ಪುತ್ತೂರು: ಕರ್ನಾಟಕ ರಾಜ್ಯ ಡಾ . ಗಂಗೂಬಾಯಿ ಹಾನಗಲ್ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಸಾಂದೀಪನಿ ವಿದ್ಯಾಸಂಸ್ಥೆಯ ಏಳನೇ ತರಗತಿ ವಿದ್ಯಾರ್ಥಿನಿ ಕೃಪಾ.ಎಲ್.ಎಸ್ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆಯಾಗಿದ್ದಾರೆ.
ವಿದ್ವಾನ್ ಗೋಪಾಲಕೃಷ್ಣ ವೀರಮಂಗಲರವರ ಶ್ರೀ ಕೃಷ್ಣ ಕಲಾಕೇಂದ್ರ ಭಕ್ತ ಕೋಡಿ ಶಾಖೆಯ ಶಿಷ್ಯಯಾದ ಇವರು ಪುತ್ತೂರು ತಾಲೂಕಿನ ಸರ್ವೆ ತಂಬುತ್ತಡ್ಕ ಲೋಕೇಶ್ ಎಸ್ ಮತ್ತು ಕವಿತಾ ದಂಪತಿಯ ಪುತ್ರಿಯಾಗಿದ್ದಾರೆ.