ‘ಎ’ ಹಾಗೂ ಗ್ರೌಂಡ್ ‘ಬಿ’ ಎಂಬಂತೆ ಒಂದೇ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಸ್ವಾದಿಸುವಂತೆ ಸಂಘಟಕರು ಪ್ರೇಕ್ಷಕರಿಗೆ ಅನುವು ಮಾಡಿಕೊಟ್ಟಿದ್ದಾರೆ.

ಟೇಬಲ್ ಟಾಪ್ ನೇರ ಫೈನಲಿಗೆ..
ಲೀಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾಕೂಟದಲ್ಲಿ ಅಂಕಪಟ್ಟಿ(ಟೇಬಲ್ ಟಾಪ್)ಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ನೇರವಾಗಿ ಫೈನಲಿಗೆ ಅರ್ಹತೆ ಪಡೆಯಲಿದೆ. ಬಳಿಕದ ಎರಡನೇ ಹಾಗೂ ಮೂರನೇ ಸ್ಥಾನ ಪಡೆದ ತಂಡಗಳ ಮಧ್ಯೆ ಸೆಮಿಫೈನಲ್ ನಡೆಯಲಿದ್ದು, ಇದರಲ್ಲಿ ವಿಜೇತವಾದ ತಂಡವು ಫೈನಲಿಗೆ ನೆಗೆಯಲಿದೆ.

LEAVE A REPLY

Please enter your comment!
Please enter your name here