ಇಂದಿನ ಕಾರ್ಯಕ್ರಮ ( 15/01/2025)

0

  • ಒಳಮೊಗ್ರು ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
  • ಕಬಕ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
  • ೩೪ನೇ ನೆಕ್ಕಿಲಾಡಿ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
  • ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಬೆಳಿಗ್ಗೆ ೧೧ರಿಂದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ
  • ಪುತ್ತೂರು ಬೈಪಾಸ್ ಅಶ್ಮಿ ಕಂಫರ್ಟ್ ಸಭಾಭವನದಲ್ಲಿ ಬೆಳಿಗ್ಗೆ ೧೧ರಿಂದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ, ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ, ತಾಲೂಕು ಯುವ ಪ್ರಶಸ್ತಿ ಪ್ರದಾನ
  • ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ರಾತ್ರಿ ಕೆಂಡದರ್ಶನ ಸೇವೆ, ದೈವಗಳಿಗೆ ಕೋಲ, ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ
  • ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದಿಂದ ಕೆಮ್ಮಾಯಿ ಓಂ ಅಶ್ವತ್ಥ ಕಟ್ಟೆಯಲ್ಲಿ ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆ, ೧೦ಕ್ಕೆ ಅಶ್ವತ್ಥ ಮಹೋತ್ಸವ, ೧೧.೩೦ರಿಂದ ಮಧುಮೇಹ ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ, ಸಂಜೆ ಯುವಕ ಮಂಡಲದ ೨೮ನೇ ವರ್ಷದ ವಾರ್ಷಿಕೋತ್ಸವ, ರಾತ್ರಿ ೮ಕ್ಕೆ ಸಭಾ ಕಾರ್ಯಕ್ರಮ, ೯ರಿಂದ ಕಥೆ ಎಡ್ಡೆಂಡು ತುಳು ನಾಟಕ
  • ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹವನ, ತೋರಣ ಮುಹೂರ್ತ, ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಯಕ್ಷಗಾನ ವೈಭವ, ಸಂಜೆ ಧ್ವಜಾರೋಹಣ, ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ
  • ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಕೃಷ್ಣಗಿರಿ, ತುರ್ಕೆದಗುರಿಯಲ್ಲಿ ಬೈಲುವಾರು ಭಜನೆ
  • ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ಕ್ಕೆ ತೋರಣ ಪ್ರತಿಷ್ಠೆ, ಉಗ್ರಾಣ ಮುಹೂರ್ತ, ಹಸಿರು ಕಾಣಿಕೆ ಸಮರ್ಪಣೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮.೩೦ರಿಂದ ಕುಡ ಒಂಜಾಕ ತುಳು ನಾಟಕ
  • ಈಶ್ವರಮಂಗಲ ಯಾಸೀನ್ ಮುತ್ತು ತಂಙಳ್ ನಗರದಲ್ಲಿ ಈಶ್ವರಮಂಗಲ ಮಖಾಂ ಉರೂಸ್, ಧಾರ್ಮಿಕ ಉಪನ್ಯಾಸ
  • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಾಡದಗುಡ್ಡೆಯಲ್ಲಿ ದೈವಗಳ ನೂತನ ಮಾಡ ನಿರ್ಮಾಣಕ್ಕೆ ಭೂಮಿಪೂಜೆ
  • ಬೆಟ್ಟಂಪಾಡಿ ರೆಂಜ ಫಾರೂಖ್ ಜುಮಾ ಮಸೀದಿ ವಠಾರದಲ್ಲಿ ೨೬ನೇ ಸ್ವಲಾತ್ ವಾರ್ಷಿಕದ ಪ್ರಯುಕ್ತ ರಾತ್ರಿ ೭.೩೦ಕ್ಕೆ ಧಾರ್ಮಿಕ ಉಪನ್ಯಾಸ, ತಾಜುಲ್ ಉಲಮಾ ಅನುಸ್ಮರಣೆ
  • ಪಂಜ ವಲಯ ಅರಣ್ಯ ಕಚೇರಿಯ ಎದುರು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿ ವಿರುದ್ಧ ಪ್ರತಿಭಟನೆ

LEAVE A REPLY

Please enter your comment!
Please enter your name here