ಶ್ರೀ ರಾಮಕೃಷ್ಣ ಸೇವಾ ಸಮಾಜದಲ್ಲಿ ಕಿಶೋರ, ಯುಗಳ ನೃತ್ಯ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಮಂಗಳೂರು ಇವರ ನೇತೃತ್ವದಲ್ಲಿ ಪುತ್ತೂರಿನ ನೃತ್ಯ ಗುರುಗಳ ಶಿಷ್ಯೆಯಂದಿರಿಂದ ಬಾಲ ಯುಗಳ ಮತ್ತು ಕಿಶೋರ ಯುಗಳ ನೃತ್ಯ ಪ್ರತಿಭೋತ್ಸವ ಕಾರ್ಯಕ್ರಮವು ಜ.12 ರಂದು ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾ ಸಮಾಜ ಇಲ್ಲಿನ ಸರಾಫ್ ಮುಳಿಯ ಶ್ಯಾಂ ಭಟ್ ವೇದಿಕೆಯಲ್ಲಿ ಅಪರಾಹ್ನ ನಡೆಯಿತು.

ಪುತ್ತೂರಿನ ಎಲ್ಲಾ ನೃತ್ಯ ಗುರುವೃಂದದವರು ದೀಪ ಪ್ರಜ್ವಲನೆಯನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೃತ್ಯ ಪ್ರತಿಭೋತ್ಸವದಲ್ಲಿ ಬಾಲ ಮತ್ತು ಕಿಶೋರ ಪ್ರತಿಭೆಗಳು 34 ಮಂದಿ ಭಾಗವಹಿಸಿದ್ದರು. ನೃತ್ಯ ಪ್ರದರ್ಶನ ನೀಡಿದ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಳಿಯ ಶ್ಯಾಮ್ ಭಟ್, ಮುಳಿಯ ಕೇಶವ ಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ಕರಾವಳಿ ನೃತ್ಯ ಪರಿಷತ್ತು ಇದರ ಸದಸ್ಯೆ ಕರ್ನಾಟಕ ಕಲಾಶ್ರೀ, ವಿದುಷಿ ನಯನಾ ವಿ.ರೈ ರವರು ಆಯೋಜಿಸಿದ್ದರು.

LEAVE A REPLY

Please enter your comment!
Please enter your name here