ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ನೂತನ ಅಧ್ಯಕ್ಷರ ಪದಪ್ರದಾನ

0

ಪುತ್ತೂರಿನಲ್ಲಿ ಎಲ್ಲವೂ ಸರಿಯಾಗಿದೆ- ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಪುತ್ತೂರು: ಅಭಿಪ್ರಾಯ ಭಿನ್ನಾಭಿಪ್ರಾಯ ಎಲ್ಲವೂ ಇರುತ್ತದೆ. ಆದರೆ ಸರಿ ಮಾಡಿಕೊಂಡು ಹೋಗುವ ಮನಸ್ಸು ಎಲ್ಲಿ ಇರುತ್ತದೆಯೋ ಆಗ ಎಲ್ಲವೂ ಸರಿಯಾಗುತ್ತದೆ. ಹಾಗಾಗಿ ಪುತ್ತೂರಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಪುತ್ತೂರು ಜೈನವನದಲ್ಲಿ ಜ.13ರಂದು ನಡೆದ ಬಿಜೆಪಿ ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲದ ಸಂಘಟನಾ ಪರ್ವದಲ್ಲಿ ಅವರು ಬಿಜೆಪಿ ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ನೂತನ ಅಧ್ಯಕ್ಷರುಗಳಿಗೆ ಪದಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಂಬಾ ಜನರ ಪರಿಶ್ರಮದ ಆಧಾರದ ಮೇಲೆ ಹಿಂದುತ್ವ ಮತ್ತು ಸಂಘಟನಾತ್ಮಕ ಕೆಲಸದ ಜೊತೆಗೆ ಬಿಜೆಪಿಯನ್ನು ಗಟ್ಟಿಗೊಳಿಸುವ ಕೆಲಸ ಪುತ್ತೂರಿನಲ್ಲಿ ನಡೆಯುತ್ತಿದೆ. ಇದರ ಜೊತೆಗೆ 1 ಲಕ್ಷಕ್ಕೆ ಹೆಚ್ಚು ಮತ ಲೋಕಸಭಾ ಕ್ಷೇತ್ರಕ್ಕೆ ಕೊಡುವ ಮೂಲಕ ಪುತ್ತೂರಿನ ಬಿಜೆಪಿಯ ಪರಿವಾರ ಸಂಘಟನೆ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲೂ ಉತ್ತಮ ಕೆಲಸ ಮಾಡಲಾಗಿದೆ. ಒಟ್ಟು ಈ ಚುನಾವಣೆಯ ಕೆಲಸದ ಜೊತೆಗೆ ಸದಸ್ಯತ್ವ ಅಭಿಯಾನವನ್ನು ಈ ಕ್ಷೇತ್ರದಲ್ಲಿ 39ಸಾವಿರಕ್ಕೂ ಹೆಚ್ಚು ಸದಸ್ಯತನ ಮಾಡುವ ಮೂಲಕ ಪುತ್ತೂರಿನಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಸಂದೇಶ ನೀಡಿದ್ದೀರಿ. ಸಕ್ರೀಯ ಸದಸ್ಯರನ್ನು ಜೋಡಿಸುವ ಕೆಲಸ ಆಗಿದೆ. ಬೂತ್ ಸಮಿತಿ ಆಯ್ಕೆಯ ವಿಚಾರದಲ್ಲೂ ಒಳ್ಳೆಯ ಕೆಲಸ ಆಗಿದೆ. ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ರಾಜಕೀಯ ಪಾರ್ಟಿಯಲ್ಲಿ ಈ ರೀತಿಯ ಪ್ರಜಾತಂತ್ರದ ರೀತಿಯಲ್ಲಿ ಬೂತ್ ಅಧ್ಯಕ್ಷರ ಆಯ್ಕೆ ನಡೆಯುತ್ತಿಲ್ಲ. ಅದು ಬಿಜೆಪಿಯಲ್ಲಿ ನಡೆಯುತ್ತಿದೆ ಎಂದ ಅವರು ನಾನು ಜಿಲ್ಲಾಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡ ಸಂದರ್ಭ ಪುತ್ತೂರನ್ನು ಯಾವ ರೀತಿಯಲ್ಲಿ ಕೊಂಡೊಯ್ಯುತ್ತಿರಿ ಎಂದು ಮೀಡಿಯಾದವರು ಪ್ರಶ್ನಿಸುತ್ತಿದ್ದರು. ಅದಕ್ಕೀಗ ಉತ್ತರ ಕೊಡುತ್ತೇನೆ. ಪುತ್ತೂರಿನ ಎಲ್ಲ ಕಾರ್ಯಕರ್ತರು ಸೇರಿ ಬಿಜೆಪಿಯನ್ನು ಅತ್ಯಂತ ಒಳ್ಳೆಯ ರೀತಿಯಲ್ಲಿ ಗಟ್ಟಿಯಾಗಿ ಕಟ್ಟಿ ಬೆಳೆಸಲಾಗಿದೆ. ಅಭಿಪ್ರಾಯ ಭಿನ್ನಾಭಿಪ್ರಾಯ ಎಲ್ಲವೂ ಇರುತ್ತದೆ. ಆದರೆ ಸರಿ ಮಾಡಿಕೊಂಡು ಹೋಗುವ ಮನಸ್ಸು ಎಲ್ಲಿ ಇರುತ್ತದೆಯೋ ಆಗ ಎಲ್ಲವೂ ಸರಿಯಾಗುತ್ತದೆ. ಹಾಗಾಗಿ ಪುತ್ತೂರಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವುದಕ್ಕೆ ಸಂತೋಷ ಪಡುತ್ತೇನೆ ಎಂದರು. ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸಂಘಟನಾ ಪರ್ವ ಪ್ರಥಮ ಮಟ್ಟದ ಪದಗ್ರಹಣ ಕಾರ್ಯಕ್ರಮ ಪುತೂರಿನಲ್ಲಿ ನಡೆದಿರುವುದು ಅತ್ಯಂತ ಸಂತೋಷ ಆಗಿದೆ ಎಂದರು.


ಕಾಂಗ್ರೆಸ್‌ನ ದುರಾಡಳಿತವನ್ನು ಪ್ರತಿಭಟನೆ ಮೂಲಕ ನೋಡಲಿದ್ದೇವೆ


ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರು ಅವರು ಮಾತನಾಡಿ ನಿಸ್ವಾರ್ಥ ಸೇವೆ ಮಾಡಿದ ಕಾರಣ ಪಕ್ಷ ಅನೇಕ ಅವಕಾಶ ಕೊಟ್ಟಿತು. ಪುತ್ತೂರಿನಲ್ಲಿ ಮಂಡಲದ ಜವಾಬ್ದಾರಿ ಸಂಘಟನೆಯಲ್ಲಿ ನಿಸ್ವಾರ್ಥ ಸೇವೆ ಮಾಡಬೇಕೆಂದು ಪಕ್ಷದ ಮಾರ್ಗದರ್ಶನದಂತೆ ಎಲ್ಲರ ಪ್ರೇರಣೆಯಿಂದ ಮಂಡಲದ ಜವಾಬ್ದಾರಿ ವಹಿಸಿದ್ದೇನೆ. ನಾನು ಜವಾಬ್ದಾರಿ ತೆಗೆದುಕೊಂಡ ಸಂದರ್ಭದಲ್ಲಿ 6 ವರ್ಷಕ್ಕೆ ಬರುವ ಸಂಘಟನಾ ಪರ್ವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಬಂಧುಗಳು ಮಾಡಿದ ಕೆಲಸ. ಪ್ರಸ್ತುತ ಕಾಲದಲ್ಲಿ ಅನೇಕ ಸೊಸೈಟಿ ಚುನಾವಣೆಯಲ್ಲಿ ಎಲ್ಲದರಲ್ಲೂ ಉತ್ಸಾಹದಲ್ಲಿರುವುದು ನಮಗೆ ಹೆಮ್ಮೆಯ ವಿಚಾರ. ಮುಂದೆ ಹೃದಯದಿಂದ ಗಟ್ಟಿ ಮಾಡಿಕೊಂಡು ಜವಾಬ್ದಾರಿಯನ್ನು ಸಾಂವಿಧಾನಿಕವಾಗಿ ಬಳಸಿಕೊಳ್ಳಬೇಕು ಯಾಕೆಂದರೆ ಕಾಂಗ್ರೆಸ್‌ನ ದುರಾಡಳಿತವನ್ನು ಮುಂದೆ ಪ್ರತಿಭಟನೆ ಮೂಲಕ ನೋಡಲಿದ್ದೇವೆ. ಇದಕ್ಕಾಗಿ ನಾವೆಲ್ಲ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರತಿಜ್ಞೆ ಮಾಡಬೇಕು. ಪ್ರಾಮಾಣಿಕರಾಗಿ ಸ್ವಾರ್ಥ ರಹಿತರಾಗಿ ಕೆಲಸ ಮಾಡಿಪುತ್ತೂರು ಕ್ಷೇತ್ರವನ್ನು ಬಿಜೆಪಿಯ ಭದ್ರ ಕೋಟೆಯ ಮಾಡೋಣ. ಈ ನಿಟ್ಟಿನಲ್ಕಿ ಎಲ್ಲಾ ಗ್ರಾಮ ಪ್ರವಾಸ ಮಾಡುತ್ತೇನೆ ಎಂದರು.


ಪುತ್ತೂರಿನಲ್ಲಿ ಪುನಃ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಪಿ ಬಿ ಅವರು ಮಾತನಾಡಿ ಕಾರ್ಯಕರ್ತರ ಸಹಕಾರದಿಂದ ಪುನಃ ಪುತ್ತೂರಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದರು. ಇವತ್ತು ನಮ್ಮನ್ನು ಪಾಪಾ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ವಿಷಯ ಗೊತ್ತಿದ್ದರವರಿಗೆ ಗೊತ್ತಿದೆ. ಇವತ್ತು ಕಾಂಗ್ರೆಸ್ ನವರು ದಡ್ಡರು ಎಂದು ಗೊತ್ತಿದೆ. ಈ ನಿಟ್ಡಿನಲ್ಲಿ ನಾವು ದಡ್ಡರ ಹಾಗೆ ನಟನೆ ಮಾಡುತ್ತಿದ್ದೇವೆ ಎಂದರು.


ಸ್ವಾರ್ಥಕ್ಕಾಗಿ ಕಾಂಗ್ರೆಸ್, ದೇಶದ ಅಖಂಡತೆಗಾಗಿ ಬಿಜೆಪಿ
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಮಾತನಾಡಿ ಮಹಾತ್ಮಾ ಗಾಂಧಿ ಅವರು ಸ್ಬಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಅನ್ನು ಬರ್ಕಾಸ್ತು ಮಾಡಲು ಹೇಳಿದ್ದರು. ಆದರೆ ಸ್ವಾರ್ಥ ರಾಜಕಾರಣದಿಂದ ಕಾಂಗ್ರೆಸ್ ಮುಂದುವರಿಯುತ್ತದೆ. ಇದೇ ಹಿನ್ನಲೆಯಲ್ಲಿ ದೇಶಕ್ಕಾಗಿ ದೇಶಾಭಿಮಾನ ಪಕ್ಷ ಬಿಜೆಪಿ ಹುಟ್ಡಿಕೊಳ್ಳುತ್ತದೆ ಎಂದ ಅವರು ಸ್ವಾರ್ಥಕ್ಕಾಗಿ ಕಾಂಗ್ರೆಸ್, ದೇಶದ ಅಖಂಡತೆಗಾಗಿ ಬಿಜೆಪಿ ಪ್ರಾರಂಭ ಆಗಿದೆ. ಒಟ್ಟಿನಲ್ಲಿ ತ್ಯಾಗದಿಂದ ಪ್ರಾರಂಭವಾದ ಬಿಜೆಪಿ ದೇಶದ ಅಖಂಡತೆಯ ಗುರಿಯನ್ನು ಇಟ್ಡುಕೊಂಡಿದ್ದಾರೆ. ದೇಶದ ಅಖಂಡತೆಗೊಸ್ಕರ ಮಾತ್ರ ನಾವಿದ್ದೇವೆ. ಹಾಗಾಗಿ ನಾವೆಲ್ಲ ಒಗ್ಗಟ್ಡಾಗಿ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತಿಮುಖ್ಯವಲ್ಲ ಪಕ್ಷ ಮುಖ್ಯ.ಕೊನೆಗೆ ದೇಶ ಮುಖ್ಯ ಎಂದರು.


ಗೆಲುವಿನ ಓಟ ಇಲ್ಲಿಗೆ ನಿಲ್ಲದೆ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು
ಬಿಜೆಪಿ ಸಂಘಟನಾ ಪರ್ವದ ದ.ಕ.ಜಿಲ್ಲಾ ಸಹ ಚುನಾವಣಾಧಿಕಾರಿ ವಿಕಾಸ್ ಪುತ್ತೂರು ಅವರು ಮಾತನಾಡಿ, ಭಾರತ ಒಂದು ಐಕ್ಯವಾಗಲು ಬಿಜೆಪಿ ಕಾರಣ. ಕಳೆದ 60 ವರ್ಷದಲ್ಲಿ ಆಗದ ಸಾಧನೆಯನ್ನು ನಾವು ಮಾಡಿ ತೋರಿಸಿದ್ದೇವೆ. ಯಾವ ಪಕ್ಷದಲ್ಲಿಯೂ ಕೂಡ ಪಕ್ಷ ಸಂಘಟನೆಯ ಒಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲ. ಬಿಜೆಪಿ ಪಕ್ಷ ಮಾತ್ರ ಪ್ರಜಾಪ್ರಭುತ್ವ ಶಕ್ತಿ ಆಶಯ ಎತ್ತಿ ಹಿಡಿಯುತ್ತಿರುವ ಒಂದೇ ಪಾರ್ಟಿ ಆಗಿದೆ. ಇವತ್ತು ಪುತ್ತೂರಿನ ಕಾಂಗ್ರೆಸ್ ಶಾಸಕರು ಜನರ ಹಾದಿ ತಪ್ಪಿಸುತ್ತಿದ್ದಾರೆ. ಅದಕ್ಕೆ ಜನಾಭಿಪ್ರಾಯ ಸಂಗ್ರಹ ಮಾಡಬೇಕಾಗಿದೆ. ಪಟ್ಟಿ ಮಾಡುತ್ತಾ ಹೋದರೆ ದೊಡ್ಡ ಕರ್ಮಕಾಂಡ ರಾಜ್ಯ ಸರಕಾರದ್ದು ಇದೆ. ಈ ನಡುವೆ ಕೇಂದ್ರದ ಯೋಜನೆ ತಳಮಟ್ಟಕ್ಕೆ ತಲುಪದಂತೆ ಎನೆಲ್ಲಾ ಮಾಡಬೇಕು ಅದನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಇಷ್ಡೊಂದು ಸವಾಲುಗಳ ಮಧ್ಯೆ ದ ಕ ಜಿಲ್ಲೆಯ ಪುತ್ತೂರಿನಲ್ಲಿ 40 ಸಾವಿರಕ್ಕೆ ಹತ್ತಿರ ಹತ್ತಿರ ಸದಸ್ಯರಿದ್ದಾರೆ. ಪುತ್ತೂರಿನಲ್ಲಿ ಶೇ.80 ಬೂತ್ ನಲ್ಲಿ ಪದಾಧಿಕಾರಿಗಳ ನಿಯುಕ್ತಿ ಆಗಿದೆ. ಈಗಾಗಲೇ ನಡೆಯುತ್ತಿರುವ ಸಹಕಾರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ದೊಡ್ಡ ಗೆಲುವಾಗಿದೆ. ಈ ಗೆಲುವಿನ ಓಟ ಇಲ್ಲಿಗೆ ನಿಲ್ಲದೆ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂದರು.


ಬೂತ್ ಪವರ್ ಫುಲ್ ಆಗಬೇಕು
ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಅವರು ಮಾತನಾಡಿ ಪಕ್ಷದ ಅನೇಕ ವಿಚಾರದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಸ್ತಕವನ್ನು ಓದಬೇಕು.ಅದನ್ನು ಚೆನ್ನಾಗಿ ಮನನ ಮಾಡಬೇಕು. ಬೂತ್ ನಲ್ಲಿ ಗೆದ್ದರೆ ವಿಧಾನಸಭೆ, ಗ್ರಾ.ಪಂ, ನಗರಸಭೆ ಯಲ್ಲಿ ಗೆಲ್ಲುತ್ತೇವೆ. ಈ ನಿಟ್ಡಿನಲ್ಲಿ ಬೂತ್ ಪವರ್ ಫುಲ್ ಆಗಬೇಕು ಎಂದರು.


ಬೂತ್ ಅಧ್ಯಕ್ಷ ಕಾರ್ಯದರ್ಶಿಗಳಿಗೆ ಅಭಿನಂದನೆ
ಮಂಡಲದ ಬೂತ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರು ಪಕ್ಷದ ಶಲ್ಯ ನೀಡಿ ಗೌರವಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ ಮತ್ತು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು ಅವರು ಪಟ್ಟಿ ಓದಿದರು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತ, ಸುನಿಲ್ ಆಳ್ವ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ನಿಕಟಪೂರ್ವ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸ್ವಾಗತಿಸಿ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವಾರು ಮಂದಿ ನೂತನವಾಗಿ ಪದಪ್ರದಾನಗೊಂಡ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರು ಮತ್ತು ನಗರ ಮಂಡಲದ ಅಧ್ಯಕ್ಷರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here