ಬಡಗನ್ನೂರು: ಕುಂಬ್ರ ಸ.ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ವೈ ಕೃಷ್ಣ ನಾಯ್ಕ ಪಟ್ಟೆ (72 ವ) ಹೃದಯಾಘಾತದಿಂದ ನಿಧನ ಹೊಂದಿದರು.
ಅವರು ಸ.ಹಿ.ಪ್ರಾ.ಶಾಲೆ ಬಡಗನ್ನೂರು, ಸ.ಹಿ.ಪ್ರಾ ಶಾಲೆ ಪಡುಮಲೆ , ಹಾಗೂ ಪಾಪೆಮಜಲು ಸ.ಹಿ.ಪ್ರಾ. ಶಾಲೆ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಕುಂಬ್ರ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಯಾಗಿ, ತದನಂತರ ಕುಂಬ್ರ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಪಡುಮಲೆ ಮಾರಾಟಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಧಾರ್ಮಿಕ, ಸಾಮಾಜಿಕ ,ಶೈಕ್ಷಣಿಕ ರಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಊರಿನ ಜನರ ಪ್ರೀತಿ ಪಾತ್ರರಾಗಿದ್ದರು.
ಮೃತರು, ಪತ್ನಿ ಪಟ್ಟೆ ಶ್ರೀಕೃಷ್ಣ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಯಮುನಾ ವೈ.ಕೆ ನಾಯ್ಕ ಹಾಗೂ ಕುಟುಂಬಸ್ಥರನ್ನು ಮತ್ತು ಅಪಾರ ಬಂಧು ವಿತ್ರರರನ್ನು ಅಗಲಿದ್ದಾರೆ.