ಪುತ್ತೂರು: ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ರಚನೆ ನೆಟ್ಟಣಿಗೆ ಮೂಡ್ನೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಅಬ್ದುಲ್ಲಾ ಮೆಣಸಿನಕಾನ ಹಾಗೂ ಉಪಾಧ್ಯಕ್ಷರಾಗಿ ಸುಮಿತ್ರಾ ಪಿ ಆಯ್ಕೆಯಾದರು. ಸದಸ್ಯರುಗಳಾಗಿ ಸುಂದರ ಜಿ, ಪುಟ್ಟಣ್ಣ, ಹರಿಣಾಕ್ಷಿ, ಸಚೀಂದ್ರ ಕೆ, ಪುನೀತಾ ಯಂ, ವೆಂಕಟರಮಣ ಗೌಡ, ನಳಿನಿ, ಹಮೀದ್, ನೂರುಲ್ಲಾ ಶರೀಫ್ ಎಸ್ ಎಂ, ಮೊಹಮ್ಮದ್ ಎಂ ಬಿ, ಅಬ್ದುಲ್ ರಝಾಕ್, ಸಫಿಯಾ, ತಾಹಿರಾ, ರಶೀದಾ, ಫಾತಿಮಾ, ಅನ್ನದ್ ಬೀಬಿ ಕೆ, ನಾಮ ನಿರ್ದೇಶಿತ ಸದಸ್ಯರಾಗಿ ಸ್ಥಳೀಯ ಗ್ರಾ.ಪಂ ಸದಸ್ಯ ವೆಂಕಪ್ಪ ನಾಯ್ಕ ಪಿ, ಪದನಿಮಿತ್ತ ಸದಸ್ಯರಾಗಿ ಅಂಗನವಾಡಿ ಕಾರ್ಯಕರ್ತೆ ಶೈಲಜಾ ಕೆ ಆರ್, ಆರೋಗ್ಯ ಕಾರ್ಯಕರ್ತೆ ಕು.ರಶ್ಮಿ ಎಂ ರವರು ಆಯ್ಕೆಯಾದರು. ನೆ.ಮೂಡ್ನೂರು ಗಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ವೆಂಕಪ್ಪ ನಾಯ್ಕ ಪಿ, ಮುಖ್ಯ ಗುರು ಜಲಜ ಕೆ, ಹಿರಿಯ ಶಿಕ್ಷಕರಾದ ರಾಜೀವಿ ಎಂ, ವಾಣಿ ಕೆ ಹಾಗೂ ಎಲ್ಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.