ಪುತ್ತೂರು: ತುರ್ಕಳಿಕೆ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ಇದರ ಉರೂಸ್ ಸಮಾರಂಭ ಜ.22 ರಿಂದ 26ರ ತನಕ ತುರ್ಕಳಿಕೆ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ತುರ್ಕಳಿಕೆ ಜಮಾಅತ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಆಲಿ ತುರ್ಕಳಿಕೆ ಮತ್ತು ತುರ್ಕಳಿಕೆ ಖತೀಬರಾದ ಅಬ್ದುಲ್ ಹಮೀದ ಸಖಾಫಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಇತಿಹಾಸ ಪ್ರಸಿದ್ಧ ತುರ್ಕಳಿಕೆ ಮಖಾಂ ಶರೀಫ್‌ನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಹಲವಾರು ಕರಾಮತ್ತಿನಿಂದ ಪ್ರಸಿದ್ದರಾದ ಹಜಾತುಲ್ ಹೆಸರಿನಲ್ಲಿ ವರ್ಷಂಪ್ರತಿ ಉರೂಸ್ ಆಚರಿಸಲಾಗುತ್ತಿದೆ. ಜ.22ರಂದು ಉದ್ಘಾಟನಾ ಸಮಾರಂಭ ಮತ್ತು ಪ್ರಾರ್ಥನಾ ಮಜ್ಲಿಸ್ ನಡೆಯಲಿದೆ. ಅಸ್ಸಯ್ಯಿದ್ ನೂರುಸ್ಸಾದಾತ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯರ್ ಅವರ ನೇತೃತ್ವದಲ್ಲಿ ತುರ್ಕಳಿಕೆ ಮುದರ್ರಿಸ್ ಮುಹಮ್ಮದ್ ಜುನೈದ್ ಸಖಾಫಿ ಅವರು ಉದ್ಘಾಟಿಸಲಿದ್ದಾರೆ. ಸುರಿಬೈಲು ಅಶ್‌ಅರಿಯ್ಯಾದ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಜ.23ಕ್ಕೆ ತುರ್ಕಳಿಕೆಯ ಗೌರವಾಧ್ಯಕ್ಷ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಅವರ ನೇತೃತ್ವದಲ್ಲಿ ತುರ್ಕಳಿಕೆ ಜುಮ್ಮಾ ಮಸ್ಜಿದ್‌ನ ಖತೀಬ ಅಬ್ದುಲ್ ಹಮೀದ್ ಸಖಾಫ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.24ರಂದು ಇರ್ಶಾದ್ ಸಖಾಫಿ ಅಲ್ ಅಝ್ಹರಿ ಮಲಪ್ಪುರಂ ಅವರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಜ.25ಕ್ಕೆ ಅಸ್ತ ಆದಿತ್ಯವಾರ ರಾತ್ರಿ ಮದನೀಯಂ ಮಜ್ಲಿಸ್ ನಡೆಯಲಿದೆ. ಅಸ್ಸಯ್ಯಿದ್ ಹಂಝ ಝಹ್ರಿ ತಂಙಳ್ ಕರ್ಪಾಡಿ ಅವರು ದುಆಃ ನೇತೃತ್ವ ವಹಿಸಲಿದ್ದು, ಅಬ್ದುಲ್ ಲತೀಫ್ ಸಖಾಪಿ ಕಾಂತಪುರಂ ಅವರು ಮದನೀಯಂ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ.
ಜ.26ಕ್ಕೆ ಉರೂಸ್ ಸಮಾರೋಪ ನಡೆಯಲಿದ್ದು, ಅಸ್ಯಯ್ಯಿದ್ ಅಬ್ದುರ್ರಹ್ಮಾನ್ ಮಸ್ಹೂದ್ ತಂಙಳ್ ಕೂರತ್ ಅವರು ಉದ್ಘಾಟಿಸಲಿದ್ದಾರೆ. ನೌಫಲ್ ಸಖಾಫಿ ಕಳಸ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಲಮಾಗಳು, ಉಮಾರಾ ನಾಯಕರು, ಸಂಘಟನಾ ನಾಯಕರು, ಧಾರ್ಮಿಕ, ರಾಜಕೀಯ ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಜಮಾಅತ್ ಅಧ್ಯಕ್ಷ ಅಯೂಬ್ ಟ.ಡಿ.ಎಸ್ ತುರ್ಕಳಿಕೆ, ಜಮಾಅತ್‌ನ ಕೋಶಾಧಿಕಾರಿ ಅಬ್ದುಲ್ ರಶೀದ್ ತುರ್ಕಳಿಕೆ
ಉಪಾಧ್ಯಕ್ಷ ಅಬ್ದುಲ್ ಲತೀಫ್ ಸಖಾಪಿ ಕೊಲ್ಯ ಉಪಸ್ಥಿತರಿದ್ದರು.