ಪುತ್ತೂರು : ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ಗೆ ಕುಳ ಗ್ರಾಮದ, ಎನ್ ಸಿ ಸಿ ಕೆಡೆಟ್ ಕಾರ್ಪೊರಲ್ ಶಿವಕಿರಣ್ ಪೆಲತ್ತಿಂಜ ಅವರು ಆಯ್ಕೆಗೊಂಡಿದ್ದಾರೆ.
ಕಳೆದ ಸಪ್ಟೆಂಬರಿನಿಂದ ನಾಲ್ಕು ತಿಂಗಳುಗಳ ಕಾಲ ನಡೆದ 7 ಹಂತದ ಕಠಿಣ ಆಯ್ಕೆ ಶಿಬಿರಗಳಲ್ಲಿ ಸಾಂಸ್ಕೃತಿಕ (ಡೊಳ್ಳು ಕುಣಿತ ಮತ್ತು ಯಕ್ಷಗಾನ ಕುಣಿತ) ಹಂತದಲ್ಲಿ ಆಯ್ಕೆಗೊಂಡಿದ್ದಾರೆ.
ಕಳೆದ 2 ವರ್ಷದಿಂದ ಕಠಿಣ ಪರಿಶ್ರಮ ಮಾಡಿದ ಅವರು ದೆಹಲಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ಜನವರಿ 27ರಂದು ನಡೆಯುವ ಪ್ರಧಾನ ಮಂತ್ರಿಗಳ ರ್ಯಾಲಿಯ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.ಇವರು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿಯಾಗಿದ್ದು, ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಪೆಲತ್ತಿಂಜ ಚಿದಾನಂದ ಮತ್ತು ಶ್ರೀಲತಾ ರವರ ಪುತ್ರ ಮತ್ತು ಪುತ್ತೂರು ವಿವೇಕಾನಂದ ಇಂಗ್ಲೀಷ್ ಮೀಡಿಯಂ ಮತ್ತು ಸತ್ಯಸಾಯಿ ಅಳಿಕೆಯ ಹಿರಿಯ ವಿದ್ಯಾರ್ಥಿ.