ಬಡಗನ್ನೂರು: ಶ್ರೀ ಪೂಮಾಣಿ ಕಿನ್ನಿಮಾಣಿ (ಉಳ್ಳಾಕಲು) ಹಾಗೂ ರಾಜನ್ ದೈವಗಳ ದೈವಸ್ಥಾನ ಪಡುಮಲೆ ಇದರ ವಾರ್ಷಿಕ ನೇಮೋತ್ಸವ ಅಂಗವಾಗಿ ಜ.18 ರಂದು ಬೆಳಿಗ್ಗೆ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು ಮಲರಾಯ ದೈವದ ನೇಮ ನಡೆಯಿತು. ಬಳಿಕ ವ್ಯಾಘ್ರ ಚಾಮುಂಡಿ (ರಾಜನ್) ದೈವದ ನೇಮ, ಪ್ರಸಾದ ವಿತರಣೆ, ತದನಂತರ ಅನ್ನಪ್ರಸಾದ ನಡೆಯಿತು.ಸಂಜೆ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬಂದು, ರಾತ್ರಿ ಪಡುಮಲೆ-ದೊಡ್ಡಮನೆಯಲ್ಲಿ ಅವಭೃತ ಸ್ಥಾನ ನಡೆದು, ಕಟ್ಟೆ ಪೂಜೆ, ಬಳಿಕ ಧ್ವಜಾವರೋಹಣ, ರುದ್ರಚಾಮುಂಡಿ ದೈವದ ನೇಮ, ನವಕಾಭಿಷೇಕ,ಬಳಿಕ ಗುಳಿಗ ದೈವದ ನೇಮ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ, ಕುತ್ಯಾಳ ಮಹಾವಿಷ್ಣು ದೇವಸ್ಥಾನದ ಆಡಳಿತ ಮೂಕ್ತೇಸರ ವಿನೋದ್ ಆಳ್ವ ಮೂಡಾಯೂರು ಸದಸ್ಯರಾದ ದಯಾ ವಿ ರೈ ಬೆಳ್ಳಿಪಾಡಿ, ರವಿರಾಜ ರೈ ಸಜಂಕಾಡಿ, ಶಶಿಧರ ರೈ ಕುತ್ಯಾಳ, ಶ್ರೀಧರ ನಾಯ್ಕ ನೇರ್ಲಪಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ, ಜತೆ ಕಾರ್ಯದರ್ಶಿ ಸುರೇಶ್ ರೈ ಪಲ್ಲತ್ತಾರು, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ ಬಾಲಕೃಷ್ಣ ರೈ ಕುದ್ಕಾಡಿ, ಕೃಷ್ಣ ರೈ ಕುದ್ಕಾಡಿ ಅರ್ಚಕ ಮಹಾಲಿಂಗ ಸೇನವರಾದ ಲಕ್ಷ್ಮೀ ನಾರಾಯಣ ರಾವ್ ಪಡುಮಲೆ, ಉದಯ ಕುಮಾರ್ ಪಡುಮಲೆ ರಾಮಣ್ಣ ಗೌಡ ಬಸವಹಿತ್ತಿಲು, ಮತ್ತು ಊರಪರವೂರ ಭಕ್ತಾದಿಗಳು ಭಾಗವಹಿಸಿದರು.