ಪುತ್ತೂರು: ಕಲ್ಲಾರೆ ನಿವಾಸಿ ದರ್ಬೆ ಪ್ರಕಾಶ್ ಟೈಲರ್ನ ಮಾಲಕ ರಾಮ್ದಾಸ್ ಎಂ. ಅವರ ಶ್ರದ್ದಾಂಜಲಿ ಕಾರ್ಯಕ್ರಮ ಜ.12 ರಂದು ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ನಡೆಯಿತು.
ಕಾಸರಗೋಡು ಜಿಲ್ಲಾ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷರು ಮತ್ತು ಸಂಬಂಧಿಕರೂ ಆಗಿರುವ ಗೋಪಾಲ್ ಜೋಗಿ ಮಂಜೇಶ್ವರ ಅವರು ನುಡಿನಮನ ಸಲ್ಲಿಸಿದರು. ಈ ಸಂದರ್ಭ ರಾಮ್ದಾಸ್ ಅವರ ಪತ್ನಿ ಕಸ್ತೂರಿ ಎಂ, ಪುತ್ರ ಸೂರ್ಯಪ್ರಕಾಶ್ ಎಂ, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆ, ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.