ಪುತ್ತೂರು: ಬಾವಿಗೆ ಹಾರಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.17 ರಂದು ಕುಂಬ್ರದ ಶೇಖಮಲೆಯಿಂದ ವರದಿಯಾಗಿದೆ.
ಶೇಖಮಲೆ ಚೆಕ್ಕನಡ್ಕ ದರ್ಖಾಸ್ ನಿವಾಸಿ ದೀಪಕ್ ರವರ ಪತ್ನಿ ಲಲಿತ ರೈ (37ವ) ಮೃತರು.
ಮೃತರು ಓರ್ವ ಪುತ್ರನನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕದಳದವರು ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.