ಬುರೂಜ್ ಶಾಲೆಯಲ್ಲಿ ಸಿಲ್ವರ್ ಗ್ರಾಟಿಟ್ಯೂಡ್ ಗಾಲ ಸಂಭ್ರಮಾಚರಣೆ

0

ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಕಲಾಬಾಗಿಲು ಇಲ್ಲಿ 25 ವರುಷ ತುಂಬಿದ ಹಿನ್ನಲೆ ಸಿಲ್ವರ್ ಗ್ರಾಟಿಟ್ಯೂಡ್ ಗಾಲ ಸಂಭ್ರಮಾಚರಣೆ ಇತ್ತೀಚೆಗೆ ನಡೆಯಿತು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಉದ್ಘಾಟನೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಮುನೀರ್ ಕಾಟಿಪಳ್ಳ ನೆರವೇರಿಸಿ ಸಂಸ್ಥೆಯ ಬಗ್ಗೆ ಅಭಿಮಾನಪಟ್ಟರು. 25 ವರುಷ ಸಾಗಿ ಬಂದ ಚಿತ್ರಣದ ಉದ್ಘಾಟನೆಯನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಕ್ರೀಡಾ,ಕರಾಟೆ,ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಸಾಧಕರಾದ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತ ಜಿ.ಮೊಹಮ್ಮದ್ ಹನೀಫ್ ಹಾಜಿ,ಸಮಾಜ ಸುಧಾರಕ ಮತ್ತು ಮಾಜಿ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ್ ಶೆಟ್ಟಿ ಸೇವಾ, ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಯಶ್ರೀ ಸಿ ಸಾಲ್ಯಾನ್,ವಿಮಲಾ, ನೂರ್ ಜಹಾನ್,ಕರಾಟೆ ಶಿಕ್ಷಕ ಮೊಹಮ್ಮದ್ ನದೀಮ್ ರವರನ್ನು ಸನ್ಮಾನಿಸಲಾಯಿತು. ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ರವರಿಗೆ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಸನ್ಮಾನಿಸಲಾಯಿತು.

ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ಎಸ್.ಪೂಜಾರಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಜಮೀಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಜೆಮ್ ಪಬ್ಲಿಕ್ ಸ್ಕೂಲ್ ನ ಸಂಚಾಲಕ ಜಿ.ಅಹ್ಮದ್ ಮುಸ್ತಫಾ, ಯಶಸ್ವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಮೊಹಮ್ಮದ್ ರಫೀಕ್, ವಿಶ್ವ ಕನ್ನಡಿಗ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್ ಹಮೀದ್ ಸಿ.ಎಚ್, ಶಿಕ್ಷಕ -ರಕ್ಷಕ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಧ್ವ, ದಿನೇಶ್ ಶೆಟ್ಟಿ ದಂಡೆ, ಗುಡ್ ಫ್ಯೂಚರ್ ಚೇರ್ಮನ್ ನಾಸಿರ್ ಖಾನ್, ನಾಟಕ ಬರಹಗಾರ ಬಾಲಕೃಷ್ಣ ಅಂಚನ್ ಕಾವಳಕಟ್ಟೆ, ನೂತನವಾಗಿ ಆಯ್ಕೆಯಾದ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೋ,ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಅಝೀಝ್, ಮೂಡುಪಡುಕೋಡಿಯ ನಿವೃತ್ತ ಹಿರಿಯ ಶಿಕ್ಷಕಿ ವಸಂತಿ ಜಿ.ಕೆ ಭಟ್ , ಇರ್ವತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಸುಧೀಂದ್ರ ಶೆಟ್ಟಿ ಮತ್ತು ಪ್ರಶಾಂತ್ ಜೈನ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವರಾಜ್ ಶಿಂಧೆ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಸಿನಾನ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆಶಿಸ್ ಪೂಜಾರಿ, ಕಾವಳಮೂಡೂರು ಪಂಚಾಯತ್ ನ ಖಲೀಲ್ ಅಹ್ಮದ್, ಸಮಾಜ ಸೇವಕ ಸದಾನಂದ ಶೆಟ್ಟಿ ,2024 ರ ಎಸ್ ಎಸ್.ಎಲ್.ಸಿ.ಟಾಪರ್ ಇಶ್ರತ್ ಬಾನು ಶಾಲಾ ನಾಯಕ ಮೊಹಮ್ಮದ್ ಆಸೀಂ ಉಪಸ್ಥಿತರಿದ್ದರು.

ಶಾಲಾ ವಾಹನ ಚಾಲಕರಿಗೆ ,ಕ್ರೀಡಾ ಶಿಕ್ಷಕರಿಗೆ, ನೃತ್ಯ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು. ಎಲ್ಲಾ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಸ್ವಾಗತಿಸಿದರು. ಚೇತನಾ ವಂದಿಸಿದರು. ಹಮೀದ್ ಗೋಳ್ತಮಜಲು ಮತ್ತು ರಝೀಯಾ ಎಸ್.ಪಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here