ಇಂದಿನ ಕಾರ್ಯಕ್ರಮ (20/01/2025)

0
  • ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪುತ್ತೂರು ತಾಲೂಕು ಪಂಚಾಯತ್, ಪುತ್ತೂರು ನಗರಸಭೆ ಸಹಯೋಗದಲ್ಲಿ ನಗರ, ಗ್ರಾ.ಪಂ ಮಟ್ಟದ ಸ್ವಚ್ಛತಾ ಶ್ರಮದಾನ ಅಭಿಯಾನದ ಪೂರ್ವ ಸಿದ್ಧತಾ ಸಭೆ
  • ಇಡಬೆಟ್ಟು ಕಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕುರಿಯ ೧ನೇ ವಾರ್ಡ್, ಕುರಿಯ ಮಾವಿನಕಟ್ಟೆ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ೧೧.೩೦ಕ್ಕೆ ಕುರಿಯ ೨ನೇ ವಾರ್ಡ್, ಆರ್ಯಾಪು ಗ್ರಾ.ಪಂ ನೇತಾಜಿ ಸುಭಾಶ್ಚಂದ್ರ ಬೋಸ್ ಸಭಾಂಗಣದಲ್ಲಿ ಮಧ್ಯಾಹ್ನ ೨ಕ್ಕೆ ಆರ್ಯಾಪು ೫ನೇ ವಾರ್ಡ್‌ನ ವಾರ್ಡುಸಭೆ
  • ಬಿಳಿನೆಲೆ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ವಾರ್ಡುಸಭೆ
  • ಪಾಣಾಜೆ ಆರ್ಲಪದವು ಶ್ರೀ ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ೭.೨೮ರಿಂದ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ೧೦ರಿಂದ ಸಭಾ ಕಾರ್ಯಕ್ರಮ, ಮಧ್ಯಾಹ್ನ ಪಲ್ಲಪೂಜೆ, ಸಂಜೆ ೬.೩೦ರಿಂದ ಯಕ್ಷಗಾನ
  • ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ಉಳ್ಳಾಕುಲು ಮಾಡದಲ್ಲಿ ಮಕರ ತೋರಣ ಏರಿಸುವುದು, ಧ್ವಜಾರೋಹಣ, ತಂಬಿಲಗಳು, ಸಂಜೆ ೬ರಿಂದ ತೋರಣ ಒಪ್ಪಿಸುವುದು, ದೈವಗಳಿಗೆ ತಂಬಿಲಗಳು
  • ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ೭ಕ್ಕೆ ಕವಾಟೋದ್ಘಾಟನೆ, ಶ್ರೀ ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ಮಧ್ಯಾಹ್ನ ೧೨ಕ್ಕೆ ತುಲಾಭಾರ ಸೇವೆ, ಯಾತ್ರಾ ಹೋಮ, ರಾತ್ರಿ ೭ಕ್ಕೆ ಶ್ರೀ ದೇವರ ಬಲಿ ಹೊರಟು ಕಟ್ಟೆಪೂಜೆ, ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಉಳ್ಳಾಕುಲು, ಮೈಷಂತಾಯ, ಶ್ರೀ ವ್ಯಾಘ್ರಚಾಮುಂಡಿ ದೈವ (ಪಿಲಿಭೂತ)ದ ದೈವದ ಭಂಡಾರ ತೆಗೆಯುವುದು
  • ಮುಕ್ವೆ ರಹ್ಮಾನಿಯಾ ಜುಮಾ ಮಸೀದಿ ವಲಿಯುಲ್ಲಾಹಿ ದರ್ಗಾ ಶರೀಫ್ ಮರ್‌ಹೂಂ ಸಯ್ಯಿದ್ ಪಾಣಕ್ಕಾಡ್ ಪಿ.ಎಂ.ಎಸ್.ಎ ಪೂಕೋಯ ತಂಙಳ್ ನಗರದಲ್ಲಿ ಮುಕ್ವೆ ಮಖಾಂ ಉರೂಸ್
  • ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಉಗ್ರಾಣ ಮುಹೂರ್ತ, ಹಸಿರು ಹೊರೆಕಾಣಿಕೆ ಸಮರ್ಪಣೆ
  • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೫ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ೭ರಿಂದ ವಿಟ್ಲೋತ್ಸವ, ರಾತ್ರಿ ೭.೩೦ಕ್ಕೆ ಉತ್ಸವ, ಹೂತೇರು, ೮ರಿಂದ ಒರಿಯಾಂಡಲಾ ಸರಿಬೋಡು ನಾಟಕ
  • ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಮಹಾಗಣಪತಿ ಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ, ಸಂಜೆ ೫.೩೦ರಿಂದ ಸಾಂಸ್ಕೃತಿಕ ವೈಭವ, ರಾತ್ರಿ ೭.೩೦ಕ್ಕೆ ಮಹಾಪೂಜೆ, ೮ರಿಂದ ಕ್ಷೇತ್ರದ ಗುಳಿಗ ದೈವದ ನೇಮೋತ್ಸವ
  • ಆಲಂಕಾರು ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
  • ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ರಾಜಪಲ್ಕೆ, ಕೈಪ, ಬೋಳಾಜೆ, ಮೊಗಪ್ಪು, ನಿಡ್ಯ, ಪೇಟೆಮನೆಯಲ್ಲಿ ಭಜನೆ
  • ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೧೦.೩೦ರಿಂದ ನಿತ್ಯಬಲಿ, ದರ್ಶನ ಬಲಿ, ದೈವಗಳ ಭೇಟಿ, ಬಟ್ಟಲು ಕಾಣಕೆ, ಸಂಜೆ ೬.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ದೈವ ದೇವರುಗಳ ಭೇಟಿ, ಕಲಾಯಿ ರಥ ಕಟ್ಟೆಪೂಜೆ, ಚಾಮುಂಡಿ ದೈವದ ನೇಮ
  • ಸವಣೂರು ಯುವಕ ಮಂಡಲದಲ್ಲಿ ಮಧ್ಯಾಹ್ನ ೨ರಿಂದ ಕಾಣಿಯೂರು ಸವಣೂರು ರೈತ ಉತ್ಪಾದಕರ ಕಂಪೆನಿ ಕುದ್ಮಾರು ವತಿಯಿಂದ ಅಡಕೆ ಮತ್ತು ಕಾಳುಮೆಣಸು ಗಿಡಗಳ ಸಮಗ್ರ ನಿರ್ವಹಣೆ ಕಾರ್ಯಗಾರ


ಶುಭಾರಂಭ
ನೆಹರುನಗರ ಕೃಷ್ಣಕಮಲ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಬೆಳಿಗ್ಗೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ, ಉಚಿತ ಮಧುಮೇಹ, ರಕ್ತದೊತ್ತಡ ತಪಾಸಣಾ ಕ್ಯಾಂಪ್


ಗೃಹಪ್ರವೇಶ
ಬನ್ನೂರು ಆಲುಂಬುಡದಲ್ಲಿ ಅನುಗ್ರಹ ನಿಲಯದ ಗೃಹಪ್ರವೇಶ


ಶುಭವಿವಾಹ
ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪುತ್ತೂರು ಶೋಭಾ ಮತ್ತು ಸದಾಶಿವರವರ ಪುತ್ರ ಸುರೇಶ್ ಮತ್ತು ಕಾಸರಗೋಡು ಮಣ್ಣಿಪ್ಪಾಡಿ ಸುಜಾತ ಮತ್ತು ಬಿ.ಎಂ. ಕೃಷ್ಣರವರ ಪುತ್ರಿ ಸೌಜನ್ಯ ಕೆ, ರವರ ವಿವಾಹ

LEAVE A REPLY

Please enter your comment!
Please enter your name here