- ಪಾರದರ್ಶಕ ವ್ಯವಹಾರಿಗಳ ಕೂಟದಿಂದ ಮಾದರಿ ಕಟ್ಟಡ – ನಳಿನ್ ಕುಮಾರ್ ಕಟೀಲ್
- ಪುತ್ತೂರಿಗೆ ಒಂದು ಉತ್ತಮ ಕೊಡುಗೆ – ಡಾ. ಎಂ.ಕೆ. ಪ್ರಸಾದ್
- ಮಹಾಲಿಂಗೇಶ್ವರನ ಹೆಸರಿನಿಂದ ಶ್ರೇಯಸ್ಸಾಗಲಿದೆ – ಶಕುಂತಳಾ ಟಿ. ಶೆಟ್ಟಿ
- ಮಹಾಲಿಂಗೇಶ್ವರ ನಡೆಯಲ್ಲಿ ನಿರ್ಮಾಣವಾದಂತಿದೆ – ಮುಳಿಯ ಕೇಶವ ಪ್ರಸಾದ್
- ಪ್ರಾಮಾಣಿಕತೆ ಮತ್ತು ನಂಬಿಕೆ ಇದ್ದರೆ ಯಶಸ್ಸು – ಅರುಣ್ ಕುಮಾರ್ ಪುತ್ತಿಲ
- ಪಾಲುದಾರರು ಉನ್ನತಿಗೇರಲಿ – ಶಶಿಕುಮಾರ್ ರೈ ಬಾಲ್ಯೊಟ್ಟು
- ಯಾವ ಕಟ್ಟಡಕ್ಕೂ ತೊಂದರೆಯಾಗದಂತೆ ನಿರ್ಮಾಣಗೊಂಡಿದೆ – ಬೂಡಿಯಾರ್ ರಾಧಾಕೃಷ್ಣ ರೈ
- ಕಾನೂನಿನ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಗೊಂಡಿದೆ – ಡಾ. ಯು.ಪಿ. ಶಿವಾನಂದ
- ನಗರಸಭೆಗೆ ಉತ್ತಮ ಮಾದರಿ ಕಟ್ಟಡ – ಬಾಲಚಂದ್ರ ಮರೀಲ್
- ಯೋಜನಾಬದ್ದ ಕಟ್ಟಡವಾಗಿದೆ – ಮಹಮ್ಮದ್ ಅಲಿ
- ತ್ರಿನೇತ್ರ ಡೆವಲಪ್ಪರ್ಸ್ ಆಗಿ ಮೂಡಿಬರಲಿ – ರಮೇಶ್ ರೈ ನೆಲ್ಲಿಕಟ್ಟೆ
ಪುತ್ತೂರು: ಕೆ. ಗಿರಿಧರ ಹೆಗ್ಡೆ, ಕೆ. ವೆಂಕಟೇಶ್ ಭಟ್ ಮತ್ತು ಸೃಜನ್ ಊರುಬೈಲು ಪಾಲುದಾರಿಕೆಯಲ್ಲಿ ಎಪಿಎಂಸಿ ರಸ್ತೆಯ, ಆದರ್ಶ ಆಸ್ಪತ್ರೆ ಮುಂಭಾಗದಲ್ಲಿ ಬಹುಮಹಡಿ ವಾಣಿಜ್ಯ ಕಟ್ಟಡ ತ್ರಿನೇತ್ರ ಕಾಂಪ್ಲೆಕ್ಸ್ ಜ.14ರಂದು ಉದ್ಘಾಟನೆಗೊಂಡಿತು.
ನೂತನ ಕಾಂಪ್ಲೆಕ್ಸ್‌ನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ದ.ಕ. ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರು ಮಾತನಾಡಿ ʻಇಷ್ಟು ಸುಂದರವಾದ ಕಟ್ಟಡ ಪುತ್ತೂರಿಗೆ ಅವಶ್ಯಕವಾಗಿತ್ತು. ಪಾರದರ್ಶಕವಾದ ವ್ಯವಹಾರಿಗಳ ಕೂಟದಿಂದಾಗಿ ಇಷ್ಟು ವ್ಯವಸ್ಥಿತವಾಗಿ ನಡೆದಿದೆ. ಇಲ್ಲಿಯೇ ನಿಲ್ಲಿಸಬೇಡಿ. ಮುಂದಕ್ಕೂ ಪುತ್ತೂರಿನಲ್ಲಿ ಸೌಂದರ್ಯ ಬರುವಂತಹ ಕಟ್ಟಡಗಳು ನಿರ್ಮಾಣವಾಗಲಿ. ಪುತ್ತೂರಿನ ನಂತರ ಮಂಗಳೂರಿಗೂ ಬನ್ನಿ ಎಂದು ಶುಭ ಹಾರೈಸಿದರು. ಅಂಗಡಿ ತೆಗೆದುಕೊಳ್ಳುವ ಸಾಮರ್ಥ್ಯ ಶಶಿಗೆ ಮಾತ್ರ ಇರೋದು. ಆದರೆ ಈ ಕಟ್ಟಡದಲ್ಲಿ ಪೂರ್ಣವಾಗಿ ಅಂಗಡಿಗಳು ಮಾರಾಟಗೊಂಡಿವೆ. ಹಾಗಾಗಿ ಶಶಿಗೆ ಇಲ್ಲಿ ಕೆಲಸವಿಲ್ಲ. ಆದರೆ ನಮಗೆಲ್ಲಾ ಶುಭ ಹಾರೈಕೆ ಮಾಡಲು ಅವಕಾಶ ಲಭಿಸಿದೆ ಎಂದರು.
ಕಟ್ಟಡದ ಲಿಫ್ಟ್ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದ ಪುತ್ತೂರಿನ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರೂ, ಹಿರಿಯ ವೈದ್ಯರೂ ಆಗಿರುವ ಡಾ. ಎಂ. ಕೆ. ಪ್ರಸಾದ್ ರವರು ʻನಾವು ಆಸ್ಪತ್ರೆ ಮಾಡುವಾಗ ಎಪಿಎಂಸಿ ರಸ್ತೆ ಖಾಲಿ ಖಾಲಿಯಾಗಿತ್ತು. ವೆಂಕಟೇಶ್ ಭಟ್‌ರವರಿಗೆ ವೆಂಕಟ್ರಮಣ ದೇವರ ಆಶೀರ್ವಾದವಿದೆ. ಗಿರಿಧರ ಹೆಗ್ಡೆಯವರ ಉದ್ಯಮ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದವರು. ಸಮಾಜಸೇವಕ ಡಾ. ಶಿವಾನಂದರ ಪುತ್ರ ಸೃಜನ್ ರವರಿಗೆ ಮಹಾಲಿಂಗೇಶ್ವರ ದೇವರ ಅನುಗ್ರಹವಿರಲಿ. ನಮ್ಮ ಗದ್ದೆ ಹೋಯಿತು ಎನ್ನುವ ಬೇಸರವಿದೆ. ಆದರೆ ಪುತ್ತೂರಿಗೆ ಇದೊಂದು ಉತ್ತಮ ಕೊಡುಗೆ ಎಂಬ ಸಂತೋಷವಿದೆ. ಅವರ ಹೊಸ ಯೋಜನೆಗಳೂ ವಿಜಯಶಾಲಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರು ಮಾತನಾಡಿ ʻತ್ರಿನೇತ್ರ ಕಾಂಪ್ಲೆಕ್ಸ್ ಭಾರೀ ಹೆಸರನ್ನು ಮಾಡಲಿದೆ. ಎಲ್ಲರಿಗೂ ಅಭಿವೃದ್ಧಿಯಾಗಲಿದೆ. ಇಲ್ಲಿ ನನ್ನದು ಎನ್ನುವುದಕ್ಕಿಂತ ನಮ್ಮದು ಎಂಬುದು ಬಂದಿದೆ. ಒಂದು ಅಂಗಡಿಯಲ್ಲಿ ದೇವರ ಪೂಜಾ ಸಾಮಾಗ್ರಿಗಳು ದೊರಕುವಂತೆ ಮಾಡಿದರೆ ಉತ್ತಮವಿತ್ತು. ಮಹಾಲಿಂಗೇಶ್ವರ ದೇವರ ಅಭಿವೃದ್ಧಿ ಕಾರ್ಯಗಳಲ್ಲಿ ಭಕ್ತರಾದ ತಾವೆಲ್ಲರೂ ಸಹಕಾರ ನೀಡುವಿರೆಂಬ ಭರವಸೆ ನನಗಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಭೇಟಿ ನೀಡಿ ಪುತ್ತೂರಿನ ಸಮಾಜಕ್ಕೆ ವಾಣಿಜ್ಯ ಮಳಿಗೆಯೊಂದು ಸಮರ್ಪಣೆಯಾಗಿದೆ. ಪುತ್ತೂರು ದೇವಸ್ಥಾನದ ಹತ್ತಿರವಿರುವ ಈ ಕಟ್ಟಡ ಬಹೂಪಯೋಗಿಯಾಗಿದೆ. ಮಹಾಲಿಂಗೇಶ್ವರ ಹೆಸರಿನಲ್ಲೇ ತ್ರಿನೇತ್ರ ಕಾಂಪ್ಲೆಕ್ಸ್ ಆರಂಭಗೊಂಡಿದೆ. ಗಿರಿಧರ ಹೆಗ್ಡೆಯವರು ಓರ್ವ ಯಶಸ್ವಿ ಉದ್ಯಮಿ. ಮೂವರೂ ಪಾಲುದಾರರೂ ಇದರಲ್ಲಿ ಯಶಸ್ಸು ಕಾಣಲಿ. ಇಲ್ಲಿ ವ್ಯವಹಾರ ನಡೆಸುವ ಪ್ರತಿಯೊಬ್ಬರೂ ಉನ್ನತಿಯನ್ನು ಕಾಣಲಿ ಎಂದು ಶುಭ ಹಾರೈಸಿದರು.
ಮುಳಿಯ ಜ್ಯುವೆಲ್ಸ್‌ನ ಎಂ.ಡಿ. ಕೇಶವ ಪ್ರಸಾದ್ ಮುಳಿಯರವರು ಭೇಟಿ ನೀಡಿ ʻಪುತ್ತೂರಿನಲ್ಲಿ ಉತ್ಸವದ ವಾತಾವರಣ. ಮಹಾಲಿಂಗೇಶ್ವರನ ದೃಷ್ಟಿ ಮತ್ತು ನಡೆಯಲ್ಲಿ ಇರುವ ರೀತಿಯಲ್ಲಿ ಕಟ್ಟಡ ಎದ್ದುನಿಂತಿದೆ. ಬಹಳ ಸುಂದರವಾಗಿ ಮತ್ತು ಮಾದರಿಯಾಗಿ ಕಟ್ಟಡ ನಿರ್ಮಾಣಗೊಂಡಿದೆ. ಸೃಜನ್ ಊರುಬೈಲು ಮತ್ತು ತಂಡದಿಂದ ಇನ್ನಷ್ಟು ಪ್ರಾಪರ್ಟೀಸ್ ಕೊಡುಗೆ ಮೂಡಿಬರಲಿ. ಮಹಾಲಿಂಗೇಶ್ವರ ದೇವರ ಆಶೀರ್ವಾದವಿರಲಿʼ ಎಂದು ಶುಭ ಹಾರೈಸಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ʻಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿಗೆ ಉದ್ಯಮ ಕ್ಷೇತ್ರದಲ್ಲಿ ಒಂದಷ್ಟು ಶಕ್ತಿ ಕೊಡುವ ಕೆಲಸ ನಡೆದಿದೆ. ಪ್ರಾಮಾಣಿಕತೆ ಮತ್ತು ನಂಬಿಕೆ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದೆಂಬುದಕ್ಕೆ ಈ ಮೂವರು ಸಾಕ್ಷಿಗಳಾಗಿದ್ದಾರೆ. ಉದ್ಯಮ ವ್ಯವಹಾರ ಅನುಭವ, ಧಾರ್ಮಿಕ ಕ್ಷೇತ್ರ ಮತ್ತು ಪಾರದರ್ಶಕ ಮಾಧ್ಯಮ ಸಂಸ್ಥೆ ಇಲ್ಲಿ ಸಮಾಗಮಗೊಂಡು ಉದ್ಯಮ ವ್ಯವಹಾರ ಕ್ಷೇತ್ರಕ್ಕೆ ಇಳಿದಿದೆ. ನಗರ ವಿಸ್ತಾರವಾಗಬೇಕು. ಪುತ್ತೂರಿನ ವಾಣಿಜ್ಯ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿ ತುಂಬುವ ಕಾರ್ಯ ನಡೆಯಲಿʼ ಎಂದು ಆಶಿಸಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ʻಇಲ್ಲಿ ವ್ಯವಹಾರ ಮಾಡುವ ಶಕ್ತಿ ಮತ್ತು ಅನುಗ್ರಹವನ್ನು ದೇವರು ಕರುಣಿಸಲಿ. ಮೂವರೂ ಪಾಲುದಾರರೂ ಉನ್ನತಿಯ ಮಟ್ಟಕ್ಕೆ ತಲುಪಲಿʼ ಎಂದು ಶುಭ ಹಾರೈಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯುವರು ಮಾತನಾಡಿ ʻಕೆಲವೇ ತಿಂಗಳಲ್ಲಿ ಇಷ್ಟೊಂದು ಒಳ್ಳೆಯ ಕಟ್ಟಡ ನಿರ್ಮಾಣವಾಗಿರುವುದು ಸಂತೋಷ ನೀಡಿದೆ. ಯಾವ ಕಟ್ಟಡಕ್ಕೂ ತೊಂದರೆಯಾಗದಂತೆ ಇದರ ವಿನ್ಯಾಸವಿದೆ. 15 ಸೆಂಟ್ಸ್ ಜಾಗದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣದ ಹಿಂದೆ ಅದರ ಹೆಸರು ಬಹಳ ಪ್ರಾಮುಖ್ಯತೆ ನೀಡಿದೆʼ ಎಂದರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದವರು ಮಾತನಾಡಿ ʻಕಟ್ಟಡ ಕಟ್ಟುವಾಗಲೇ ಕಾನೂನಿನ ಚೌಕಟ್ಟಿನಲ್ಲಿ ಕಟ್ಟಬೇಕು. ಕಾನೂನು ಮೀರಿ ಕಟ್ಟಿದಾಗ ಪತ್ರಿಕೆಗೂ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದೆ. ಹಾಗಾಗಿ ಕಾನೂನಿನ ವ್ಯಾಪ್ತಿಯಲ್ಲಿಯೇ ನಿರ್ಮಾಣಗೊಳ್ಳಲು ಸಲಹೆ ನೀಡಿದ್ದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಮೂವರು ಪಾಲುದಾರರೂ ವಿಶ್ವಾಸಭರಿತವಾಗಿ ಕಟ್ಟಿದ್ದಾರೆ. ಇವರೊಳಗೆ ಇಲ್ಲಿಯವರೆಗೆ ಯಾವುದೇ ಹಣಕಾಸಿನ ತಕರಾರು ಬಂದಿಲ್ಲ. ಹೊಂದಾಣಿಕೆಯಿಂದ ವ್ಯವಹಾರ ನಡೆದಿದೆ. ಕಟ್ಟಡದಲ್ಲಿ ನನಗೂ ಒಂದು ಕೊಠಡಿ ಕೇಳಿದ್ದೆ. ಆದರೆ ಅದಕ್ಕೆ ಮೊದಲೇ ಎಲ್ಲಾ ಬುಕ್ಕಿಂಗ್ ಆಗಿರುವುದು ಖುಷಿ ನೀಡಿದೆ. ನೀರು ಸೇರಿದಂತೆ ಮೂಲಭೂತ ಅವಶ್ಯಕತೆಗಳು ಈ ಕಟ್ಟಡದಲ್ಲಿ ವ್ಯವಸ್ಥಿತವಾಗಿ ನಡೆದಿದೆ. ಒಳ್ಳೆಯ ಸಂಪಾದನೆ ಆಗುವ ದಿಶೆಯಲ್ಲಿ ಎಲ್ಲರಿಗೂ ಶ್ರೇಯಸ್ಸು ಉಂಟಾಗಲಿʼ ಎಂದು ಆಶಿಸಿದರು.
ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಮರೀಲ್‌ರವರು ಮಾತನಾಡಿ ʻಒಳ್ಳೆಯ ಒಂದು ಕಟ್ಟಡವನ್ನು ನಮ್ಮ ನಗರಸಭೆಗೆ ಕೊಟ್ಟಿದ್ದೀರಿ. ಈ ಕಟ್ಟಡಕ್ಕೆ ತ್ರಿ ವ್ಯೂ ಇದೆ. ಅದೇ ರೀತಿ ಮೂರು ರಸ್ತೆ ಸೇರುವ ಜಾಗವಿದು. ಮಾಲಕರೂ ಮೂವರು ಇದ್ದಾರೆ. ಈ ದಿಶೆಯಲ್ಲಿ ಈ ಕಟ್ಟಡ ಉತ್ತಮವಾಗಿ ಬೆಳೆದು ಬರಲಿʼ ಎಂದು ಆಶಿಸಿದರು. ನಗರಸಭೆಯ ಮಾಜಿ ಸದಸ್ಯ ಮಹಮ್ಮದ್ ಆಲಿಯವರು ಮಾತನಾಡಿ ʻಮಂಗಳೂರು ಬಿಟ್ಟರೆ ಅತೀ ವೇಗವಾಗಿ ಬೆಳೆಯುವ ಪಟ್ಟಣ ಪುತ್ತೂರು. ಅದು ಯೋಜನಾಬದ್ದವಾಗಿ ಬೆಳೆಯಬೇಕು. ಕಟ್ಟಡ ನಕ್ಷೆಯ ಅನುಮೋದನೆ ಮಾಡುವಾಗಲೇ ಅದಕ್ಕೆ ಉತ್ತಮ ಕಾನೂನಿನ ಚೌಕಟ್ಟು ಇದ್ದಾಗ ಅದು ಸುಂದರ ನಗರ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ. ಬೊಳುವಾರುನಿಂದ ದರ್ಬೆ ಮತ್ತು ಪರ್ಲಡ್ಕ ರಸ್ತೆ ಮಾತ್ರ ಪುತ್ತೂರು ನಗರವಾಗಿತ್ತು. ಆದರೆ ಇಂದು ಪುತ್ತೂರಿನ ಆಸುಪಾಸು ನಗರ ಬೃಹತ್ತಾಗಿ ಬೆಳೆಯುತ್ತಿದೆ. ಕೆಲವೊಂದು ಕಡೆ ಕಟ್ಟಡಗಳು ನಿಯಮಬದ್ದವಾಗಿ ನಿರ್ಮಾಣಗೊಳ್ಳದ ನಿಟ್ಟಿನಲ್ಲಿ ನಗರ ಸುಂದರಾಗಿ ಬೆಳೆಯಲು ಸಾಧ್ಯವಿಲ್ಲ. ಆದರೆ ಈ ಕಟ್ಟಡದ ಪಾಲುದಾರ ಗಿರಿಧರ ಹೆಗ್ಡೆಯವರು ಕ್ರಮಬದ್ದವಾಗಿ ಕಟ್ಟಡ ಕಟ್ಟುವಲ್ಲಿ ನಗರಸಭೆಗೆ ಮುಂಚಿತವಾಗಿಯೇ ಪತ್ರ ಬರೆದಿದ್ದರು. ಈ ದಿಶೆಯಲ್ಲಿ ವಾಣಿಜ್ಯ ಮಳಿಗೆಗಳ ಪೈಕಿ ಇವರು ಆದರ್ಶ ಮೆರೆದಿದ್ದಾರೆʼ ಎಂದರು.
ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆಯವರು ಮಾತನಾಡಿ ʻಪುತ್ತೂರಿನ ಹೃದಯಭಾಗದಲ್ಲಿ ಎದ್ದು ನಿಂತಿರುವ ಕಟ್ಟಡ ಸುಂದರಾವಾಗಿ ನಿರ್ಮಾಣಗೊಂಡಿದೆ. ಮುಂದಕ್ಕೆ ತ್ರಿನೇತ್ರ ಡೆವಲಪ್ಪರ್ಸ್ ಎಂಬ ಹೆಸರಿನಲ್ಲಿ ಉದ್ಯಮ ಕ್ಷೇತ್ರ ಬೆಳೆದುಬರಲಿʼ ಎಂದು ಆಶಿಸಿದರು.
ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ಎಂ.ಕೆ. ಪ್ರಸಾದ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಭಿನಂದನೆ
ಕಟ್ಟಡದ ಇಂಜಿನಿಯರ್ ಅವಿಲ್ ಸೆರಾವೊರವರನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರು ಅಭಿನಂದಿಸಿ ಗೌರವಿಸಿದರು. ಕಟ್ಟಡದ ಗುತ್ತಿಗೆದಾರ ಮೊಯಿದಿನ್, ಸುನಿಲ್ ಕುಮಾರ್ ರವರನ್ನು ಅಭಿನಂದಿಸಲಾಯಿತು. ಕಾಂಪ್ಲೆಕ್ಸ್ ಪಾಲುದಾರರಾದ ಗಿರಿಧರ ಹೆಗ್ಡೆ, ಕೆ. ವೆಂಕಟೇಶ್ ಭಟ್ ಹಾಗೂ ಸೃಜನ್ ಊರುಬೈಲುರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ತ್ರಿನೇತ್ರ ಕಾಂಪ್ಲೆಕ್ಸ್ ಬಗ್ಗೆ ಪಾಲುದಾರ ಕೆ. ವೆಂಕಟೇಶ್ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಿಖಿತಾ ಪಾಣಾಜೆ ಪ್ರಾರ್ಥಿಸಿದರು. ಸುದ್ದಿಬಿಡುಗಡೆ ಚಾನೆಲ್ ವರದಿಗಾರ ಉಮೇಶ್ ಮಿತ್ತಡ್ಕ ಸ್ವಾಗತಿಸಿ, ಕಟ್ಟಡದ ಪಾಲುದಾರ ಸೃಜನ್ ಊರುಬೈಲು ವಂದಿಸಿದರು. ಸುದ್ದಿ ಬೆಳ್ತಂಗಡಿ ಚಾನೆಲ್ ವಿಭಾಗ ಮುಖ್ಯಸ್ಥ ದಾಮೋದರ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಚಾನೆಲ್ ಮುಖ್ಯಸ್ಥ ಗೌತಮ್ ಶೆಟ್ಟಿ ಸಹಕರಿಸಿದರು.
ಕೆವಿಜಿ ಇಂಜಿನಿಯರಿಂಗ್ ಕಾಲೇಜು ಸಿಇಒ, ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಆಗಿರುವ ಉಜ್ವಲ್ ಊರುಬೈಲು, ಪ್ರಮುಖರಾದ ಶಿವರಾಮ ಆಳ್ವ, ಸಾಜ ರಾಧಾಕೃಷ್ಣ ಆಳ್ವ, ಸುಧೀರ್ ಶೆಟ್ಟಿ ವಿಘ್ನೇಶ್ವರ ಇಂಡಸ್ಟ್ರೀಸ್, ಸಿಎ ಅರವಿಂದ್, ದಕ್ಷ ಕನ್ಸ್‌ಸ್ಟ್ರಕ್ಷನ್‌ನ ರವೀಂದ್ರ, ನಗರಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು, ಪುಂಡರೀಕ ಅಡ್ಪಂಗಾಯ, ರಂಜಿತ್ ಜೈನ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಅಧ್ಯಕ್ಷ ಶಿವಕುಮಾರ್ ಭಟ್, ಭರತ್ ರೈ, ಮಹಾಲಿಂಗೇಶ್ವರ ಐಟಿಐ ಕಾಲೇಜು ಸಂಚಾಲಕ ಯು.ಪಿ. ರಾಮಕೃಷ್ಣ, ತಾಜ್‌ಮಹಲ್ ಹೊಟೇಲ್ ಮ್ಹಾಲಕ ತಾರನಾಥ ಹೆಗ್ಡೆ, ಸದಾಶಿವ ಭಟ್ ಮರಿಕೆ, ಡಾ. ಸುಬ್ರಾಯ ಭಟ್, ಮಾಚಿದೇವ ಸೊಸೈಟಿ ಅಧ್ಯಕ್ಷ ಸುಭಾಸ್, ಮುನ್ನಾ ಭಟ್, ಅನಿತಾ ಆಯಿಲ್ ಮಿಲ್‌ನ ಇಂದಾಜೆ ಪ್ರಕಾಶ್ ನಾಯಕ್, ದಂಬೆಕ್ಕಾನ ಸದಾಶಿವ ರೈ, ವಿಶ್ವಾಸ್ ಎಂಟರ್‌ಪ್ರೈಸಸ್‌ನ ಶ್ರೀಕಾಂತ್ ಶೆಣೈ, ಮೈತ್ರಿ ಇಲೆಕ್ಟ್ರಿಕಲ್ ಮ್ಹಾಲಕ ರವಿನಾರಾಯಣ, ಸದಾಶಿವ ಪೈ ಪುತ್ತೂರು, ಕೆನರಾ ಬ್ಯಾಂಕ್ ಮೆನೇಜರ್ ಸುರೇಶ್, ನ್ಯಾಯವಾದಿ ಎನ್.ಕೆ. ಜಗನ್ನೀವಾಸರಾವ್, ಪುತ್ತೂರು ಉಮೇಶ್ ನಾಯಕ್, ಲಹರಿ ಕುಸುಮಾಧರ್, ಹರ್ಷಕುಮಾರ್ ರೈ ಮಾಡಾವು, ವಚನಾ ಜಯರಾಮ್, ಎವಿಜಿ ಅಸೋಸಿಯೇಟ್ಸ್‌ನ ಎ.ವಿ. ನಾರಾಯಣ, ಸಂಪ್ಯದ ಎಎಸ್‌ಐ ಮುರುಗೇಶ್,ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್‌ನ ಡಾ.ಹರಿಕೃಷ್ಣ ಪಾಣಾಜೆ, ರೂಪಲೇಖ, ಬೆಳ್ತಂಗಡಿ ಕೆನರಾ ಬ್ಯಾಂಕ್ ಮ್ಯಾನೇಜರ್ ಪ್ರತಾಪ್, ವಿಜಯ ಸುಪಾರಿ ಇಂಡಸ್ಟ್ರೀಸ್ ಮಾಲಕ ರಾಮ ಭಟ್, ನಗರಸಭಾ ಸದಸ್ಯೆ ವಿದ್ಯಾ ಆರ್.ಗೌರಿ, ನಾಮನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು,ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಅಂಬಿಕಾ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಡಾ.ಶ್ಯಾಂ, ಡಾ.ಮಂಜುನಾಥ ಶೆಟ್ಟಿ, ಡಾ.ಭಾಸ್ಕರ ಎಂ., ಡಾ.ಗೋಪಿನಾಥ ಪೈ, ಡಾ.ಮಹೇಶ್, ಮುನ್ನಾ ಇಲೆಕ್ಟ್ರಿಕಲ್ಸ್ ಕೃಷ್ಣ ಪ್ರಶಾಂತ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.